‘‘ಹಸಿವೆಂದರೆ ತಂಗಳಿಟ್ಟು ಕಲಸಿ, ರುಚಿ ಎಂದರೆ ಈರುಳ್ಳಿ ಬಿಡಿಸಿ, ಉಪ್ಪೆಂದರೆ ಮೆಣಸಿನ ಕಾಯಿ ಕಿವುಚಿ, ಸಾಕೆಂದರೂ ‘ಈರುಳ್ಳಿ ನಂಚ್ಕ ಕುಡ್ಕಪ್ಪ’ ಎಂದು ಹೊಟ್ಟೆ ಬಿರಿಯುವಂತೆ ಕುಡಿಸಿ ಬೆಳೆಸಿದವಳು ನನ್ನವ್ವ...’’ ಇದು ಕವಿ ಕೃಷ್ಣ ಜನುಮನ ಅವರ ‘‘ನನ್ನವ್ವ’’ ಕವನದ ಸಾಲುಗಳು.
‘‘ಓದು ಓದು ಓದೆಂದು ಪುಸ್ತಕದೊರೆಯ ತರಿಸಿಟ್ಟು, ಬೆವರೆಂಬ ರಕ್ತ ಬಸಿದು ಫಿಜ್ಜ ತಟ್ಟಿ, ದೇವರಿಗೊಂದು ಹರಕೆ ಕಟ್ಟಿ, ಮಾರಮ್ಮನಿಗೊಂದು ಮರಿಯ ಬುಟ್ಟು, ನನ್ನನ್ನೊಂದು ಬೆಟ್ಟ ಮಾಡಿ, ಬೆಟ್ಟದಷ್ಟು ಆಸೆ ಹೊತ್ತು ಕುಳಿತವಳು ನನ್ನವ್ವ’’ ಎನ್ನುವ ಸಾಲುಗಳೊಂದಿಗೆ ಈ ಕವನ ಕೊನೆಗೊಳ್ಳುತ್ತದೆ.
ಓರ್ವ ಆದರ್ಶ ತಾಯಿ ‘ಒಂದು ನೂರು ಅಧ್ಯಾಪಕರಿಗಿಂತಲೂ ಶಕ್ತಿವಂತೆ’ ಎಂದಿದ್ದಾರೆ ಸ್ವಾಮಿ ವಿವೇಕಾನಂದ. ತ್ಯಾಗಮಯಿ, ಕರುಣಾಮೂರ್ತಿ, ಕ್ಷಮಯಾಧರಿತ್ರಿ ಹೀಗೆ ಅಮ್ಮನ ಗುಣಗಾನ ಪದಗಳಿಗೆ ನಿಲುಕದ್ದು, ಆದ್ದರಿಂದಲೇ ಅಮ್ಮನ ವರ್ಣನೆ ಒಂದು ಸಾವಿರ ಪದಗಳಲಿ ಪೂರ್ಣಗೊಳ್ಳುವುದಿಲ್ಲ. ‘ಸಾವ್ ಇರದ ಪದಗಳಲಿ ಸದಾ ಮನದಾಳದಲ್ಲಿ ನೆಲೆಸಿರುವ ಅಮ್ಮ, ಸರ್ವರಿಗೂ ಸದಾ ಸ್ಫೂರ್ತಿಯ ಚಿಲುಮೆ, ಬತ್ತದ ಮಮತೆಯ ಒಡಲು ಅಹನೆ, ಪ್ರೀತಿ, ಪ್ರೇಮದೊಂದಿಗಿನ ಮಾತೃತ್ವದ ಸೆಲೆ, ಅಕ್ಷಯ ಪಾತ್ರೆಯಂತೆ ಎಂದಿಗೂ ಬರಿದಾಗುವುದೇ ಇಲ್ಲ. ಅಮೇರಿಕಾದ ಅನಾಮೇರಿ ಜಾರ್ವಿಸ್ ೧೯೦೫ರಲ್ಲಿ ವಿಧಿವಶಳಾದ ತನ್ನ ತಾಯಿ ಆ್ಯನ್ನ ಆಶಯದಂತೆ ಮಾತೆಯರ ದಿನವನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ಭಾರತದಲ್ಲಿ ಅಮ್ಮಂದಿರ ದಿನ ಆಚರಿಸ ಲಾಗುತ್ತಿದೆ. ತಾಯ್ತನದ ಕಲ್ಪನೆಯನ್ನು ಒಪ್ಪಿಕೊಳ್ಳಿ ಎನ್ನುವುದು ಈ ವರ್ಷದ ಅಮ್ಮನ ದಿನಾಚರಣೆಯ ಧ್ಯೇಯ ವಾಕ್ಯ.
