ಕಣಿವೆ, ಮೇ ೧೩: ಹಗಲಲ್ಲಿ ದಿನವಿಡೀ ನೀರೊಳಗಿದ್ದು ಮೀನು ಹಿಡಿದು ಮಾರಾಟ ಮಾಡಿ ಬದುಕು ಸವೆಸುತ್ತಿರುವ ಬೆಸ್ತರ ಕುಟುಂಬಗಳಿಗೆ ಸೂರು ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.

ಕೆರೆ-ಕಟ್ಟೆ, ಕೊಲ್ಲಿ ಹಾಗೂ ನದಿಗಳ ನೀರಲ್ಲಿ ಮೀನು ಹಿಡಿದು ಜೀವನ ಮಾಡುತ್ತಿರುವ ಬೆಸ್ತರಿಗೆ ಸರಿಯಾದ ಆಸರೆಯಿಲ್ಲದೇ ಜಲಮೂಲಗಳ ದಂಡೆಗಳಲ್ಲಿ ಮಳೆಗಾಲದಲ್ಲಿ ಹರಕು ಮುರುಕು ಶೆಡ್ ಹಾಕಿಕೊಂಡು ದಿನಗಳೆವ ಈ ಮಂದಿ ಬೇಸಗೆಯ ದಿನಗಳಲ್ಲಿ ಯಾವ ಶೆಡ್‌ಗಳು ಇಲ್ಲದೆಯೇ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂಬAತೆ ಜೀವನ ನಡೆಸುತ್ತಿದ್ದಾರೆ. ಕುಶಾಲನಗರ ಯಾವ ಶೆಡ್‌ಗಳು ಇಲ್ಲದೆಯೇ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂಬAತೆ ಜೀವನ ನಡೆಸುತ್ತಿದ್ದಾರೆ. ಕುಶಾಲನಗರ ಹಿಂದಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಎಷ್ಟೆಲ್ಲಾ ಬೇಡಿದರೂ ನಿವೇಶನವಾಗಲೀ, ಸೂರಾಗಲೀ ನೀಡಲಿಲ್ಲ. ನಮಗೂ ಯಾರೂ ಕೂಡ ಸಹಾಯ ಮಾಡುವ ಬಲಿಷ್ಠರಿಲ್ಲ. ಚುನಾವಣೆ ಗಳಲ್ಲಿ ನಮ್ಮನ್ನು ಹುಡುಕಿ ಮಂದಿ ಕೈಗೊಂದು ನೋಟು ಕೊಟ್ಟು ವೋಟು ಹಾಕಿಸಿಕೊಳ್ಳುವ ಮಂದಿ ಕ್ರಮೇಣ ತಮ್ಮ ಸುಳಿವೇ ತೋರಿಸಲ್ಲ. ಹಾಗಾಗಿ ಯಾರನ್ನು ಕೇಳೋದು ಹೇಳಿ? ಅದಕ್ಕೆ ಹೀಗೆ ಭೂಮಿತಾಯ ಮಡಿಲಲ್ಲಿ ಹೇಗೋ ಜೀವನ ಸವೆಸುತ್ತಾ ಇದ್ದೇವೆ ಎಂದು ಹತಾಶರಾಗಿ ಹೇಳುತ್ತಾರೆ.ಕೂಡ್ಲೂರು ಗ್ರಾಮದ ಹಾರಂಗಿ ನದಿಯಲ್ಲಿ ಈ ಬೆಸ್ತ ಕುಟುಂಬದ ಗಂಡಸರು ಏಡಿಗಳು, ಹಾವು ಮೀನು, ಸೀಗಡಿ ಮೀನು, ಕಾಟ್ಲಾ ಮೊದಲಾದ ಜಲಚರಗಳನ್ನು ಹಿಡಿದು ತಂದರೆ, ಕುಶಾಲನಗರದ ಅರಣ್ಯ ಇಲಾಖೆ ಮುಂಬದಿಯ ರಸ್ತೆಯಲ್ಲಿ ಕುಳಿತು ಬೆಸ್ತರ ಕುಟುಂಬದ ಹೆಂಗಸರು ಮಾರಾಟ ಮಾಡುತ್ತಾರೆ. ಮಾರಾಟ ಮಾಡಿ ಬಂದ ಹಣದಲ್ಲಿ ಅವತ್ತಿನ ಗಂಜಿಗೆ ಅಕ್ಕಿ ಹಾಗೂ ಬೇಳೆ ಖರೀದಿಸಿ ತರುತ್ತಾರೆ. ಅಲ್ಲೇ ನದಿ ದಂಡೆ ಯಲ್ಲೇ ಕಲ್ಲುಗಳಿಟ್ಟು ಸ್ವಾಭಾವಿಕ ವಾಗಿ ಸಿಗುವ ಉರುವಲು ತಂದು ಬೆಂಕಿ ಹಾಕಿ ಬೇಯಿಸುತ್ತಾರೆ. ಕೈಯಲ್ಲೇ ಮಸಾಲೆ ರುಬ್ಬಿಕೊಂಡು ಪ್ರಕೃತಿಯೆಡೆಗೆ ಮುಖಮಾಡಿ ಸೇವಿಸಿ ಹಾಯಾಗಿ ದಿನಗಳೆ ಯುತ್ತಿರುವ ಈ ಅಮಾಯಕ ಮಂದಿಯ ದುಸ್ತರ ಬದುಕನ್ನು ಜಿಲ್ಲಾಡಳಿತ ಇನ್ನಾದರೂ ಕಣ್ತೆರೆದು ನೋಡುವ ಮೂಲಕ ಸರ್ಕಾರದ ಕನಿಷ್ಟ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಇಂತಹ ದಮನಿತರ, ಶೋಷಿತರ, ಧ್ವನಿ ಇಲ್ಲದವರ ಬದುಕಲ್ಲಿ ಹೊಸಬೆಳಕು ತೋರಿಸಬೇಕಿದೆ.

- ಕೆ.ಎಸ್. ಮೂರ್ತಿ