ಸುಂಟಿಕೊಪ್ಪ, ಮೇ ೧೩: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿ ವಾರ್ಷಿಕೋತ್ಸವ ತಾ. ೭ ರಂದು ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೆöÊಸ್ತ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ವಾರ್ಷಿಕೋತ್ಸವ ಅಂಗವಾಗಿ ತಾ. ೪ ರಂದು ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರುಗಳಾದ ವಿನಯ್ ಕುಮಾರ್ ವಿಶೇಷ ಪ್ರಭೋದನೆ ಮತ್ತು ಬಲಿಪೂಜೆಯನ್ನು ಸಮರ್ಪಿಸಿದರು. ಧ್ವಜಾರೋಹಣ ನೆರವೇರಿಸುವ ಮೂಲಕ ಬಲಿಪೂಜೆ ಯನ್ನು ಅರ್ಪಿಸುವ ಮೂಲಕ ದೇವಾಲಯದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.
ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾದಿಗಳು ಸಲ್ಲಿಸಿದರು. ಭಾನುವಾರ ಸಂಜೆ ೫.೩೦ಕ್ಕೆ ಸಂತ ಅಂತೋಣಿಯವರ ದೇವಾಲಯದಲ್ಲಿ ಹಬ್ಬದ ಅಡಂಬರ ಗಾಯನ ಬಲಿಪೂಜೆ ಮತ್ತು ಪರಮಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಶೇಷ್ಠ ಗುರುಗಳಾದ ರೆವರೆಂಡ್ ಅಲ್ಪೆçಡ್ ಜಾನ್ ಮೆಂಡೋನ್ಸಾ, ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಫಾಧರ್ ದೀಪಕ್ ಒಗ್ಗೂಡಿ ನೆರವೇರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಒಳಾಂಗಣವನ್ನು ಬಣ್ಣ ಹೂಗಳು, ಬಂಟಿAಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.
ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆಯ ಚಾರ್ಲ್ಸ್ ನರೋನ, ಪೌಲ್ ಹೇರ್ಸ, ೭ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ. ಸುನಿಲ್, ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ಫಾ. ಮಾರ್ಟಿನ್, ಮಡಿಕೇರಿ ಸಂತ ಮೈಕಲರ ದೇವಾಲಯದ ಸಹಾಯಕ ಗುರುಗಳಾದ ಫಾ. ನವೀನ್ ಬಾಲಕುಮರ್, ಜಾನ್ ಪೌಲ್, ಅಲ್ಫೆರ್ಡ್ ಪಿಂಠೋ, ಪಾಧರ್ ರೇಗನ್, ಸಂತೋಷ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ಅರುಳ್ ಸೇಲ್ವಕುಮಾರ್ ಮತ್ತಿತರರು ಇದ್ದರು.
ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಮೂರ್ತಿಯನ್ನು ಇರಿಸಿ ವಾದ್ಯಗೋಷ್ಠಿ, ಕೇರಳದ ಚಂಡೆಮೇಳದೊAದಿಗೆ ಧರ್ಮಗುರುಗಳು, ಕ್ರೆöÊಸ್ತ ಸನ್ಯಾಸಿನಿಯರು ಮತ್ತು ಸುಂಟಿಕೊಪ್ಪ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ಕ್ರೆöÊಸ್ತ ಬಾಂಧವರು ಪ್ರಾರ್ಥನೆ ಗಾಯನಗಳೊಂದಿಗೆ ಹಾಡುತ್ತ ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು.
ನಗರದ ಇಕ್ಕೆಲಗಳಲ್ಲಿ ಹಬ್ಬದ ವಾತಾವರಣವು ಕಳೆಕಟ್ಟಿದ್ದು, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಮೆರವಣಿಗೆಯ ವೈಭವವನ್ನು ಕಣ್ಣುತುಂಬಿಕೊAಡರು.