ಫಲಿತಾಂಶದ ಬಳಿಕ ಮೈತ್ರಿ ನಿರ್ಧಾರ-ಇಬ್ರಾಹಿಂ

ಬೆAಗಳೂರು, ಮೇ ೧೨: ಕರ್ನಾಟಕ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಮೈತ್ರಿ ಬಗ್ಗೆ ನಿರ್ಧರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಈ ಕುರಿತು ಮಾತನಾಡಿದ್ದು, ತನ್ವೀರ್ ಅಹಮದ್ ನಮ್ಮ ವಕ್ತಾರರೂ ಅಲ್ಲ, ನಮ್ಮ ಪಕ್ಷದ ಸದಸ್ಯರೂ ಅಲ್ಲ. ಅವರು ಏನೂ ಅಲ್ಲ, ಅವರು ಬಹಳ ಹಿಂದೆಯೇ ಪಕ್ಷ ತೊರೆದಿದ್ದಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ನಾವು ಏನನ್ನೂ ನಿರ್ಧರಿಸಿಲ್ಲ, ಫಲಿತಾಂಶಕ್ಕಾಗಿ ಕಾಯುತ್ತೇವೆ. ಆ ಬಳಿಕವೇ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರ ರಚಿಸುವ ವಿಶ್ವಾಸವನ್ನು ಹೊರ ಹಾಕಿದ್ದಾರೆ. ರಾಷ್ಟಿçÃಯ ಪಕ್ಷಗಳ ಬಳಿ ದುಡ್ಡು ಇದೆ, ನಮ್ಮ ಬಳಿ ಏನೂ ಇಲ್ಲ. ಹಣ ಇರುವುದರಿಂದ ಎರಡೂ ಪಕ್ಷಗಳು ಸರ್ವೆ ಮಾಡಿಸಿಕೊಂಡಿವೆ. ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗಲಿದೆ. ಸರ್ಕಾರ ರಚಿಸುವ ವಿಶ್ವಾಸವನ್ನು ಹೊರ ಹಾಕಿದ್ದಾರೆ ಎಂದಿದ್ದಾರೆ.

ಸೈನಿಕರಿಗೆ ತಾಜಾ ಆಹಾರ ಪೂರೈಸಲು ‘ಆಂಟಿಫ್ರೀಜ್' ಆವಿಷ್ಕಾರ

ಮೈಸೂರು, ಮೇ ೧೨: ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ (ಡಿ.ಎಫ್.ಆರ್.ಎಲ್) ವಿಜ್ಞಾನಿಗಳು ಸಿಯಾಚಿನ್‌ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು "ಆಂಟಿಫ್ರೀಜ್ ಕಂಟೇನರ್" ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದು ಎತ್ತರದ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳಿಗೆ "ರಾಕ್-ಹಾರ್ಡ್" ಮೊಟ್ಟೆಗಳು, "ಜ್ಯೂಸ್ ಬ್ರಿಕ್ಸ್" ಮತ್ತು ಹೆಪ್ಪುಗಟ್ಟಿದ ಹಣ್ಣುಗಳು ಹಾಗೂ ತರಕಾರಿಗಳ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಡಿಆರ್‌ಎಫ್‌ಎಲ್ ನಿರ್ದೇಶಕ ಡಾ. ಅನಿಲ್ ದತ್ ಸೆಮ್ವಾಲ್ ಅವರ ಮಾರ್ಗದರ್ಶನದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲವೂ ಡಿಆರ್‌ಎಫ್‌ಎಲ್ ಯೋಜನೆಗಳ ಪ್ರಕಾರ ನಡೆದರೆ, ಈ ವರ್ಷವೇ ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಸೈನಿಕರು "ರಾಕ್-ಹಾರ್ಡ್" ಮೊಟ್ಟೆಗಳು, "ಟೊಮ್ಯಾಟೊ" ಮತ್ತು "ಜ್ಯೂಸ್ ಬ್ರಿಕ್ಸ್"ಗಳನ್ನು ಒಡೆಯುವ ವೀಡಿಯೊಗಳು ಕೆಲವು ವರ್ಷಗಳ ಹಿಂದೆ ವೈರಲ್ ಆದ ನಂತರ, ಡಿಎಫ್‌ಆರ್‌ಎಲ್ ವಿಜ್ಞಾನಿಗಳು ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡಲು ಆರಂಭಿಸಿದರು. ಈ ಆಂಟಿಫ್ರೀಜ್ ಇನ್ಸುಲೇಟೆಡ್ ಕಂಟೇನರ್‌ನೊAದಿಗೆ, ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸಬಹುದು ಅಥವಾ ಸಂಗ್ರಹಿಸಬಹುದು. ಸುಮಾರು ೯೦ ಗಂಟೆಗಳ ಕಾಲ ಘನೀಕರಿಸುವ ಮತ್ತು ತಣ್ಣಗಾಗದಂತೆ ತಾಜಾತನವನ್ನು ಉಳಿಸಿಕೊಳ್ಳಬಹುದು. ಈ ಕಂಟೇನರ್‌ಗೆ ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯವಿಲ್ಲ ಎಂದು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿರುವ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಯುವತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣು

ತುಮಕೂರು, ಮೇ ೧೨: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಭಟ್ಟರಹಳ್ಳಿ ಗ್ರಾಮದಲ್ಲಿ ೨೭ ವರ್ಷದ ಯುವಕನೊಬ್ಬ ಯುವತಿಯೊಬ್ಬಳ ಮೇಲೆ ಮಚ್ಚಿನಿಂದ ಕೊಲ್ಲಲು ಯತ್ನಿಸಿ, ಬಳಿಕ ಕಲ್ಯಾಣಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಬಿ.ಎಸ್.ವಿನಯ್ ಕುಮಾರ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಅರ್ಚಕನಾಗಿದ್ದರು. ವಿನಯ್ ಕುಮಾರ್, ಇತ್ತೀಚಿಗಷ್ಟೇ ದ್ವಿತೀಯ ಪಿಯುಸಿ ಪಾಸ್ ಆಗಿದ್ದ ಕೆ ಜೀವಿತಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಆತನ ಪ್ರೀತಿಯನ್ನು ಯುವತಿ ತಿರಸ್ಕರಿಸಿದ್ದರಿಂದ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿನಯ್ ಕುಮಾರ್, ಜೀವಿತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಆಕೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಯುವತಿ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಸಂಬAಧ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೀಡಿಯೋ ನಿರ್ಬಂಧಿಸಲು ಟ್ವಿಟರ್, ಗೂಗಲ್‌ಗೆ ಹೈಕೋರ್ಟ್ ನಿರ್ದೇಶನ

ನವದೆಹಲಿ, ಮೇ ೧೨: ಅನ್ಯಕೋಮಿನ ವ್ಯಕ್ತಿಯೊಬ್ಬ ಹಿಂದೂ ಮಹಿಳೆ ಯನ್ನು ಮತಾಂತರಗೊಳ್ಳುವAತೆ ಒತ್ತಾಯಿಸಿದ ಸುದ್ದಿ ವರದಿಗಳು ಮತ್ತು ವೀಡಿಯೋ ಲಿಂಕ್‌ಗಳನ್ನು ನಿರ್ಬಂಧಿಸುವAತೆ ದೆಹಲಿ ಹೈಕೋರ್ಟ್ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಟ್ವಿಟರ್ ಮತ್ತು ಗೂಗಲ್ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದೆ. ಆನ್‌ಲೈನ್‌ನಲ್ಲಿ ಹಾಕಲಾಗಿರುವ ಸುದ್ದಿ ಮತ್ತು ವೀಡಿಯೊಗಳ ಕುರಿತು ವೀಕ್ಷಕರು ಮಾಡು ತ್ತಿರುವ ಕಾಮೆಂಟ್‌ಗಳಿAದ ತೀವ್ರ ಬೆದರಿಕೆ ಇದೆ ಎಂಬುದನ್ನು ಪರಿಗಣಿಸಿ ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಈ ಆದೇಶ ಹೊರಡಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ ಮತ್ತು ಗೂಗಲ್ ಎಲ್‌ಎಲ್‌ಸಿ ಮತ್ತು ಟ್ವಿಟರ್ ಇಂಕ್‌ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಖ್ಯಾತ ಶಾಸ್ತಿçÃಯ ಸಂಗೀತ ಶಿಕ್ಷಕನೆಂದು ಹೇಳಿಕೊಳ್ಳುವ ಅರ್ಜಿದಾರ ಅಜ್ಮತ್ ಅಲಿ ಖಾನ್, ತನ್ನ ವಿರುದ್ಧ ದೆಹಲಿ ಮಹಿಳೆ ಏಪ್ರಿಲ್ ೧೯ ರಂದು ದಾಖಲಿಸಿರುವ ಎಫ್‌ಐಆರ್ ಕುರಿತು ಆನ್‌ಲೈನ್‌ಗಳಲ್ಲಿ ಪ್ರಸಾರವಾದ ಸುದ್ದಿಗಳು ಮತ್ತು ವೀಡಿಯೋಗಳನ್ನು ತೆಗೆದುಹಾಕಬೇಕು ಎಂದು ಕೋರಿದ್ದರು.

