ಮಡಿಕೇರಿ, ಮೇ ೧೩: ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಷ್ಟಿçÃಯ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು ೨೨೪ ಸ್ಥಾನಗಳ ಪೈಕಿ ೧೩೬ ಸ್ಥಾನವನ್ನು ಗಳಿಸುವ ಮೂಲಕ ಅತ್ಯಂತ ಹಳೆಯ ರಾಷ್ಟಿçÃಯ ಪಕ್ಷವಾಗಿರುವ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಇದುವರೆಗೆ ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಾರ್ಟಿ ಕೇವಲ ೬೫ ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಇಳಿದಿದೆ.

ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ೧೩೬ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಆಡಳಿತ ನಡೆಸಿದ್ದ ಬಿಜೆಪಿ ಪಕ್ಷ ೬೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಪ್ರಾದೇಶಿಕ ಪಕ್ಷವಾಗಿರುವ ಜಾತ್ಯತೀತ ಜನತಾದಳ ೧೯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಪಕ್ಷೇತರರು ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ‘ಗ್ಯಾರಂಟಿ ಕಾರ್ಡ್’ ಭರವಸೆಯ ಮೂಲಕ ಚುನಾವಣೆ ಎದುರಿಸಿದ ಕಾಂಗ್ರೆಸ್ ಪಕ್ಷ ಮತದಾರರಿಂದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಕ್ಷದ ನಾಯಕರುಗಳಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಗೆಲುವು ಸಾಧಿಸಿದ್ದರೆ, ಪ್ರಭಾವಿ ನಾಯಕರು, ಆಡಳಿತ ಪಕ್ಷದಲ್ಲಿ ಸಚಿವರುಗಳಾಗಿದ್ದವರು ಸೋಲನುಭವಿಸಿರುವುದು ಈ ಬಾರಿಯ ಚುನಾವಣೆಯ ವಿಶೇಷವಾಗಿದೆ. ರಾಜ್ಯದ ಜನರು ಅಳೆದು, ತೂಗಿ ತೀರ್ಪು ನೀಡಿರುವುದು ರಾಜ್ಯ ಚುನಾವಣೆಯ ಗಮನಾರ್ಹ ಅಂಶವಾಗಿದೆ.

ಚುನಾವಣೆ - ಪ್ರಮುಖ ಅಭ್ಯರ್ಥಿಗಳ ಫಲಿತಾಂಶ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಕೆಲ ಘಟಾನುಘಟಿಗಳ ಫಲಿತಾಂಶ ಕುತೂಹಲ ಮೂಡಿಸಿದ್ದು, ಕೆಲ ಹಾಲಿ ಸಚಿವರುಗಳೇ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಸಚಿವ ಆರ್. ಅಶೋಕ್ ೨ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆಲುವು ಸಾಧಿಸಿದರೆ, ಸಚಿವ ವಿ.ಸೋಮಣ್ಣ ೨ ಕ್ಷೇತ್ರಗಳಲ್ಲೂ ಸೋಲನುಭವಿಸಿದ್ದಾರೆ. ವಿಧಾನಸಭಾಪತಿ ಕಾಗೇರಿ, ಮುರುಗೇಶ್ ನಿರಾಣಿ, ಸಚಿವ ಶ್ರೀರಾಮುಲು ಅವರು ಕೂಡ ಸೋಲನುಭವಿಸಿದ್ದಾರೆ. ಪ್ರಮುಖರಾದ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಅತ್ಯಧಿಕ ಮತಗಳ ಅಂತರದಿAದ (೧,೨೨,೩೯೨ ಮತಗಳಿಂದ) ಗೆದ್ದು ದಾಖಲೆ ಸೃಷ್ಟಿಸಿದ್ದಾರೆ. ಅದೇ ರೀತಿ ಅತಿ ಕಡಿಮೆ ಅಂತರದಲ್ಲಿ (೧೦೫ ಮತಗಳಿಂದ) ದಿನೇಶ್ ಗುಂಡೂರಾವ್ ಜಯ ಸಾಧಿಸಿದ್ದಾರೆ.