ಅಮ್ಮನ ಪ್ರೀತಿಯ ಧಾರೆ ನಿತ್ಯ ನಿರಂತರ. ಅಮ್ಮ ಒಂದು ಅಸ್ಮಿತೆ, ಅಮ್ಮನಿಗಾಗಿ ಒಂದು ದಿನದ ಆಚರಣೆ. ಮೊದಲಿಗೆ ಪ್ರಾಚೀನ ಗ್ರೀಕ್, ನಂತರ ರೋಮ್ನಲ್ಲಿ ಆರಂಭವಾಯಿತು ಎನ್ನುವ ವಾದವೂ ಇದೆ. ಭಾರತ ಅಮೇರಿಕಾ ಸೇರಿದಂತೆ ವಿಶ್ವದ ೪೦ಕ್ಕೂ ಅಧಿಕ ರಾಷ್ಟçಗಳಲ್ಲಿ ಅಮ್ಮನ ದಿನವನ್ನು ಮೇ ತಿಂಗಳ ೨ನೇ ಭಾನುವಾರ ಆಚರಿಸಲಾಗುತ್ತದೆ. ಬ್ರಿಟನ್ ಮತ್ತು ಎರ್ಲೆಂಡ್ನಲ್ಲಿ ಇದರ ಆಚರಣೆ ಮೇ ತಿಂಗಳ ೪ನೇ ಭಾನುವಾರ ಜರುಗಿದರೆ, ಅರಬ್ ರಾಷ್ಟçಗಳಲ್ಲಿ ೨೧ ನೇ ಮಾರ್ಚ್ ಥಾಯ್ಲೆಂಡ್ನಲ್ಲಿ ಆಗಸ್ಟ್ ೧೨ ರಂದು ಆಚರಣೆಯಾಗುತ್ತದೆ.
ನಮ್ಮೆಲ್ಲರನ್ನು ಹೆತ್ತು ಹೊತ್ತು, ತಾನು ಚಿಂದಿ ಬಟ್ಟೆಯುಟ್ಟರೂ ನಮ್ಮೆಲ್ಲರ ಬದುಕು ಚಿಂದಿಯಾಗದAತೆ ಕಾಳಜಿ ವಹಿಸುವವಳು; ನೆಲ, ಜಲ, ಪರಿಸರ ಪ್ರೀತಿಯೊಂದಿಗೆ ಎಲ್ಲರೊಂದಿಗೆ ಬೆರೆತು ಬಾಳುವುದ ಕಲಿಸಿದ ಸಹನಾಮಯಿ; ತಾನು ಒಪ್ಪೊತ್ತು ಊಟ ಮಾಡಿದರೂ ಮಕ್ಕಳ ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ, ಜಾಗೃತ ನಡೆ ಅಮ್ಮನದ್ದು, ಪದಗಳಿಗೆ ಎಟುಕದ ಕವಿತೆ, ವರ್ಣನೆಗೆ ನಿಲುಕದ ಕಾವ್ಯ, ತನಗಾಗಿ ಬದುಕುವುದನ್ನೇ ಮರೆತು, ಮಕ್ಕಳಿಗಾಗಿ ಬದುಕು ಕಟ್ಟಿಕೊಡುವ ದಣಿವರಿಯದ ಶ್ರಮ ಅಮ್ಮನ ವ್ಯಕ್ತಿತ್ವ ಪರಿಚಯ.
