ಚೆಟ್ಟಳ್ಳಿ, ಮೇ ೧೩: ಮಡಿಕೇರಿಯಲ್ಲಿ ತಾ. ೨೦ ರಂದು ನಡೆಯಲಿರುವ ಕೊಡವ ಯುವ ಮೇಳ ಸಂಬAಧ ಕೊಡವ ರೈಡರ್ಸ್ ಕ್ಲಬ್ ಬೈಕ್ ಜಾಥಾ ನಡೆಯಲಿದೆ ಎಂದು ಕ್ಲಬ್‌ನ ಸಂಚಾಲಕ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ತಿಳಿಸಿದ್ದಾರೆ.
ಜಬ್ಬೂಮಿ ಬಾಳೋ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾ. ೨೦ ರಂದು ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ನಲ್ಲಿ ಆಯೋಜಿಸಿರುವ ಕೊಡವ ಯುವ ಮೇಳಕ್ಕೆ ಸಿದ್ಧತೆಗಳು ನಡೆಯುತ್ತಿದ್ದು ಕೊಡಗಿನ ಹಲವು ಸಂಘ-ಸAಸ್ಥೆಗಳು ಬೆಂಬಲ ಸೂಚಿಸಿವೆ. ಕೊಡವ ರೈಡರ್ಸ್ ಕ್ಲಬ್‌ನ ಸುಮಾರು ೫೦ಕ್ಕೂ ಹೆಚ್ಚು ಸದಸ್ಯರು ಕೊಡವ ಉಡುಪಿನೊಂದಿಗೆ ಪೂರ್ವಾಹ್ನ ೯.೩೦ಕ್ಕೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಯ ಬಳಿ ಸೇರಿ ೧೦.೩೦ ಗಂಟೆಗೆ ಗದ್ದುಗೆಯಿಂದ ಹೊರಡುವ ಕೊಡವ ಯುವ ಮೇಳದ ಮೆರವಣಿಗೆಯಲ್ಲಿ ಬೈಕ್ ಸವಾರಿಯ ಮೂಲಕ ಪಾಲ್ಗೊಳ್ಳಲಿದ್ದಾರೆ.