ಸೋತ ಪ್ರಮುಖರು

ಬಳ್ಳಾರಿ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು (ಬಿ.ಜೆ.ಪಿ) ೨೯,೩೦೦ ಮತಗಳಿಂದ ಕಾಂಗ್ರೆಸ್‌ನ ಬಿ.ನಾಗೇಂದ್ರ ವಿರುದ್ಧ ಸೋಲು.

ಚಾಮರಾಜನಗರ ಕ್ಷೇತ್ರದಲ್ಲಿ ವಸತಿ ಸಚಿವ ವಿ.ಸೋಮಣ್ಣ (ಬಿ.ಜೆ.ಪಿ) ೭,೫೩೩ ಮತಗಳಿಂದ ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಸೋಲು.

ಚಾಮರಾಜಪೇಟೆ ಕ್ಷೇತ್ರದಲ್ಲಿ ಈ ಹಿಂದೆ ಕೊಡಗು ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಭಾಸ್ಕರ್ ರಾವ್ (ಬಿ.ಜೆ.ಪಿ) ಅವರು ೫೩,೯೫೩ ಮತಗಳಿಂದ ಕಾಂಗ್ರೆಸ್‌ನ ಜಮೀರ್ ಅಹ್ಮದ್ ವಿರುದ್ಧ ಸೋಲು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (ಬಿ.ಜೆ.ಪಿ) ೧೦,೬೪೨ ಮತಗಳಿಂದ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ವಿರುದ್ಧ ಸೋಲು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿ.ಜೆ.ಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (ಬಿ.ಜೆ.ಪಿ) ೬,೮೬೪ ಮತಗಳಿಂದ ಕಾಂಗ್ರೆಸ್‌ನ ಹೆಚ್.ಡಿ ತಿಮ್ಮಯ್ಯ ವಿರುದ್ಧ ಸೋಲು.

ಹುಬ್ಬಳ್ಳಿ -ಧಾರವಾಡ ಸೆಂಟ್ರಲ್‌ನಲ್ಲಿ ಬಿ.ಜೆ.ಪಿ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಮೂಲಕ ಸ್ಪರ್ಧಿಸಿ ೩೨,೦೭೦ ಮತಗಳಿಂದ ಬಿ.ಜೆ.ಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು.

ರಾಮನಗರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (ಜೆ.ಡಿ.ಎಸ್) ೧೦,೭೧೫ ಮತಗಳಿಂದ ಕಾಂಗ್ರೆಸ್‌ನ ಎಚ್.ಎ ಇಕ್ಬಾಲ್ ಹುಸೇನ್ ವಿರುದ್ಧ ಸೋಲು.

ಸಿರ್ಸಿ ಕ್ಷೇತ್ರದಲ್ಲಿ ವಿಧಾನಸಭಾಧ್ಯಕ್ಷ ಕಾಗೇರಿ ವಿಶ್ವನಾಥ್ ಹೆಗ್ಡೆ ೮,೭೧೨ ಮತಗಳಿಂದ ಕಾಂಗ್ರೆಸ್‌ನ ಭೀಮಣ್ಣ ಟಿ.ನಾಯಕ್ ವಿರುದ್ಧ ಸೋಲು.

ತಿಪಟೂರು ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (ಬಿಜೆಪಿ) ೧೭,೬೫೨ ಮತಗಳಿಂದ ಕಾಂಗ್ರೆಸ್‌ನ ಷಡಕ್ಷರಿ ವಿರುದ್ಧ ಸೋಲು.