‘‘ಅಮ್ಮ ಎಂದೂ ಮಧ್ಯಾಹ್ನ ಮಲಗಿದ್ದು, ವಿಶ್ರಾಂತಿ ಪಡೆದದ್ದು ನೋಡಿಯೇ ಇಲ್ಲ’ ಎನ್ನುವುದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಎಚ್. ಎಸ್. ಸಾವಿತ್ರಿ ಅವರ ಸ್ಪಷ್ಟ ನುಡಿ. ತನ್ನ ಕಂದನ ಕ್ಷೇಮ, ಶ್ರೇಯಸ್ಸು ಅಮ್ಮನಿಗೆ ತನ್ನ ಜೀವ, ಮಾನಕ್ಕಿಂತಲೂ ಮಿಗಿಲು, ಕಷ್ಟ ನುಂಗಿ, ಮಕ್ಕಳಿಗೆ ಸುಖವ ತೋರುವ, ಮುನಿಸು ನುಂಗಿ ಮುಗುಳುನಗೆಯೊಂದಿಗೆ ಮಕ್ಕಳ ಮೊಗದಲಿ ನಗುವರಳಿಸುವ ಮಹಾತಾಯಿ ಸಮಾಧಾನ ಚಿತ್ತ ದೊಂದಿಗೆ, ಬದುಕಿನ ಸವಾಲುಗಳನ್ನು ಅಂಜದೆ, ಅಳುಕದೆ ಎದುರಿಸುವ ಪಾಠ ಕಲಿಸುವ ಛಲದಂಕ ಮಲ್ಲೆ. ತಾನು ಕಲಿತವಳಲ್ಲದಿದ್ದರೂ ಯಾವುದೇ ವಿಶ್ವವಿದ್ಯಾಲಯಗಳೂ ಕಲಿಸಲಾರದ ಜೀವನಾನುಭವದ ಮೂಟೆ ಹೊತ್ತು ತಮ್ಮ ತಪ್ಪುಗಳನ್ನು ತೀಡಿ ಬದುಕು ನೇರವಾಗಿಸುವ ಶಿಕ್ಷಕಿ ಆಕೆ. ಸಂಸಾರದಲ್ಲಿನ ಏರಿಳಿತಗಳನ್ನು ಸಮದೂಗಿಸುತ್ತಾ, ಪ್ರತಿಫಲಾಪೇಕ್ಷೆಯಿಲ್ಲದೆ ಮಕ್ಕಳ ಏಳ್ಗೆಯಲ್ಲಿ ಖುಷಿಪಡುವ, ಇರುವುದರಲ್ಲೇ ಸಂತೋಷ ಪಡುತ್ತಾ, ತಾನು ದಣಿದಿದ್ದರೂ ತೋರ್ಪಡಿಸದೆ, ನಮ್ಮ ದಣಿವು ನಿವಾರಿಸಲು ಹುಸಿನಗು ಬೀರುತ್ತಾ ಸದಾ ನಮ್ಮ ಬದುಕು ಅರಳಿಸಿ ಚೇತೋಹಾರಿ ಯಾಗಿಸಿದಾಕೆ ಅಮ್ಮ. ತನ್ನ ಸರ್ವಸ್ವವನ್ನೂ ಮಕ್ಕಳಿಗಾಗಿ ಧಾರೆ ಎರೆದು ಅವರು ಭವಿಷ್ಯ ಕಟ್ಟಿಕೊಂಡು ದೂರಾದಾಗಲೂ ಒಂಟಿತನ ಕಾಡಿದರೂ ತೋರ್ಪಡಿಸದಾಕೆ.
