ಸುಂಟಿಕೊಪ್ಪ, ಮೇ ೧೪: ಇಲ್ಲಿನ ಸುಂಟಿಕೊಪ್ಪ ಫುಟ್ಬಾಲ್ ಯುವಕ ಸಂಘ ಬೆಂಗಳೂರಿನ ಫುಟ್ಬಾಲ್ ತಂಡದ ವಿರುದ್ಧ ೨-೦ ಗೋಲುಗಳಿಂದ ಜಯಗಳಿಸಿದೆ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಜಿ.ಆರ್.ಕೆ. ಫುಟ್ಬಾಲ್ ಕ್ಲಬ್ ಕುಶಾಲ ನಗರದ ಉದ್ಯಮಿಗಳು ನಿರ್ಮಿಸಿದ ಕೊಪ್ಪ ಟರ್ಫ್ ಮೈದಾನದಲ್ಲಿ ಆಯೋಜಿಸಿದ ೧೩ ವಯಸ್ಸಿನ ಕೆಳಗಿನ ಯುವಕರ ಪ್ರದರ್ಶನ ಫುಟ್ಬಾಲ್ ಸೆವೆನ್ಸ್ ಪಂದ್ಯಾಟದಲ್ಲಿ ಸುಂಟಿಕೊಪ್ಪ ಫುಟ್ಬಾಲ್ ಯುವಕ ಸಂಘ ೩-೨ ಗೋಲುಗಳಿಂದ ಬೆಂಗಳೂರಿನ ಫುಟ್ಬಾಲ್ ತಂಡವನ್ನು ಮಣಿಸಿ ಕಪ್ ತನ್ನದಾಗಿಸಿಕೊಂಡಿತು. ದಾನಿಗಳಾದ ರಿಯಾಜ್ ಟ್ರೋಫಿಯನ್ನು ವಿಜೇತರಿಗೆ ವಿತರಿಸಿದರು.

ಈ ಸಂದರ್ಭ ತರಬೇತುದಾರ ನಿಷಾದ್ ಹಾಜರಿದ್ದರು. ಈ ಪಂದ್ಯಾಟದಲ್ಲಿ ೪ ಯುವಕರು ಮನೋಜ್, ರುಮಾನ್, ಶಿಭಾನ್ ರಾಸಿಕ್ ಜಿ.ಆರ್.ಕೆ. ಫುಟ್ಬಾಲ್ ಕ್ಲಬ್ ಪರ ಆಡಲು ಆಯ್ಕೆಗೊಂಡಿದ್ದಾರೆ.