ಕೂಡಿಗೆ, ಮೇ ೧೩: ಕೇರಳದ ತಿರುವನಂತಪುರAನಲ್ಲಿ ನಡೆದ ಸೌತ್ ಇಂಡಿಯನ್ ಇನ್ವಿಟೇಷನ್ ಕರಾಟೆ ಚಾಂಪಿಯನ್ ಶಿಪ್‌ನ ಕುಮಿತೆ ವಿಭಾಗದಲ್ಲಿ ಕುಶಾಲನಗರದ ಅಭಯ್ ಕರ್ಕೆರ ಚಿನ್ನದ ಪದಕ, ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾನೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ಹಾಗೂ ಸೌಮ್ಯ ಅವರ ಪುತ್ರ ಅಭಯ್‌ಗೆ ಕುಶಾಲನಗರದ ಕೊಫುಕಾನ್ ಶಿಟಾರಿಯೋ ಶಾಲೆಯ ಇಕ್ಬಾಲ್ ತರಬೇತಿ ನೀಡಿದ್ದಾರೆ