ಪುತ್ತೂರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ

ಫಲಿತಾಂಶ ಅನಿರೀಕ್ಷಿತ ಅಲ್ಲ: ಸಿದ್ದರಾಮಯ್ಯ

ಬೆಂಗಳೂರು : ಈ ಫಲಿತಾಂಶ ಅನಿರೀಕ್ಷಿತ ಅಲ್ಲ. ಜನರ ಜೊತೆ ಸಂಪರ್ಕದಲ್ಲಿರುವವರಿಗೆ ಇದು ನಿರೀಕ್ಷಿತ ಫಲಿತಾಂಶ ಎಂದು ಬಿಜೆಪಿ ನಾಯಕರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಪ್ರಚಾರ ಸಭೆಗಳಲ್ಲಿ ಹಾಗೂ ನಮ್ಮ ಹೈಕಮಾಂಡ್ ನವರ ಬಳಿ ಸುಮಾರು ೧೩೦ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಬಲದ ಮೇಲೆ ಸರ್ಕಾರ ಮಾಡಲಿದೆ ಎಂದು ಹೇಳಿದ್ದೆ, ಇದು ಕೂಡ ಸತ್ಯವಾಗಿದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದರು, ಈ ಸರ್ಕಾರ ಎಷ್ಟು ಬೇಗ ತೊಲಗಿದರೂ ಅಷ್ಟು ಒಳ್ಳೆಯದು ಎಂದು ಜನ ಕಾಯುತ್ತಿದ್ದರು, ಬಿಜೆಪಿಯವರ ಭ್ರಷ್ಟಾಚಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ೧೫೦ ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದರು, ಅಮಿತ್ ಶಾ ಅವರ ಬಳಿ ಗೃಹ ಖಾತೆ ಇದೆ, ಇಂಟಲಿಜೆನ್ಸ್ ಏಜೆನ್ಸಿಗಳು ಇವೆ, ಅವರಿಗೆ ಸೋಲುತ್ತೇವೆ ಎಂದು ಗೊತ್ತಿದ್ದೂ ಕೂಡ ಸುಳ್ಳು ಹೇಳುತ್ತಿದ್ದರು. ಹಣದ ಬಲದಿಂದ ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು ಎಂದು ಪ್ರಯತ್ನಿಸಿದ್ದರು. ಆದರೆ ಜನ ಬಿಜೆಪಿಯನ್ನು ಸೋಲಿಸಬೇಕು ಎಂದು ನಿರ್ಧಾರ ಮಾಡಿದ್ದರು. ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿ ಏನೇನೂ ನಡೆದಿಲ್ಲ. ನೂರು ಬಾರಿ ಮೋದಿ ಮತ್ತು ಅಮಿತ್ ಶಾ ಬಂದರೂ ಯಾವ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ. ಮೋದಿ ಅವರ ಪ್ರಚಾರ ರಾಜ್ಯದ ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ಬಿಜೆಪಿಯವರಿಗೆ ಎಚ್ಚರಿಕೆಯ ಗಂಟೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧವಾಗಿ ಜನ ಮತನೀಡುತ್ತಾರೆ, ಇದರಿಂದ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.

ನಾವು ಜನರಿಗೆ ಗ್ಯಾರೆಂಟಿಗಳನ್ನು ನೀಡಿದ್ದೇವೆ, ಅದರ ಬಗ್ಗೆ ಮೋದಿ ಅವರು ಬಹಳ ಲಘುವಾಗಿ ಮಾತನಾಡಿದ್ದರು. ರಾಜ್ಯ ದಿವಾಳಿಯಾಗುತ್ತದೆ ಎಂದರು, ನಾನು ೧೩ ಬಜೆಟ್‌ಗಳನ್ನು ಮಂಡಿಸಿದ್ದೇನೆ. ಮೋದಿ ಅವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ. ನಮ್ಮ ಗ್ಯಾರೆಂಟಿಗಳಿಗೆ ಸುಮಾರು ೫೦ ರಿಂದ ೬೦ ಸಾವಿರ ಕೋಟಿ ಹಣ ಖರ್ಚಾದರೂ ಸರ್ಕಾರ ಭರಿಸಲು ಶಕ್ತವಾಗಿದೆ ಎಂದು ಹೇಳಿದರು.

