ಮಡಿಕೇರಿ, ಮೇ ೧೩: ಮಡಿಕೇರಿ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನಾಗದರ್ಶನ ಮತ್ತು ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವಕೋಲ ತಾ. ೨೨ ರಂದು ನಡೆಯಲಿದೆ. ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಸಂಜೆ ೬ ಗಂಟೆಗೆ ಆಚಾರ್ಯ ವರಣಂ, ಪುಣ್ಯಾಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಪ್ರಸಾದ ವಿತರಣೆ ಜರುಗಲಿದೆ. ತಾ. ೨೩ ರಂದು ಬೆಳಿಗ್ಗೆ ೬ ಗಂಟೆಗೆ ಮಹಾ ಗಣಪತಿ ಹೋಮ, ನವಕ ಪಂಚಗವ್ಯ, ಕಲಶ ಪೂಜೆ, ಕಲಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣ ಮೂರ್ತಿ ದೈವದ ಕಲಶ ಪೂಜೆ, ಅಲಂಕಾರ ಪೂಜೆ, ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ ೧೦,೩೦ಕ್ಕೆ ನಾಗ ಪ್ರತಿಷ್ಠಾಪನಾ ಉತ್ಸವ, ಮಧ್ಯಾಹ್ನ ಅನ್ನದಾನ ವಿರಲಿದೆ. ಸಂಜೆ ೭.೩೦ಕ್ಕೆ ಪಾಷಾಣ ಮೂರ್ತಿ ದೈವ ಕೋಲ ಜರುಗಲಿದೆ. ತಾ. ೨೪ ರ ಸಂಜೆ ೫ ರಿಂದ ಅಗೆಲು ಸೇವೆ ನಡೆಯಲಿದೆ.