ಇಂಥ ಅಮ್ಮನ ಪ್ರೀತಿ ಕೃತಜ್ಞತೆಗೂ ಮೀರಿದ್ದು, ವಿಶ್ವದಲ್ಲೇ ಸ್ವಲ್ಪವೂ ಅನುಮಾನ ಪಡದೆ ನಂಬಬಹುದಾದ ಜೀವ ಅಮ್ಮ. ಜಗತ್ತಿನಲ್ಲಿ ಕೆಟ್ಟ ವ್ಯಕ್ತಿಗಳಿರಬಹುದು. ಆದರೆ, ಕೆಟ್ಟ ಅಮ್ಮ ಇರಲು ಸಾಧವೇ ಇಲ್ಲ. ಜಗತ್ತಿಗೇ ತನ್ನ ಮಕ್ಕಳು ಕೆಟ್ಟವರಂತೆ ಬಿಂಬಿತರಾಗಿದ್ದರೂ, ಮಕ್ಕಳ ತಪ್ಪುಗಳನ್ನೇ ಎತ್ತಿ ಆಡದೆ, ಸದಾ ಪ್ರಶಂಸೆಯ ಮಾತುಗಳನ್ನಾಗುವ ಜೀವ ಅಮ್ಮ. ಇಷ್ಟಕ್ಕೂ ಅಮ್ಮ ಎಂದರೆ ಅಷ್ಟೇ ಸಾಕೆ ?! ಅಮ್ಮಂದಿರ ದಿನದ ಈ ಸಂದರ್ಭ ಅಮ್ಮ ನಂತೆಯೇ ಮಾತೃಸ್ಥಾನದಲ್ಲಿರುವ ಜನ್ಮಭೂಮಿ, ಗೋಮಾತೆ, ಜಲಮಾತೆ, ಪ್ರಕೃತಿ ಮಾತೆ, ತಾಯ್ನಾಡು, ತಾಯ್ನುಡಿ ಎಲ್ಲಕ್ಕೂ ಗೌರವ ಸಮರ್ಪಣೆ ಮಾಡುವ ಸುಸಂದರ್ಭವಿದು, ಅಮ್ಮನ ದಿನ ಕೇವಲ ಒಂದೇ ದಿನದ ಸಾಂಕೇತಿಕ ಆಚರಣೆಯಾಗದೆ, ನಿತ್ಯ ನಿರಂತರ ವಾಗಲಿ.
-ಕಲ್ಮಾಡಂಡ ದಿನೇಶ್ ಕಾರ್ಯಪ್ಪ
ಮಡಿಕೇರಿ., ಮೊ:೯೮೪೫೪೯೯೧೧೨‘ಅಮ್ಮಾ’ ಎಂಬ ಎರಡಕ್ಷರವನ್ನು ಹೇಳುವದು ಸುಲಭ. ಆದರೆ, ವರ್ಣಿಸುವದಕ್ಕೆ ಪದಗಳೇ ಸಾಲವು, ಒಂಭತ್ತು ತಿಂಗಳು ತನ್ನೊಡಲ ಗರ್ಭಗುಡಿಯೊಳಗೆ ತುಂಬಾ ಎಚ್ಚರಿಕೆಯಿಂದ, ವಾತ್ಸಲ್ಯದಿಂದ ಹೊತ್ತು ನಂತರ ಹೊಸ ಜೀವಕ್ಕೆ ಜೀವವನ್ನೆರೆಯುತ್ತಾಳೆ, ಎಲ್ಲಾ ನೋವನ್ನು ಸಹಿಸುತ್ತಾಳೆ, ಸಾರ್ಥಕತೆ ಕಾಣುತ್ತಾಳೆ. ಈ ಜಗತ್ತಿನಲ್ಲಿ ಇಂದಿಗೂ ಕಲ್ಮಶಗೊಳ್ಳದೇ ಉಳಿದುಕೊಂಡಿರುವದು ಅಮ್ಮನ ಪ್ರೀತಿಯೊಂದೇ. ಅಮ್ಮ ತನ್ನ ಕರುಳಕುಡಿಗಳನ್ನು ‘ಕೆಳಗಿಟ್ಟರೆ ಇರುವೆ ಕಚ್ಚೀತು, ಮೇಲಿಟ್ಟರೆ ಕಾಗೆ ಕುಕ್ಕೀತು’ ಎಂದು ಬಲು ಪ್ರೀತಿಯಿಂದ ಜೋಪಾನವಾಗಿ ಸಾಕಿ, ಸಲಹಿಕೊಂಡು ಬರುವಾಕೆ. ಕೊಳಕು ತೊಳೆದು, ಮುದ್ದು