ನನ್ನ ಹೋರಾಟ ನಿಲ್ಲುವುದಿಲ್ಲ : ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಈ ಕುರಿತು ಟ್ವೀಟ್ ಮೂಲಕ ಹೇಳಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು ಎಂದರು.

ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಭಾರೀ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಈ ಬಾರಿಯು ಭಾರೀ ನಿರಾಶೆಯಾಗಿದೆ. ಜನಾದೇಶವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಜನಸೇವೆಯ ಕೆಲಸ ಮಾಡುತ್ತೇವೆ : ಡಿ.ಕೆ.ಶಿ.

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕೆಲವರು ಕಾಂಗ್ರೆಸ್ ಪಕ್ಷದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಜನತೆ ನೀಡಿದ್ದಾರೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ್ದಾರೆ. ನಂಬಿಕೆಯನ್ನು ಉಳಿಸಿಕೊಂಡು ಜನಸೇವೆಯ ಕೆಲಸ ಮಾಡುತ್ತೇವೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಒಮ್ಮತದ ಮೂಲಕ ಸಿಎಂ

ಆಯ್ಕೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಾಮೂಹಿಕ ಪ್ರಯತ್ನದ ಫಲ ಎಂದು ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಫಲಿತಾಂಶ ಮತ್ತು ಮುಂದಿನ ಮುಖ್ಯಮಂತ್ರಿ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಒಮ್ಮತದ ನಿರ್ಧಾರದ ಮೂಲಕ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು.

ಎಲ್ಲಾ ಸಮುದಾಯದ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಚುನಾವಣಾ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ.

ನಾವು ಜನಾದೇಶವನ್ನು ಗೌರವಿಸುತ್ತೇವೆ ಮತ್ತು ನಮ್ಮ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಭರವಸೆಯನ್ನು ಜಾರಿಗೆ ತರಬೇಕು : ಯಡಿಯೂರಪ್ಪ

ಬೆಂಗಳೂರು: ಸೋಲು-ಗೆಲುವು ಬಿಜೆಪಿಗೆ ಹೊಸದೇನಲ್ಲ, ಕೇವಲ ಎರಡು ಸ್ಥಾನಗಳಿಂದ ಆರಂಭಿಸಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದ್ದೆವು. ಇಂದಿನ ಫಲಿತಾಂಶದಿAದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿಪರ ಆಡಳಿತ ನೀಡಿದ್ದರೂ ಪಕ್ಷಕ್ಕೆ ಹಿನ್ನಡೆಯಾಗಿರುವುದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತದೆ. ರಾಜ್ಯದ ಜನತೆ ಕೊಟ್ಟಿರುವ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಗ್ಯಾರಂಟಿಯನ್ನು ತಕ್ಷಣ ಈಡೇರಿಸಬೇಕು ಎಂದರು.

ಪಕ್ಷ ನನ್ನನ್ನು ಕಡೆಗಣಿಸಿಲ್ಲ: ಲೋಕಸಭೆ ಚುನಾವಣೆಗೂ ಇದಕ್ಕೂ ಸಂಬAಧವಿಲ್ಲ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಭಾರೀ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಈ ಬಾರಿಯು ಭಾರೀ ನಿರಾಶೆಯಾಗಿದೆ. ಜನಾದೇಶವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಜನಸೇವೆಯ ಕೆಲಸ ಮಾಡುತ್ತೇವೆ : ಡಿ.ಕೆ.ಶಿ.

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕೆಲವರು ಕಾಂಗ್ರೆಸ್ ಪಕ್ಷದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಜನತೆ ನೀಡಿದ್ದಾರೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ್ದಾರೆ. ನಂಬಿಕೆಯನ್ನು ಉಳಿಸಿಕೊಂಡು ಜನಸೇವೆಯ ಕೆಲಸ ಮಾಡುತ್ತೇವೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಒಮ್ಮತದ ಮೂಲಕ ಸಿಎಂ

ಆಯ್ಕೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಾಮೂಹಿಕ ಪ್ರಯತ್ನದ ಫಲ ಎಂದು ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಫಲಿತಾಂಶ ಮತ್ತು ಮುಂದಿನ ಮುಖ್ಯಮಂತ್ರಿ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಒಮ್ಮತದ ನಿರ್ಧಾರದ ಮೂಲಕ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು.

