ಮಡಿಕೇರಿ, ಮೇ ೧೪: ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪ.ಪೂ. ಕಾಲೇಜು ಕೋರಂಗಾಲ (ಭಾಗಮಂಡಲ) ಮಡಿಕೇರಿ ತಾಲೂಕಿಗೆ ಪ್ರಥಮ ಪಿಯುಸಿ ತರಗತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ/ಸಿ೧ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ ರೂ. ೨.೫೦ ಲಕ್ಷ ಮತ್ತು ೨ಎ, ೨ಬಿ, ೩ಎ ಮತ್ತು ೩ಬಿ ಇವರ ಪೋಷಕರ ವಾರ್ಷಿಕ ವರಮಾನ ರೂ. ೧ ಲಕ್ಷ, ಆಗಿರಬೇಕು. ಉಚಿತ ಊಟ, ವಸತಿ ಸೌಲಭ್ಯ ಹಾಗೂ ನೋಟ್‌ಬುಕ್ ಪುಸ್ತಕ ಮತ್ತಿತರ ಸೌಲಭ್ಯಗಳು ಇರುತ್ತದೆ.

ಅರ್ಜಿಯನ್ನು ಹತ್ತಿರದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ್/ ಇಂದಿರಾ ಗಾಂಧಿ ವಸತಿ ಶಾಲೆಗಳಿಂದ ಪಡೆದು ಅಥವಾ hಣಣಠಿs://ಞಡಿeis.ಞಚಿಡಿಟಿಚಿಣಚಿಞಚಿ.gov.iಟಿ/ ಇಲ್ಲಿಂದ ಡೌನ್‌ಲೋಡ್ ಮಾಡಿಕೊಂಡು ಅದೇ ಶಾಲೆಯಲ್ಲಿ ಅಥವಾ ಈ ಕಾಲೇಜಿಗೆ ಬಂದು ಅರ್ಜಿ ಸಲ್ಲಿಸಬಹುದು. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ೯೬೧೧೩೦೭೬೪೬-ಲೋಕೇಶ್ (ಪ್ರಾಂಶುಪಾಲರು), +೯೧೮೨೧೭೦೯೦೧೧೮-ದೀಪಕ್ (ನಿಲಯ ಮೇಲ್ವಿಚಾರಕರು) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.