ಮಾಡಿ ಮಕ್ಕಳ ಬೇಕು-ಬೇಡಗಳಿಗೆ ಸ್ಪಂದಿಸಿ ಅಕ್ಕರೆಯಿಂದ ಸಾಕುತ್ತಾಳೆ ಅಮ್ಮಾ. ಆದರೆ, ಹೆತ್ತಾಕೆಗೆ ವಯಸ್ಸಾದಾಗ ಕೆಲವು ಮಕ್ಕಳು ಅದೆಲ್ಲವನ್ನೂ ಮರೆತು ಬಿಡುತ್ತಾರೆ. ವಯೋವೃದ್ಧರನ್ನು ಇತರರ ಮುಂದೆ ತಂದೆ-ತಾಯಿ ಎಂದು ಒಪ್ಪಿಕೊಳ್ಳಲೂ ಹಿಂಜರಿಯುವವರಿದ್ದಾರೆ. ತಾಯಿಯಾದವಳು ತನ್ನ ಹತ್ತು ಮಕ್ಕಳನ್ನೂ ತುತ್ತುಕೊಟ್ಟು, ಮುತ್ತು ಕೊಟ್ಟು ಮುದ್ದಿನಿಂದ ಸಾಕಿದರೂ ಕೆಲವು ಮಕ್ಕಳು ತಮ್ಮ ತಾಯಿಯನ್ನು ಸಾಕಲು ಮೀನ ಮೇಷ ಎಣಿಸುತ್ತಾರೆ. ಅವನು ನೋಡ್ಲಿ, ಇವನು ನೋಡ್ಲಿ ಎಂದು ನುಣುಚಿಕೊಳ್ಳುತ್ತಾರೆ. ಮತ್ತೆ ಕೆಲವರು ಒಪ್ಪಂದ ಮಾಡಿಕೊಂಡು ಮೂರೋ, ನಾಲ್ಕೋ ತಿಂಗಳು ಹಂಚಿಕೊAಡು ನೋಡ್ತಾರೆ. ಇನ್ನೆಷ್ಟೋ ಮನೆಗಳಲ್ಲಿ ವಯಸ್ಸಾದ ಅತ್ತೆ, ಮನೆಯಲ್ಲಿದ್ದರೆ ಮುಖ ಸಿಂಡರಿಸುವ ಸೊಸೆಯಂದಿರು, ಆ ಸೊಸೆಯರಿಗೆ ಸರಿಯಾದ ಗಂಡAದಿರು ಹೆಂಡತಿಯ ಹೆಜ್ಜೆ-ಹೆಜ್ಜೆಗೂ ಕಾಳಜಿ ವಹಿಸುವ ಮಗ ತನ್ನ ತಾಯಿಯ ಯೋಗಕ್ಷೇಮದತ್ತ ತಿರುಗಿಯೂ ನೋಡೋದಿಲ್ಲ. ಅಮ್ಮಾ ಹೇಗಿದ್ದೀಯಾ ನಿನಗೇನು ಬೇಕು ಎಂಬಿತ್ಯಾದಿ ಯಾವದನ್ನೂ ವಿಚಾರಿಸುವುದಿಲ್ಲ. ಅಂತಹ ಮನೆಗಳಲ್ಲಿ ಕಳೆಯುವ ಅಮ್ಮಂದಿರು ಎಷ್ಟೊಂದು ನೊಂದುಕೊAಡಿರ ಬಹುದು. ಯೋಚಿಸಿ, ಇನ್ನು ಹೆತ್ತಾಕೆಗೆ ವಯಸ್ಸಾಗುತ್ತಾ ಬಂದAತೆ ನಿರ್ಲಕ್ಷö್ಯದಿಂದ ಕಾಣುವವರೂ ಸಮಾಜದಲ್ಲಿದ್ದಾರೆ. ಅಂತಹ ಮಹಿಳೆಯರು ಬೀದಿ ಪಾಲಾಗಿ, ಅನಾಥರಾಗಿ, ಅಲೆಯುವದೂ ಇದೆ. ಹೆತ್ತ ತಾಯಿಯನ್ನು ನಿರ್ಲಕ್ಷö್ಯದಿಂದ ಕಾಣುವ ಮಕ್ಕಳು ತಮ್ಮ ಬಾಳಿನಲ್ಲಿ ಅದರ ದುಷ್ಪಲವನ್ನು ಅನುಭವಿಸದೇ ಇರಲಾರರೆಂದು ಎಲ್ಲಾ ಧರ್ಮಗಳೂ ಹೇಳಿವೆ.