ಸಾಮೂಹಿಕ ಅತ್ಯಾಚಾರ - ಓರ್ವನ ಬಂಧನ

ಅಗರ್ತಲಾ, ಮೇ ೧೨: ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯನ್ನು ಟಿಂಘರಿಯಾದ ಮೊಲರೈ ಜಮಾತಿಯಾ ಎಂದು ಗುರುತಿಸಲಾಗಿದೆ. ಆದರೆ ಉಳಿದ ಎಂಟು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಸಹಾಯಕ ಇನ್ಸ್ಪೆಕ್ಟರ್ ಜನರಲ್(ಎಐಜಿ) ಜ್ಯೋತಿಷ್ಮನ್ ದಾಸ್ ಚೌಧರಿ ಹೇಳಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರು ಹುಡುಗಿಯರು ಬುಧವಾರ ಜಿಲ್ಲೆಯ ಅಮರಪುರ ಪಟ್ಟಣದಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ‘ಬೈಶಾಕಿ ಮೇಳ'ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬಂಧಿತ ಆರೋಪಿ ಮೊಲರೈ ಫೇಸ್‌ಬುಕ್‌ನಲ್ಲಿ ಓರ್ವ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೊಲರೈ ಜಾತ್ರೆ ಆವರಣದಿಂದ ಬುಧವಾರ ರಾತ್ರಿ ಬಾಲಕಿಯರನ್ನು ಸ್ಕೂಟರ್‌ನಲ್ಲಿ ಚೆಚುವಾದಲ್ಲಿನ ರಬ್ಬರ್ ತೋಟಕ್ಕೆ ಕರೆದೊಯ್ದಿದ್ದು, ಅಲ್ಲಿ ಏಳರಿಂದ ಎಂಟು ಯುವಕರು ಕಾಯುತ್ತಿದ್ದರು. ತೋಟ ತಲುಪಿದ ನಂತರ ಮೊಲರೈ ಮತ್ತು ಆತನ ಸ್ನೇಹಿತರು ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಐಜಿ ಹೇಳಿದ್ದಾರೆ.

ಕೇರಳ ಸ್ಟೋರಿ ನಿಷೇಧ : ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ನೋಟೀಸ್

ನವದೆಹಲಿ, ಮೇ ೧೨: ಕೇರಳ ಸ್ಟೋರಿ ಸಿನಿಮಾ ನಿಷೇಧಕ್ಕೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ರಾಜ್ಯದಲ್ಲಿ ಚಿತ್ರವನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಿನಿಮಾ ತಂಡ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಇದೇ ವೇಳೆ ಸಿನಿಮಾ ನಿಷೇಧಕ್ಕೆ ಸಂಬAಧಿಸಿದAತೆ ತಮಿಳುನಾಡು ರಾಜ್ಯ ಸರ್ಕಾರಕ್ಕೂ ನೋಟೀಸ್ ಜಾರಿಗೊಳಿಸಿದೆ. ಸುದಿಪ್ತೋ ಸೇನ್ ನಿರ್ದೇಶಿಸಿರುವ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಕೇರಳದಿಂದ ಇಸ್ಲಾಮಿಗೆ ಮತಾಂತರಗೊAಡು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನಿAದ ನೇಮಕಗೊಂಡ ಮಹಿಳೆಯರ ಕಥೆ ಹೊಂದಿರುವ ಚಿತ್ರ ಮೇ ೫ ರಂದು ಬಿಡುಗಡೆಯಾಗಿತ್ತು.

ಬಹುಮತ ಬರದಿದ್ದರೆ ‘ಪ್ಲಾನ್ ಬಿ’-ಆರ್. ಅಶೋಕ್

ಬೆಂಗಳೂರು, ಮೇ ೧೨: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರದಿದ್ದರೆ ‘ಪ್ಲಾನ್ ಬಿ’ ಸಿದ್ಧವಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿAದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ಪಾರ್ಲಿಮೆಂಟ್ ಚುನಾವಣೆ ಇದೆ. ಅದನ್ನು ಕೂಡ ಗಮನದಲ್ಲಿಟ್ಟುಕೊಂಡು ಪೂರ್ಣ ಬಹುಮತದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ತಯಾರಿ ಮಾಡುತ್ತಿದ್ದೇವೆ. ಅಕಸ್ಮಾತ್ ಬಂದಿಲ್ಲವೆAದಾದರೆ ಬಿ ಫಾರ್ಮ್ಯುಲಾ ಕೂಡ ರೆಡಿಯಿದೆ ಎಂದರು. ಸಹಜವಾಗಿ ರಾಜಕೀಯದಲ್ಲಿ ಇಂತಹ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ನಾವು ರಾಜಕೀಯ ಪಕ್ಷದವರು, ಸನ್ಯಾಸಿಗಳಲ್ಲ. ಬಿ ಪ್ಲಾನ್ ಪ್ರಕಾರ ಚುನಾವಣಾ ತಂತ್ರಗಾರಿಕೆಯನ್ನು ಸಿದ್ಧಮಾಡಿದ್ದೇವೆ ಎಂದರು.