ಮಡಿಕೇರಿ, ಮೇ ೧೩: ಕೈಕೇರಿ ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡುತ್ತಿರುವ ಮಂಜು ಅವರ ಪುತ್ರಿ ಸುಪ್ರಿಯಾ ಎಂ. (೧೦) ಕಾಣೆಯಾಗಿರುವುದಾಗಿ ಮಗುವಿನ ತಾಯಿ ವೀರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಏಪ್ರಿಲ್ ೨೨ ರಂದು ಅಮ್ಮತ್ತಿ ಒಂಟಿಯAಗಡಿಯ ತನ್ನ ಸಹೋದರನ ಮನೆಯಿಂದ ಸುಪ್ರಿಯಾ ನಾಪತ್ತೆಯಾಗಿರುವುದಾಗಿ ಮಗುವಿನ ತಾಯಿ ದೂರು ನೀಡಿದ್ದಾರೆ. ಮಗುವಿನ ಬಗ್ಗೆ ಮಾಹಿತಿ ಇದ್ದಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆ - ೯೪೮೦೮೦೪೯೫೬ ಅನ್ನು ಸಂಪರ್ಕಿಸುವAತೆ ಕೋರಲಾಗಿದೆ.