ದೇವರು ತನ್ನ ಪ್ರೀತಿಯನ್ನು ತಾಯಿಯ ಮೂಲಕ ಧಾರೆ ಎರೆಯುತ್ತಾನೆ, ಮಕ್ಕಳು ಏನೇ ತಪ್ಪು ಮಾಡಿದರೂ ಮಮತೆಯಿಂದ ತಿದ್ದುವ ದೇವತೆ, ಸಹೃದಯಿ ‘ಅಮ್ಮ’ ಹೆತ್ತಮ್ಮನಿಗೆ ನಾವೆಂದೂ ಶರಣಾಗಬೇಕು, ತಲೆ ಬಾಗಬೇಕು. ತಂದೆಯೂ ಸಹ ಮಕ್ಕಳ ಬೇಕು-ಬೇಡಗಳನ್ನು ಪೂರೈಸುತ್ತಾನೆ, ಸ್ಪಂದಿಸುತ್ತಾನೆ, ಮಮತೆ, ಕರುಣೆ ತೋರುತ್ತಾನೆ, ಎಡವಿ ಬೀಳದಂತೆ ಕೈ ಹಿಡಿದು ನಡೆಸುತ್ತಾನೆ. ಪ್ರತೀ ಹಂತದಲ್ಲೂ ತಂದೆ-ತಾಯಿಯರ ಆಶೀರ್ವಾದ ಮಕ್ಕಳ ಜೊತೆಗಿರುತ್ತದೆ, ಹೆತ್ತವರ ಆಶೀರ್ವಾದ ದೇವರ ಆಶೀರ್ವಾದ ದೊರೆತಂತೆ ಅಪ್ಪನ ಪ್ರೀತಿ ಎದೆಯಾಳದಲ್ಲಿ ಮನದಾಳದಲ್ಲಿ ಹುದುಗಿರುತ್ತದೆ.
ನಾವೆಂದಿಗೂ ಹೆತ್ತ ದೇವರುಗಳನ್ನು ನೋಯಿಸಬಾರದು, ಮುತ್ತು ಕೊಡುವವಳು ಸಿಕ್ಕಳೆಂದು ತುತ್ತು ಕೊಟ್ಟವಳ ಮರೆಯುವದು ಧರ್ಮವಲ್ಲ, ಸಂಸ್ಕೃತಿಯಲ್ಲ, ತಂದೆ-ತಾಯಿಯರಿAದಲೇ ನಾವಿಂದು ಪ್ರಪಂಚವನ್ನು ಕಾಣಲು ಸಾಧ್ಯವಾಯಿತು, ಬದುಕಲು ದಾರಿ ಕಾಣುವಂತಾಯಿತು ಎಂಬದು ಸತ್ಯ. ಹೆತ್ತವರ ನೋಯಿಸಿದರೆ ಜೀವನ ಪರ್ಯಂತ ನಾವು ಶಾಪವನ್ನೆದುರಿಸಬೇಕಾದೀತು. ಅವರ ಕಣ್ಣೀರು ನಮ್ಮನ್ನು ಶಾಪವಾಗಿ ಕಾಡಬಹುದು. ಅವರು ಕಣ್ಣೆದುರಿಗಿದ್ದಾಗ ಅವರ ಬೆಲೆ ನಮ್ಮ ಅರಿವಿಗೆ ಬಾರದು. ಅವರ ಕಣ್ಮರೆಯಿಂದ ಅವರ ಅಮೂಲ್ಯ ನೆನಪುಗಳು ಬೆಂಬಿಡವು, ಎಂಥಾ ಸತ್ಯ. ಆ ಮಹಾ ತಾಯಿಗೆ ನಾವು ತಲೆ ಬಾಗಲೇಬೇಕು. ಈ ಪ್ರಪಂಚದ ಶ್ರೇಷ್ಠ ಗುಣಗಳು ತ್ಯಾಗ, ಸಹನೆ, ತಾಳ್ಮೆ, ಪ್ರೀತಿ, ಮಮತೆ ಒಂದೇ ಕಡೆ ಸಿಗುವ ಜಾಗ ಅಂದರೆ ವಾತ್ಸಲ್ಯಮಯಿ ನಮ್ಮ ಅಮ್ಮ. ತಾಯಿಯೇ ದೇವರು ಎಂಬ ಈ ಸಾಲುಗಳು ಕೇವಲ ಪದಗಳ ಜೋಡಣೆ ಮಾತ್ರವಲ್ಲ ಸತ್ಯವಾದ ಮಾತು.
