ಸೋಮವಾರಪೇಟೆ, ಮೇ ೧೪ : ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಡಳಿತದ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಮೀಸಲಾತಿಯತ್ತ ಸದಸ್ಯರುಗಳ ಚಿತ್ತ ನೆಟ್ಟಿದೆ.

ಕಳೆದ ೦೩.೧೧.೨೦೨೦ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಇದೀಗ ೩೦ ತಿಂಗಳ ಅವಧಿ ಪೂರ್ಣಗೊಂಡಿರುವುದರಿAದ ಈರ್ವರ ಅಧಿಕಾರ ಮುಕ್ತಾಯ ಕಂಡಿದೆ.

ಪ್ರಸಕ್ತ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಪಿ.ಕೆ. ಚಂದ್ರು ಹಾಗೂ ಉಪಾಧ್ಯಕ್ಷರಾಗಿ ಬಿ. ಸಂಜೀವ ಅವರುಗಳು ಸೇವೆ ಸಲ್ಲಿಸುತ್ತಿದ್ದು, ತಾ. ೩.೦೫.೨೦೨೩ಕ್ಕೆ ಇವರ ಅಧಿಕಾರದ ಅವಧಿ ಪೂರ್ಣಗೊಂಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಉಳಿದಿರುವ ಮುಂದಿನ ಅವಧಿಗೆ ನೂತನವಾಗಿ ಮೀಸಲಾತಿ ಪ್ರಕಟಗೊಳ್ಳಬೇಕಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಪ್ರಸಕ್ತ ಸಾಲಿನ ಪ್ರಥಮ ಅವಧಿಗೆ (೩೦ ತಿಂಗಳು) ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಎ. ಗೆ ಮೀಸಲುಗೊಳಿಸಲಾಗಿತ್ತು. ಅದರಂತೆ ತಾ. ೩.೧೧.೨೦೨೦ರಂದು ಹಿರಿಯ ಸದಸ್ಯರಾಗಿದ್ದ ಬಿಜೆಪಿಯ ನಳಿನಿ ಗಣೇಶ್ ಅವರು ಅಧ್ಯಕ್ಷರಾಗಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಜೀವ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

ಕ್ರಿಯಾಶೀಲ ಅಧ್ಯಕ್ಷೆಯಾಗಿದ್ದ ನಳಿನಿ ಗಣೇಶ್ ಅವರು ಕೋವಿಡ್‌ಗೆ ೩.೦೫.೨೦೨೩ಕ್ಕೆ ಇವರ ಅಧಿಕಾರದ ಅವಧಿ ಪೂರ್ಣಗೊಂಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಉಳಿದಿರುವ ಮುಂದಿನ ಅವಧಿಗೆ ನೂತನವಾಗಿ ಮೀಸಲಾತಿ ಪ್ರಕಟಗೊಳ್ಳಬೇಕಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಪ್ರಸಕ್ತ ಸಾಲಿನ ಪ್ರಥಮ ಅವಧಿಗೆ (೩೦ ತಿಂಗಳು) ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಎ. ಗೆ ಮೀಸಲುಗೊಳಿಸಲಾಗಿತ್ತು. ಅದರಂತೆ ತಾ. ೩.೧೧.೨೦೨೦ರಂದು ಹಿರಿಯ ಸದಸ್ಯರಾಗಿದ್ದ ಬಿಜೆಪಿಯ ನಳಿನಿ ಗಣೇಶ್ ಅವರು ಅಧ್ಯಕ್ಷರಾಗಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಜೀವ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

ಕ್ರಿಯಾಶೀಲ ಅಧ್ಯಕ್ಷೆಯಾಗಿದ್ದ ನಳಿನಿ ಗಣೇಶ್ ಅವರು ಕೋವಿಡ್‌ಗೆ (ಮೊದಲ ಪುಟದಿಂದ) ೨೦೨೦ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದು, ಇದರಲ್ಲಿ ಕಾಂಗ್ರೆಸ್ ೪ ಹಾಗೂ ಜೆಡಿಎಸ್ ೩ ಸೇರಿದಂತೆ ಒಟ್ಟು ೭ ಸದಸ್ಯರಿದ್ದರು. ಬಿಜೆಪಿಯಿಂದ ಮೂವರು ಹಾಗೂ ಪಕ್ಷೇತರರಾಗಿ ಓರ್ವರು ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿ ಶುಭಕರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಬಿಜೆಪಿಯ ಸಂಖ್ಯಾಬಲ ೪ಕ್ಕೇರಿತ್ತು.

ಆದರೆ ಮೀಸಲಾತಿ ಬಿಜೆಪಿ ಪರ ಇದ್ದುದರಿಂದ ಬಿಜೆಪಿಯವರೇ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.

ಈ ಮಧ್ಯೆ ಕಾಂಗ್ರೆಸ್ ಸದಸ್ಯರಾಗಿದ್ದ ಉದಯಶಂಕರ್ ಹಾಗೂ ಬಿಜೆಪಿಯ ನಳಿನಿ ಗಣೇಶ್ ಅವರುಗಳು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಎರಡೂ ಪಕ್ಷಗಳಲ್ಲಿ ಒಂದು ಸ್ಥಾನ ಕಡಿಮೆಯಾಗಿತ್ತು.

ಈ ಎರಡೂ ವಾರ್ಡ್ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಮೃತ್ಯುಂಜಯ ಹಾಗೂ ಮೋಹಿನಿ ಅವರುಗಳು ಜಯ ಸಾಧಿಸಿದ್ದರಿಂದ ಬಿಜೆಪಿಯ ಸಂಖ್ಯಾಬಲ ೫ಕ್ಕೆ ಏರಿಕೆಯಾಯಿತು. ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಜೀವನ್ ಮತ್ತು ನಾಗರತ್ನ ಅವರುಗಳು ಪ್ರಸ್ತುತದ ಸನ್ನಿವೇಶದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದು, ಆ ಮೂಲಕ ಪಟ್ಟಣ ಪಂಚಾಯಿತಿ ಯಲ್ಲಿ ಬಿಜೆಪಿ ತನ್ನ ಸಂಖ್ಯಾಬಲವನ್ನು ೭ಕ್ಕೆ ಹಿಗ್ಗಿಸಿಕೊಂಡಿದೆ.

ಪ್ರಸ್ತುತ ಪಟ್ಟಣ ಪಂಚಾಯಿತಿ ಯಲ್ಲಿ ಬಿಜೆಪಿ ೭, ಜೆಡಿಎಸ್ ೧, ಕಾಂಗ್ರೆಸ್ ೩ ಸ್ಥಾನಗಳನ್ನು ಹೊಂದಿದ್ದು, ಮುಂದಿನ ಮೀಸಲಾತಿಯ ಮೇಲೆ ಅಧ್ಯಕ್ಷ-ಉಪಾಧ್ಯಕ್ಷ ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

ಮೀಸಲಾತಿಯಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಪ್ರಮುಖ ವಾಗಿರುವುದರಿಂದ ರಾಜ್ಯದಲ್ಲಿ ಯಾವ ಸರ್ಕಾರ ರಚನೆಯಾಗಲಿದೆ ಎಂಬುದೂ ಸಹ ಇಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.

- ವಿಜಯ್ ಹಾನಗಲ್