ವೀರಾಜಪೇಟೆ, ಮೇ ೧೩: ಕಾಕೋಟುಪರಂಬು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಪುರುಷ ಹಾಗೂ ಮಹಿಳೆಯರಿಗೆ ತಾ. ೧೯ ರಿಂದ ೨೧ ರವರೆಗೆ ಜಿಲ್ಲಾಮಟ್ಟದ ಎರಡನೇ ವರ್ಷದ ಹಿಂದೂ ಕಪ್ ಷಟಲ್ ಪಂದ್ಯಾಟ ಏರ್ಪಡಿಸಲಾಗಿದೆ. ತಾ. ೨೧ ರಂದು ಸಂಜೆ ೬ ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ ಎಂದು ಕ್ಲಬ್ನ ಅಧ್ಯಕ್ಷ ಮೇವಡ ಚಿಣ್ಣಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೦೮ ರಲ್ಲಿ ಪ್ರಾರಂಭಗೊAಡ ಕ್ಲಬ್ ಉತ್ತಮ ಜನಪರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ೨೦೧೩ ರಿಂದ ೨೦೧೯ ರವರೆಗೆ ಜಿಲ್ಲಾಮಟ್ಟದ ಹಾಕಿ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇದೆ. ಯುವ ಪೀಳಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳೆದ ವರ್ಷ ರೂ. ೩೦ ಲಕ್ಷ ವೆಚ್ಚದಲ್ಲಿ ವುಡನ್ ಷಟಲ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಪಂದ್ಯಾಟವನ್ನು ಪುರುಷ ಕ್ರೀಡಾಪಟುಗಳ ವಿವಿಧ ವಯೋಮಿತಿಯ ಆಧಾರದ ಮೇಲೆ ಡಬಲ್ಸ್ ಹಾಗೂ ಸಿಂಗಲ್ಸ್ ಹಾಗೂ ಮುಕ್ತ ೪ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಕಳೆದ ಬಾರಿ ನಡೆಸಿದ ಪಂದ್ಯಾಟದಿAದ ಉತ್ತಮ ಸ್ಪಂದನ ದೊರೆತಿದೆ ಎಂದು ಹೇಳಿದರು.
ಕಾರ್ಯದರ್ಶಿ ಅಮ್ಮಂಡಿರ ಚೇತನ್ ಮಾತನಾಡಿ, ಪಂದ್ಯಾಟದ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ತಾ. ೧೫ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸಮಾರೋಪ ಸಮಾರಂಭ ಫೈನಲ್ ಪಂದ್ಯಾಟದ ನಂತರ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಮೇವಡ ಚಿಣ್ಣಪ್ಪ ವಹಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸದಸ್ಯ ಮಂಡೇಪAಡ ದಿನೇಶ್ ಉಪಸ್ಥಿತರಿದ್ದರು.