ಮುಳ್ಳೂರು, ಮೇ ೧೩: ಸಮೀಪದ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ದಾದಿಯರ ದಿನಾಚರಣೆ ಸಂಭ್ರಮದಿAದ ನಡೆಯಿತು. ಆಸ್ಪತ್ರೆ ಸಭಾಂಗಣದಲ್ಲಿ ಆಸ್ಪತ್ರೆಯ ದಾದಿ ಯರು ಮೇಣದ ಹಣತೆಯನ್ನು ಹಚ್ಚುವ ಮೂಲಕ ಆಚರಿಸಿದರು.
ದಿನದ ಮಹತ್ವ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಮಾತನಾಡಿ, ದಾದಿಯರು ಆರೋಗ್ಯ ಇಲಾಖೆಯ ಬೆನ್ನೆಲುಬು. ವೃತ್ತಿಯಲ್ಲಿ ದೇವರು ನಿಮಗೆ ಕೊಟ್ಟ ವರವಿದ್ದಂತೆ. ಸಮಾಜ ಮತ್ತು ಆರೋಗ್ಯ ಸೇವೆ ಮಾಡಲು ಆರೋಗ್ಯ ಇಲಾಖೆ ಮೂಲಕ ಅವಕಾಶ ಮಾಡಿಕೊಟ್ಟಿದೆ ಎಂದರು. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯರು ಆರೋಗ್ಯ ಇಲಾಖೆಯ ಹೆಮ್ಮೆಯ ಜೊತೆಯಲ್ಲಿ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ದಿಸೆಯಲ್ಲಿ ನಿಮಗೆ ಆರೋಗ್ಯ ನೆಮ್ಮದಿ ನೀಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿ ಹಾಜರಿದ್ದರು.