ಚೆಯ್ಯಂಡಾಣೆ, ಮೇ ೧೩ : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ೬ನೇ ವರ್ಷದ ಫುಟ್ಬಾಲ್ ಟ್ರೋಫಿ ಪಂದ್ಯಾಟ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿದೆ.

ತಾ. ೧೪ರಂದು (ಇಂದು) ಸೆಮಿಫೈನಲ್ ಪಂದ್ಯದಲ್ಲಿ ಬಡುವಂಡ್ರ ಹಾಗೂ ಪೊನ್ನಚನ, ಪೊಕ್ಕುಳಂಡ್ರ ಹಾಗೂ ಕಟ್ಟೆಮನೆ ತಂಡಗಳು ಸೆಣಸಾಡಲಿವೆ. ಇದರಲ್ಲಿ ವಿಜೇತರಾಗುವ ತಂಡ ಫೈನಲ್‌ನಲ್ಲಿ ಆಡÀಲಿದೆ.

ಬೆಳಿಗ್ಗೆ ೯.೩೦ಕ್ಕೆ ಮೊದಲ ಸೆಮಿಫೈನಲ್ ಪಂದ್ಯವನ್ನು ಪೊಕ್ಕುಳಂಡ್ರ ಧನೋಜ್ ಹಾಗೂ ತೋಟಂಬೈಲು ಅನಂತ್ ಕುಮಾರ್ ಉದ್ಘಾಟಿಸಲಿದ್ದಾರೆ.

ಮತ್ತೊಂದು ಸೆಮಿಫೈನಲ್ ಪಂದ್ಯವನ್ನು ೧೦.೩೦ ಗಂಟೆಗೆ ಕೋಚನ ಲವಿನ್ ಹಾಗೂ ಮಾಳಿಗೆ ಮನೆ ದೇವಯ್ಯ ಉದ್ಘಾಟಿಸಲಿದ್ದಾರೆ.

ಫೈನಲ್ ಪಂದ್ಯದ ಉದ್ಘಾಟನೆಯನ್ನು ಮಾಜಿ ಏರ್ ಇಂಡಿಯಾ ಹಾಕಿ ಆಟಗಾರ್ತಿ ಬಾಕಿಲನ ವನಿತಾ ವಿಜಯ್ ನೆರವೇರಿ ಸಲಿದ್ದಾರೆ.

ಗೌಡ ಫುಟ್ಬಾಲ್ ಕಪ್ : ಇಂದು ಫೈನಲ್

(ಮೊದಲ ಪುಟದಿಂದ) ಯೂನಿಟಿ ಕಪ್ ಫೈನಲ್ ಪಂದ್ಯ ಕೂಡ ಇಂದು ನಡೆಯಲಿದ್ದು, ಯೂನಿಟಿ ಕಪ್ ಫೈನಲ್ ಪಂದ್ಯವನ್ನು ದೇಲಂಪಾಡಿ ಗಣೇಶ್ ಹಾಗೂ ಕಟ್ಟೆಮನೆ ದಿನೇಶ್ ಉದ್ಘಾಟಿಸಲಿದ್ದಾರೆ.ಯೂನಿಟಿ ಕಪ್ ಫೈನಲ್ ಪಂದ್ಯ ಅರೆಕಾಡು ಫ್ರೆಂಡ್ಸ್ v/s ಮಲ್ಲು ಬಾಯ್ಸ್ (೧೧.೩೦ ಕ್ಕೆ) ತಂಡಗಳ ನಡುವೆ ನಡೆಯಲಿದೆ.

ಸಮಾರೋಪ ಸಮಾರಂಭ : ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ಅಧ್ಯಕ್ಷ ಬಡುವಂಡ್ರ ದುಷ್ಯಂತ್ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಗೌಡ ಸಮಾಜ ಅಧ್ಯಕ್ಷ ಕೇಕಡ ನಾಣಯ್ಯ, ಅಂಬೆಕಲ್ ನವೀನ್, ಕಟ್ಟೆಮನೆ ಪ್ರೇಮ ಗಣೇಶ್, ಕೋಚನ ಅನುಪ್, ಕಟ್ಟೆಮನೆ ಜನಾರ್ದನ, ಬಾಡನ ಚಿತ್ರ, ಕೆದಂಬಾಡಿ ಚಂದ್ರಕಲಾ ಮತ್ತಿತರರು ಭಾಗವಹಿಸಲಿದ್ದಾರೆ.