ಕೂಡಿಗೆ, ಮೇ ೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಹೆಚ್.ಕೆ. ಮೋಹನ್ (೭೦) ಎಂಬವರು ಬ್ಯಾಡಗೊಟ್ಟದಿಂದ ಕೂಡಿಗೆ ಕಡೆಗೆ ಬರುವ ಸಂದರ್ಭದಲ್ಲಿ ಮದಲಾಪುರದ ಹತ್ತಿರ ಮಹಿಳೆಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ದುರ್ಮರಣ ಹೊಂದಿದ್ದಾರೆ.
ಪ್ರಥಮ ಚಿಕಿತ್ಸೆಯನ್ನು ಕುಶಾಲನಗರದಲ್ಲಿ ನೀಡಿ ನಂತರ ಮೈಸೂರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮೃತ ಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.