ಮಡಿಕೇರಿ, ಮೇ ೧೨: ಚೆಯ್ಯಂಡಾಣೆಯಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆ - ಗಾಳಿಯಿಂದಾಗಿ ಅಲ್ಲಿನ ಕೃಷಿಪತ್ತಿನ ಸಹಕಾರ ಸಂಘದ ಗೋದಾಮುವಿನ ಮೇಲೆ ಮರಬಿದ್ದು ಹಾನಿಯುಂಟಾಗಿದೆ. ಬೃಹತ್ ಮರ ಬಿದ್ದ ಪರಿಣಾಮ ಗೋದಾಮು ಕಟ್ಟಡ ತೀವ್ರವಾಗಿ ಜಖಂಗೊAಡಿದೆ. ಮಾತ್ರ ವಲ್ಲದೆ ಇಲ್ಲಿ ಸುಮಾರು ಅಂದಾಜು ರೂ. ೩೦ ಲಕ್ಷದಷ್ಟು ಗೊಬ್ಬರ ದಾಸ್ತಾನೂ ಇದ್ದು, ಗೊಬ್ಬರಕ್ಕೂ ಹಾನಿಯಾಗಿದೆ.
ಕಟ್ಟಡದ ಮೇಲ್ಭಾಗದ ಶೀಟ್ಗಳು ಪುಡಿಪುಡಿಯಾಗಿದ್ದು, ಒಳಗೆ ನೀರು ನಿಂತ ಪರಿಣಾಮ ಅಂದಾಜು ರೂ. ೫ ಲಕ್ಷದಷ್ಟು ಮೌಲ್ಯದ ಗೊಬ್ಬರ ನಾಶವಾಗಿದೆ. ಇದರೊಂದಿಗೆ ಕಟ್ಟಡವೂ ಜಖಂಗೊAಡಿದ್ದು, ರೂ. ೭ ರಿಂದ ೮ ಲಕ್ಷದಷ್ಟು ನಷ್ಟ ಸಂಭವಿಸಿರುವುದಾಗಿ ಸಂಘದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅವರು ತಿಳಿಸಿದ್ದಾರೆ.
ಕಟ್ಟಡದ ಒತ್ತಿನಲ್ಲಿರುವ ತೋಟ ಮಾಲೀಕರೊಬ್ಬರ ನಿರ್ಲಕ್ಷö್ಯದಿಂದ ಈ ದುರಂತ ನಡೆದಿರುವುದಾಗಿ ರಾಜೇಶ್ ಅಚ್ಚಯ್ಯ ಅವರು ಹೇಳಿದ್ದಾರೆ. ಅಪಾಯ ಕಾರಿಯಾಗಿದ್ದ ಮರ ತೆರವಿಗೆ ಸಾಕಷ್ಟು ಭಾರಿ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ತೋಟ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ನೀಡುವದಾಗಿ ಅಡ್ಡಿಪಡಿಸುತ್ತಿದ್ದರು. ಅಪಾಯಕಾರಿಯಾಗಿದ್ದ ಮರ ತೆರವುಗೊಳಿಸದ್ದರಿಂದ ದುರಂತ ನಡೆದಿದೆ. ಇದೀಗ ಈ ಬಗ್ಗೆ ನಾಪೋಕ್ಲು ಪೊಲೀಸರು ಸೇರಿದಂತೆ ಕಂದಾಯ ಇಲಾಖೆಗೂ ದೂರು ನೀಡಲಾಗಿದೆ ಎಂದು ರಾಜೇಶ್ ಅಚ್ಚಯ್ಯ ಅವರು ಮಾಹಿತಿ ನೀಡಿದ್ದಾರೆ.