ಎಲ್ಲಾ ಸಮುದಾಯದ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಚುನಾವಣಾ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ.

ನಾವು ಜನಾದೇಶವನ್ನು ಗೌರವಿಸುತ್ತೇವೆ ಮತ್ತು ನಮ್ಮ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಭರವಸೆಯನ್ನು ಜಾರಿಗೆ ತರಬೇಕು : ಯಡಿಯೂರಪ್ಪ

ಬೆಂಗಳೂರು: ಸೋಲು-ಗೆಲುವು ಬಿಜೆಪಿಗೆ ಹೊಸದೇನಲ್ಲ, ಕೇವಲ ಎರಡು ಸ್ಥಾನಗಳಿಂದ ಆರಂಭಿಸಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದ್ದೆವು. ಇಂದಿನ ಫಲಿತಾಂಶದಿAದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿಪರ ಆಡಳಿತ ನೀಡಿದ್ದರೂ ಪಕ್ಷಕ್ಕೆ ಹಿನ್ನಡೆಯಾಗಿರುವುದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತದೆ. ರಾಜ್ಯದ ಜನತೆ ಕೊಟ್ಟಿರುವ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಗ್ಯಾರಂಟಿಯನ್ನು ತಕ್ಷಣ ಈಡೇರಿಸಬೇಕು ಎಂದರು.

ಪಕ್ಷ ನನ್ನನ್ನು ಕಡೆಗಣಿಸಿಲ್ಲ: ಲೋಕಸಭೆ ಚುನಾವಣೆಗೂ ಇದಕ್ಕೂ ಸಂಬAಧವಿಲ್ಲ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.(ಮೊದಲ ಪುಟದಿಂದ) ಅರುಣ್ ಕುಮಾರ್ ಪುತ್ತಿಲ ೪,೧೪೯ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ವಿರುದ್ಧ ಸೋಲು.

ಬಿಳಗಿ ಕ್ಷೇತ್ರದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (ಬಿಜೆಪಿ) ೧೧,೧೨೯ ಮತಗಳಿಂದ ಕಾಂಗ್ರೆಸ್‌ನ ಜೆ.ಟಿ. ಪಾಟಿಲ್ ವಿರುದ್ಧ ಸೋಲನುಭವಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾನೂನು ಸಚಿವ ಮಾಧುಸ್ವಾಮಿ (ಬಿಜೆಪಿ) ೧೦,೦೨೫ ಮತಗಳಿಂದ ಜೆಡಿಎಸ್.ನ ಸುರೇಶ್ ಬಾಬು ಎದುರು ಸೋಲು. ಶ್ರೀನಿವಾಸಪುರ ಕ್ಷೇತ್ರದಲ್ಲಿ ಮಾಜಿ ಸಭಾಪತಿ ಕಾಂಗ್ರೆಸ್‌ನ ಕೆ.ಆರ್. ರಮೇಶ್ ಕುಮಾರ್ ೧೦,೪೪೩ ಮತಗಳಿಂದ ಜೆಡಿಎಸ್‌ನ ಜಿ.ಕೆ. ವೆಂಕಟಶಿವರೆಡ್ಡಿ ವಿರುದ್ಧ ಸೋಲು.

ಮುಧೋಳ್ ಕ್ಷೇತ್ರದಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ ೧೭,೩೩೫ ಮತಗಳಿಂದ ಕಾಂಗ್ರೆಸ್‌ನ ತಿಮ್ಮಪ್ಪೂರ್ ರಾಮಪ್ಪ ಅವರ ವಿರುದ್ಧ ಸೋಲು.