ಮನುಷ್ಯನ ಆತ್ಮ ಮತ್ತು ದೇಹ ಒಂದಾದ ಸಂದರ್ಭದಲ್ಲಿ ಅವನು ವಿಶ್ರಮಿಸುವದು ಎರಡೇ ಜಾಗ. ತಾಯಿಯ ಮಡಿಲು ಮತ್ತು ಭೂತಾಯಿಯ ಮಡಿಲು, ಈ ಇಬ್ಬರೂ ತಾಯಿಯಂದಿರೇ ತಾಯಿಯು ಮಕ್ಕಳಿಗಾಗಿ ಎಲ್ಲಾ ನೋವನ್ನು ನುಂಗುತ್ತಾಳೆ. ಕಷ್ಟ ಸಹಿಸುತ್ತಾಳೆ. ತ್ಯಾಗ ಮಾಡುತ್ತಾಳೆ. ಸಹನೆಯಿಂದಿರುತ್ತಾಳೆ. ಆದರೆ, ಇಂಥ ತಾಯಿಗೆ ಆಕೆಯ ಪ್ರೀತಿಗೋಸ್ಕರ ಮಕ್ಕಳಾದ ನಾವು ಏನನ್ನು ನೀಡಿದ್ದೇವೆ, ನೀಡುತ್ತಿದ್ದೇವೆ, ತಾಯಿಯ ಪ್ರೀತಿ ಆಕಾಶಕ್ಕಿಂತಲೂ ಎತ್ತರ, ಭೂಮಿಗಿಂತಲೂ ಆಳ ಹಾಲಿಗಿಂತಲೂ ಪರಿಶುದ್ಧ, ಮುದ್ದು ಕಂದನನ್ನು ಯಾರೇ ಎತ್ತಿ ಮುದ್ದಿಸಿದರೂ ಮಗುವಿನ ಮುಖದಲ್ಲಿ ಒಂದು ವಿಶಿಷ್ಟ ಕಳೆ, ನಗು ಅರಳುವದು ತನ್ನ ತಾಯಿಯ ತೋಳು ಸೇರಿದಾಗ ಮಾತ್ರ. ಅಂಥಹ ಅಪ್ಪ-ಅಮ್ಮನ ಪ್ರೀತಿಯಲ್ಲಿ ಮಿಂದೆದ್ದ ನಾವೇ ಧನ್ಯರು. ಈ ದೇವರುಗಳಿಗೆ ಜೀವನ ಪರ್ಯಂತ ಚಿರಋಣಿಯಾಗಿರೋಣ. ಅಮ್ಮ-ಅಪ್ಪನನ್ನು ಪೂಜಿಸೋಣ. ‘‘ಐ ಲವ್ ಯೂ ಅಮ್ಮ, ಪಪ್ಪಾ..’’
ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಎಂಬದು ಬೆಲೆಕಟ್ಟಲಾಗದ ಅಮೂಲ್ಯ ನಿಧಿ. ನವಮಾಸ ಗರ್ಭದಲ್ಲಿ ತನ್ನ ಮಗುವಿನೊಂದಿಗೆ ಭಾವನಾತ್ಮಕ ಸಂಬAಧವಿಟ್ಟುಕೊಳ್ಳುವ ತಾಯಿಗೆ ಎಷ್ಟು ಋಣಿಯಾದರು ಸಾಲದು ಅತ್ತಾಗ ಹಾಲುಣಿಸಿ, ನಕ್ಕಾಗ ಮುದ್ದಿಸಿ, ತನ್ನೆಲ್ಲಾ ನೋವುಗಳನ್ನು ಬದಿಗಿರಿಸಿ ಕೇವಲ ಮಕ್ಕಳ ಏಳಿಗೆಯನ್ನು ಬಯಸುವ ತಾಯಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ದಿನವಿಡೀ ದುಡಿದು ಬರುವ ಗಂಡನನ್ನು ಉಪಚರಿಸಿ ಮನೆಯಲ್ಲಿ ತಾನು ದುಡಿದು ಸುಸ್ತಾಗಿದ್ದರೂ ಲವಲವಿಕೆಯಿಂದ ಇರೋಕೆ ತಾಯಿಗೆ ಮಾತ್ರ ಸಾಧ್ಯ. ತನ್ನ ಮಗು ಹೊರ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೆ ತಾಯಿ ಎಂಬ ಜವಾಬ್ದಾರಿ ತನ್ನಿಂತಾನೆ ಬಂದು ಬಿಡುತ್ತದೆ. ತನ್ನ ಮಗುವಿಗೆ ಚೂರು ನೋವಾದರೂ ನೋವು ಕಣ್ಣೀರು ಸುರಿಸುವವಳೇ ತಾಯಿ. ಉತ್ತಮ ಆಚಾರ-ವಿಚಾರಗಳನ್ನು ತನ್ನ ಮಕ್ಕಳಲ್ಲಿ ಬೆಳೆಸಿ ಬೆಳೆಸಿ ಸತ್ರö್ಪಜೆಯಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಮುಖ್ಯವಾದುದ್ದು, ನಿಜವಾದ ಪ್ರೀತಿ ತ್ಯಾಗವೇ ತಾಯಿಯ ಇನ್ನೊಂದು ಗುಣ. ತಾಯಿಗಿಂತ ಬಂಧುವಿಲ್ಲ. ಎಂಬAತೆ ನಮ್ಮ ಜೀವನದ ಪ್ರತಿಯೊಂದು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಹಾರೈಸುವದು ತಾಯಿ ಮಾತ್ರ. ತಾಯಿ ಮಕ್ಕಳ ಪಾಲಿಗೆ ಅಪರಂಜಿ. ಹೆಣ್ಣು ತಾಯಿಯಾದಾಗ ಅವಳಲ್ಲಿದ್ದ ಆಸೆಗಳನ್ನು ಅದುಮಿಟ್ಟುಕೊಳ್ಳುತ್ತಾಳೆ. ಓರ್ವ ಹೆಣ್ಣು ತಾಯಿಯಾದಾಗ ನಿಸ್ವಾರ್ಥದ ಭಾವಗಳು ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಮಕ್ಕಳ ಜಗತ್ತಿನಲ್ಲಿ ತನ್ನನ್ನು ತಾನು ಮರೆಯುತ್ತಾಳೆ. ಎಷ್ಟರ ಮಟ್ಟಿಗೆ ತಾಯಿ ನಿಸ್ವಾರ್ಥಿ ಎಂದರೆ ತನಗೆ ಏನಾದರೂ ಆಗಲಿ ತನ್ನ ಮಕ್ಕಳನ್ನು ಚೆನ್ನಾಗಿಡು ಎಂದು ದೇವರಲ್ಲಿ ಬೇಡುತ್ತಾಳೆ. ಅಮ್ಮನನ್ನು ಪ್ರೀತಿಸುವ ಪ್ರತಿಯೊಂದು ನಿಮಿಷವು ಅಮ್ಮಂದಿರ ದಿನವೇ. ಅಮ್ಮ ನಿನಗೆ ನೀನೇ ಸಾಟಿ.
ಸಂಸಾರಸ್ಥೆ ಎನಿಸಿಕೊಂಡAದಿನಿAದಲೂ ಮಕ್ಕಳ ಏಳಿಗೆಗಾಗಿ ತನ್ನ ದೇಹವನ್ನು ಶ್ರೀಗಂಧದAತೆ ತೇಯುವ ಅಮ್ಮನನ್ನು ಕಡೆಗಣಿಸದಿರಿ. ಅಮ್ಮನ ಆಶೀರ್ವಾದವೊಂದಿದ್ದರೆ ಎಲ್ಲಾ ವಿಧದ ಆಪತ್ತುಗಳಿಂದ ಪಾರಾಗಬಹುದು ಎಂಬದನ್ನು ತಿಳಿದು ಬಾಲ್ಯದಲ್ಲಿ ನಮಗೆ ಆಸರೆಯಾದ ಅಮ್ಮನಿಗೆ ವಯಸ್ಸಾದಾಗ ನಾವು ಆಸರೆಯಾಗೋಣ.
-ಎಸ್. ಕೆ. ಅಶ್ವಿನಿ, ಮಡಿಕೇರಿ.
ಮೊ: ೯೯೦೨೬೧೨೯೦೦