ವೀರಾಜಪೇಟೆಯ ೨೦ ಶಾಲೆಗಳಿಗೆ ಶೇ. ೧೦೦ ಫಲಿತಾಂಶ
ವೀರಾಜಪೇಟೆ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೀರಾಜಪೇಟೆ ತಾಲೂಕಿನ ೨೦ ಶಾಲೆಗಳು ಶೇ. ೧೦೦ ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ. ತಾಲೂಕಿನ ೫ ಸರಕಾರಿ ಶಾಲೆಗಳು, ೨ ಅನುದಾನಿತ ಹಾಗೂ ೧೩ ಖಾಸಗಿ ಶಾಲೆಗಳು ಶೇ. ೧೦೦ ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.
ವೀರಾಜಪೇಟೆಯ ಸರಕಾರಿ ಪ್ರೌಢಶಾಲೆ, ಪಾಲಿಬೆಟ್ಟದ ಸರಕಾರಿ ಪ್ರೌಢಶಾಲೆ, ತಿತಿಮತಿಯ ಮೊರಾರ್ಜಿ ಶಾಲೆ, ಪೆರುಂಬಾಡಿಯ ಮೊರಾರ್ಜಿ ಶಾಲೆ, ಬಾಳುಗೋಡುವಿನ ಏಕಲವ್ಯ ಶಾಲೆ, ದೇವಣಗೇರಿಯ ಬಿ.ಸಿ. ಪ್ರೌಢಶಾಲೆ, ಬಿರುನಾಣಿಯ ಮರೆನಾಡು ಪ್ರೌಢಶಾಲೆ, ವೀರಾಜಪೇಟೆಯ ಕಾವೇರಿ ಪ್ರೌಢಶಾಲೆ, ರೋಲಿಕ್ಸ್ ಪ್ರೌಢಶಾಲೆ, ಕೂರ್ಗ್ ವ್ಯಾಲಿ ಪ್ರೌಢಶಾಲೆ, ಬ್ರೆöÊಟ್ ಪ್ರೌಢಶಾಲೆ, ಅನ್ವರುಲ್ ಹುದಾ ಪ್ರೌಢಶಾಲೆ, ಅಮ್ಮತ್ತಿಯ ಗುಡ್ ಶೆರ್ಡ್ ಪ್ರೌಢಶಾಲೆ, ಪಾಲಿಬೆಟ್ಟದ ನೇತಾಜಿ ಪ್ರೌಢಶಾಲೆ, ಗೋಣಿಕೊಪ್ಪಲು ಕಳತ್ಮಾಡುವಿನ ಲಯನ್ಸ್ ಪ್ರೌಢಶಾಲೆ, ಸರ್ವದೈವತಾ ಪ್ರೌಢಶಾಲೆ, ಸಂತ ಥೋಮಸ್ ಪ್ರೌಢಶಾಲೆ, ಸಾಯಿ ಶಂಕರ್ ಪ್ರೌಢಶಾಲೆ, ಟಿ. ಶೆಟ್ಟಿಗೇರಿಯ ರೂಟ್ಸ್ ಪ್ರೌಢಶಾಲೆ ಹಾಗೂ ಶ್ರೀಮಂಗಲದ ಜೆ.ಸಿ. ಪ್ರೌಢಶಾಲೆ ಶೇ. ೧೦೦ ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.
ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ವೈಷ್ಣವಿ ಟಿ.ವಿ. ೬೨೦ ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ, ಗೋಣಿಕೊಪ್ಪಲಿನ ಲಯನ್ಸ್ ಪ್ರೌಢಶಾಲೆಯ ದೀತ್ಯ ದೇಚಮ್ಮ ಎಂ.ವಿ. ೬೧೮ ಅಂಕಗಳಿಸಿ ದ್ವಿತೀಯ ಹಾಗೂ ಗೋಣಿಕೊಪ್ಪಲಿನ ಸಂತ ಥೋಮಸ್ ಪ್ರೌಢಶಾಲೆಯ ಶಹೀರ ಎಸ್.ಎಂ. ಮತ್ತು ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆಯ ಶರ್ಯ ಚೋಂದಮ್ಮ ೬೧೨ ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವೀರಾಜಪೇಟೆ ಕಾವೇರಿ ಶಾಲೆ
ವೀರಾಜಪೇಟೆ: ಪರೀಕ್ಷೆ ಬರೆದ ಕಾವೇರಿ ಶಾಲೆಯ ೩೪ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸತತ ೬ನೇ ವರ್ಷ ಶೇ. ೧೦೦ರಷ್ಟು ಫಲಿತಾಂಶ