ಕೃಷ್ಣರಾಜನಗರದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ (ಜೆಡಿಎಸ್) ೨೫,೬೪೯ ಮತಗಳಿಂದ ಕಾಂಗ್ರೆಸ್‌ನ ರವಿಶಂಕರ್ ಅವರ ವಿರುದ್ಧ ಸೋಲು.

ಹೊಸಕೋಟೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ. ನಾಗರಾಜು (ಬಿಜೆಪಿ) ೪,೮೭೭ ಮತಗಳಿಂದ ಕಾಂಗ್ರೆಸ್‌ನ ಶರತ್ ಕುಮಾರ್ ವಿರುದ್ಧ ಸೋಲು.

ಕೃಷ್ಣರಾಜಪೇಟೆಯಲ್ಲಿ ಕ್ರೀಡಾ ಸಚಿವ ನಾರಾಯಣ ಗೌಡ (ಬಿಜೆಪಿ) ೪೦,೪೭೫ ಮತಗಳಿಂದ ಜೆಡಿಎಸ್‌ನ ಹೆಚ್.ಟಿ. ಮಂಜು ಅವರ ವಿರುದ್ಧ ಸೋಲು.

ಹಿರೇಕೆರೆ ಕ್ಷೇತ್ರದಲ್ಲಿ ಕೃಷಿ ಸಚಿವ ಬಸವನಗೌಡ ಪಾಟಿಲ್ (ಬಿಜೆಪಿ) ೧೫,೦೨೦ ಮತಗಳಿಂದ ಕಾಂಗ್ರೆಸ್‌ನ ಬಸವನಪ್ಪ ಬನಾಕರ್ ವಿರುದ್ಧ ಸೋಲು.

ಎಲಬುರ್ಗ ಕ್ಷೇತ್ರದಲ್ಲಿ ಗಣಿ ಸಚಿವ ಹಾಲಪ್ಪ ಆಚಾರ್ ೧೭,೧೮೧ ಮತಗಳಿಂದ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ವಿರುದ್ಧ ಸೋಲು.

ಗೆದ್ದ ಪ್ರಮುಖರು

ಅರಕಲಗೂಡು ಕ್ಷೇತ್ರದಲ್ಲಿ ಎ.ಮಂಜು (ಜೆ.ಡಿಎಸ್) ೧೯,೬೦೫ ಮತಗಳಿಂದ ಸ್ವತಂತ್ರ ಅಭ್ಯರ್ಥಿ ಎಮ್.ಟಿ ಕೃಷ್ಣೇಗೌಡ ವಿರುದ್ಧ ಗೆಲುವು.

ಅಥಣಿ ಕ್ಷೇತ್ರದಲ್ಲಿ ಬಿ.ಜೆ.ಪಿ ಟಿಕೆಟ್ ವಂಚಿತ ಲಕ್ಷö್ಮಣ್ ಸವದಿ ಕಾಂಗ್ರೆಸ್‌ನಿAದ ಸ್ಪರ್ಧಿಸಿ ೭೬,೧೨೨ ಮತಗಳಿಂದ ಗೆಲುವು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡ (ಜೆ.ಡಿ.ಎಸ್) ೨೪,೯೯೪ ಮತಗಳಿಂದ ಕಾಂಗ್ರೆಸ್‌ನ ಎಸ್.ಸಿದ್ದೇಗೌಡ ವಿರುದ್ಧ ಗೆಲುವು.

ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ(ಜೆ.ಡಿಎಸ್) ೧೩,೪೫೫ ಮತಗಳಿಂದ ಬಿ.ಜೆ.ಪಿ.ಯ ಸಿ.ಪಿ ಯೋಗೇಶ್ವರ್ ವಿರುದ್ಧ ಗೆಲುವು.

ಚಿಟ್ಟಾಪುರ ಕ್ಷೇತ್ರದಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ (ಕಾಂಗ್ರೆಸ್) ೧೩,೬೪೦ ಮತಗಳಿಂದ ಬಿ.ಜೆ.ಪಿ ಮಣಿಕಂಠ ರಾಥೋಡ್ ವಿರುದ್ಧ ಗೆಲುವು.

