ಗೋಣಿಕೊಪ್ಪ, ಮೇ ೧೧: ಹಾವು ಕಚ್ಚಿ ಮಹಿಳೆ ಸಾವನಪ್ಪಿದ ಘಟನೆ ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ನಡೆದಿದೆ. ಸುಬ್ಬಲಕ್ಷಿ÷್ಮ(೬೮) ಮೃತಪಟ್ಟ ದುರ್ದೈವಿ. ಗುರುವಾರ ಬೆಳಿಗ್ಗೆ ಸತ್ಯನಾರಾಯಣ ಸ್ವಾಮಿ ಪೂಜೆಗೆ ತಯಾರಿ ನಡೆಸುತಿದ್ದ ಸಂದರ್ಭ ಫ್ರಿಡ್ಜ್ನ ಅಡಿಯಲ್ಲಿದ್ದ ಹಾವು ಕಾಲಿಗೆ ಕಚ್ಚಿದೆ. ಆಸ್ಪತ್ರೆಗೆ ಕರದೊಯ್ಯುತ್ತಿದ್ದಾಗ ತಿತಿಮತಿ ಸಮೀಪ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇವರು ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಮೋಹನ್ ನೆಲ್ಲೂರಾಯ ಅವರ ತಾಯಿ, ದಿ. ವಿಠಲ ಭಟ್ ಅವರ ಪತ್ನಿ.