ಮಡಿಕೇರಿ, ಮೇ ೧೩: ಸಿರಿಗನ್ನಡ ವೇದಿಕೆ ಕೊಡಗು, ಸಿರಿಗನ್ನಡ ವೇದಿಕೆ ಮಹಿಳಾ ಘಟಕ, ಪೊನ್ನಂಪೇಟೆ ತಾಲೂಕು ಘಟಕದ ಆಶ್ರಯದಲ್ಲಿ "ಅಂರ್ರಾಷ್ಟಿçÃಯ ಕಾರ್ಮಿಕರ ದಿನಾಚರಣೆಯ ಮಹತ್ವ" ಎಂಬ ವಿಷಯದ ಪ್ರಯುಕ್ತ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಕಿರು ಪ್ರಬಂಧ ಸ್ಪರ್ಧೆಯಲ್ಲಿ ಕಿಗ್ಗಾಲು ಎಸ್. ಗಿರೀಶ್ ಪ್ರಥಮ ಸ್ಥಾನ, ಮೊಣ್ಣಂಡ ಶೋಭ ಸುಬ್ಬಯ್ಯ ದ್ವಿತೀಯ ಸ್ಥಾನ, ವೈಲೇಶ್. ಪಿ.ಎಸ್. ತೃತೀಯ ಸ್ಥಾನ ಗಳಿಸಿದ್ದಾರೆ. ಹೆಚ್.ಎಸ್. ಮಾಯಮ್ಮ ನರಸಿಂಹಮೂರ್ತಿ ಅವರುಗಳ ಬರಹಗಳು ಅತ್ಯುತ್ತಮ ಹಾಗೂ ಸಿದ್ದರಾಜು ಬೆಳ್ಳಯ್ಯ, ಡಾ. ಸರೋಜ, ಮುಕ್ಕಾಟಿ ಹರಿಣಿ ಗಿರೀಶ್, ಬಿ.ಕೆ. ಸಂಧ್ಯಾರಾಣಿ ಅವರುಗಳ ಬರಹಗಳು ಉತ್ತಮ ಎಂಬ ಮೆಚ್ಚುಗೆಗೆ ಪಾತ್ರವಾದವು. ಸ್ಪರ್ಧೆಗೆ ರಾಜ್ಯದ ಕವಿಗಳ ಇಪ್ಪತ್ತು ಕಿರು ಪ್ರಬಂಧಗಳು ಬಂದಿದ್ದು, ಉಳುವಂಗಡ ಕಾವೇರಿ ಉದಯ ತೀರ್ಪುಗಾರಿಕೆ ನೀಡಿದ್ದಾರೆ ಎಂದು ಸಿರಿಗನ್ನಡ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.