ಗಾಂಧಿನಗರ ಕ್ಷೇತ್ರದಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಪುತ್ರ ದಿನೇಶ್ ಗುಂಡೂರಾವ್ (ಕಾಂಗ್ರೆಸ್) ೧೦೫ ಮತಗಳಿಂದ ಬಿ.ಜೆ.ಪಿಯ ಸಪ್ತಗಿರಿ ಗೌಡ ವಿರುದ್ಧ ಗೆಲುವು.

ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ (ಬಿ.ಜೆ.ಪಿ) ೨೫,೪೧೨ ಮತಗಳಿಂದ ಕಾಂಗ್ರೆಸ್‌ನ ಮಹಾಂತೇಶ್ ಕಾಳಪ್ಪ ವಿರುದ್ಧ ಗೆಲುವು.

ಮಲ್ಲೇಶ್ವರಂ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಸಿ.ಎನ್ (ಬಿ.ಜೆ.ಪಿ) ೪೧,೩೦೨ ಮತಗಳಿಂದ ಕಾಂಗ್ರೆಸ್‌ನ ಅನೂಪ್ ಅಯ್ಯಂಗಾರ್ ವಿರುದ್ಧ ಗೆಲುವು.

ನಿಪ್ಪಾಣಿ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಶಶಿಕಲಾಜೊಲ್ಲೆ (ಬಿ.ಜೆ.ಪಿ) ೭,೨೯೨ ಮತಗಳಿಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಉತ್ತಮ್ ಪಾಟೀಲ್ ವಿರುದ್ಧ ಗೆಲುವು.

ಪದ್ಮನಾಭನಗರ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್ ಅಶೋಕ್ (ಬಿ.ಜೆ.ಪಿ) ೫೫,೧೭೫ ಮತಗಳಿಂದ ಕಾಂಗ್ರೆಸ್‌ನ ರಘುನಾಥ ನಾಯ್ಡು ವಿರುದ್ಧ ಗೆಲುವು.

ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ೩೫,೯೭೮ ಮತಗಳಿಂದ ಕಾಂಗ್ರೆಸ್‌ನ ಪತಾನ್ ಯಾಸಿರ್ ಅಹ್ಮದ್ ಖಾನ್ ವಿರುದ್ಧ ಗೆಲುವು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಯಡಿಯೂರಪ್ಪ(ಬಿ.ಜೆ.ಪಿ) ೧೧,೦೦೮ ಮತಗಳಿಂದ ಸ್ವತಂತ್ರ ಅಭ್ಯರ್ಥಿ ಎಸ್.ಪಿ ನಾಗರಾಜಗೌಡ ವಿರುದ್ಧ ಗೆಲುವು.

ತೀರ್ಥಹಳ್ಳ ಕ್ಷೇತ್ರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (ಬಿ.ಜೆ.ಪಿ) ೧೨,೨೪೧ ಮತಗಳಿಂದ ಕಾಂಗ್ರೆಸ್‌ನ ಕಿಮ್ಮಾನೆ ರತ್ನಾಕರ್ ವಿರುದ್ಧ ಗೆಲುವು.

ವರುಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ೪೬,೧೬೩ ಮತಗಳಿಂದ ವಸತಿ ಸಚಿವ ವಿ.ಸೋಮಣ್ಣ(ಬಿ.ಜೆ.ಪಿ) ವಿರುದ್ಧ ಗೆಲುವು.

ಯಶವಂತಪುರ ಕ್ಷೇತ್ರದಲ್ಲಿ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್(ಬಿ.ಜೆ.ಪಿ) ೧೫,೧೧೮ ಮತಗಳಿಂದ ಜೆ.ಡಿ.ಎಸ್‌ನ ಜವರಾಯಿ ಗೌಡ ವಿರುದ್ಧ ಗೆಲುವು.

ಕನಕಪುರ ಕ್ಷೇತ್ರದಲ್ಲಿ ಡಿ.ಕೆ ಶಿವಕ