ಕಣಿವೆ, ಮೇ ೧೩: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ನಂಜುAಡೇಶ್ವರ ಹಾಗೂ ದೇವೀರಮ್ಮ ದೇವಾಲಯದ ವಾರ್ಷಿಕ ಪೂಜೋತ್ಸವ ತಾ. ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪೂಜೋತ್ಸವದ ಎರಡನೇ ದಿನವಾದ ತಾ. ೧೬ ರಂದು ಅರಸೀಕೆರೆಯ ಕೋಡಿ ಮಠದ ಶ್ರೀಗಳು, ವೀರಾಜಪೇಟೆಯ ಅರಮೇರಿ ಕಳಂಚೇರಿ ಶ್ರೀಗಳು ಹಾಗೂ ದಿಂಡಗಾಡು ಮಠದ ಶ್ರೀಗಳ ದಿವ್ಯಸಾನಿಧ್ಯದಲ್ಲಿ ದೇವಾಲಯದ ಕೆಂಡೋತ್ಸವ ಪೂಜಾ ವಿಧಿಗಳು ಜರುಗಲಿವೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನಕುಮಾರ್ ಕೋರಿದ್ದಾರೆ.