ಗಾಳಿಬೀಡು ಸರಕಾರಿ ಪ್ರೌಢಶಾಲೆ

ಮಡಿಕೇರಿ: ಮಡಿಕೇರಿ ತಾಲೂಕಿನ ಗಾಳಿಬೀಡು ಸರಕಾರಿ ಪ್ರೌಢಶಾಲೆ ೨೦೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಶೇ. ೧೦೦ ಪಡೆದಿದ್ದು, ಈ ಮೂಲಕ ಸತತವಾಗಿ ೧೨ನೇ ವರ್ಷ ಶೇ. ೧೦೦ ಫಲಿತಾಂಶವನ್ನು ಗಳಿಸಿದೆ.

ಸಂತ ಅನ್ನಮ್ಮ ಪ್ರೌಢಶಾಲೆ

ವೀರಾಜಪೇಟೆ: ಪರೀಕ್ಷೆ ಬರೆದ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ೧೯೫ ವಿದ್ಯಾರ್ಥಿಗಳಲ್ಲಿ ೧೯೦ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆ ಶೇ. ೯೭.೫ ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ

ಶನಿವಾರಸAತೆ: ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗೆ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ೧೨೦ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯರಾದ ಮೃದು ಪ್ರವೀಣ್ ೬೨೫ ಅಂಕಗಳಿಗೆ ೬೧೬ (ಶೇ. ೯೮.೫೬) ಅಂಕ, ಫಾತಿಮಾ ಥಶ್ರೀಪ್ ೬೧೧ (ಶೇ. ೯೭.೭೬) ಅಂಕ, ಡಿ. ತೇಜಸ್ವಿನಿ ೬೦೭ (ಶೇ. ೯೭.೧೨) ಅಂಕಗಳಿಸಿ ಶಾಲೆಗೆ ಮೊದಲ ೩ ಸ್ಥಾನ ಗಳಿಸಿದ್ದಾರೆ.

ದೇವಣಗೇರಿಯ ಬಿ.ಸಿ. ಪ್ರೌಢಶಾಲೆ

ವೀರಾಜಪೇಟೆ: ಇಲ್ಲಿಗೆ ಸಮೀಪದ ದೇವಣಗೇರಿಯ ಬಿ.ಸಿ. ಪ್ರೌಢಶಾಲೆಯು ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದು ಸತತವಾಗಿ ೫ ವರ್ಷ ಶೇ. ೧೦೦ ಫಲಿತಾಂಶ ಪಡೆದು ಸಾಧನೆಗೈದಿದೆ.

ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಕೂಡಿಗೆ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. ೧೦೦ ರಷ್ಟು ಫಲಿತಾಂಶ ದೊರೆತಿದೆ. ಪರೀಕ್ಷೆ ಬರೆದ ೪೬ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆಯಾಗಿದ್ದಾರೆ. ಶಾಲೆಯ ಲಿಖಿತ್ ಐ.ಜಿ. ೬೦೮/೬೨೫, ತಿಲಕ್ ಡಿ.ಸಿ. ೬೦೫/೬೨೫, ವರುಣ್ ಬಿ.ಆರ್. ೬೦೫/೬೨೫, ನಿತಿನ್ ಹೆಚ್.ಎಸ್. ೬೦೦/೬೨೫ ಅಂಕಗಳನ್ನು ಗಳಿಸಿದ್ದಾರೆ.

ಕುಶಾಲನಗರ ಮಾರುತಿ ವಿದ್ಯಾಸಂಸ್ಥೆ

ಕುಶಾಲನಗರ: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕುಶಾಲನಗರದ ಮಾರುತಿ ವಿದ್ಯಾಸಂಸ್ಥೆ ಶೇ. ೧೦೦ ರಷ್ಟು ಫಲಿತಾಂಶ ಗಳಿಸಿದೆ.

ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ

ನಾಪೋಕ್ಲು: ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯು ಶೇ. ೯೫.೩೧ ಫಲಿತಾಂಶ ದಾಖಲಿಸಿದೆ.

ಸೇಕ್ರೆಡ್ ಹಾರ್ಟ್ ಶಾಲೆ

ನಾಪೋಕ್ಲು: ಸಮೀಪದ ಸೇಕ್ರೆಡ್ ಹಾರ್ಟ್ ಶಾಲೆಯು ಶೇ. ೯೩.೩೩ ಫಲಿತಾಂಶ ದಾಖಲಿಸಿದೆ. ಕಕ್ಕಬ್ಬೆಯ ಅನುದಾನಿತ ಪ್ರೌಢಶಾಲೆ ಶೇ. ೯೩.೩೩, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ ಶೇ. ೮೫, ನಾಪೋಕ್ಲುವಿನ ಕೆಪಿಎಸ್ ಪ್ರೌಢಶಾಲೆ ಶೇ. ೮೦.೩೯, ಹೊದವಾಡ ಸರ್ಕಾರಿ ಪ್ರೌಢಶಾಲೆ ಶೇ. ೮೮.೮ ಫಲಿತಾಂಶ ಪಡೆದುಕೊಂಡಿದೆ.

ನರಿಯAದಡ ಕೇಂದ್ರ ಪ್ರೌಢಶಾಲೆ

ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ದೊರೆತಿದೆ.

ಶಾಲೆಗೆ ಫೌಝಿಯಾ ಕೆ.ಯು. ೫೬೨ ಅಂಕ ಪಡೆದು ಪ್ರಥಮ, ಅಜಯ್ ವಿ.ಯಂ. ೫೫೭ ಅಂಕ ಪಡೆದು ದ್ವಿತೀಯ, ಶರಣ್ಯ ಪಿ.ಟಿ. ೫೧೦ ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಕೂಡ್ಲೂರು ಪ್ರೌಢಶಾಲೆ

ಕೂಡಿಗೆ: ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಗೆ ಶೇ. ೯೩.೭೫ ಲಭಿಸಿದೆ. ೧೬ ವಿದ್ಯಾರ್ಥಿಗಳ ಪೈಕಿ ೧೫ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿನಿ ಸಂಜನಾ ಶೇ. ೯೨.೬೪ ಹಾಗೂ ಸೃಜನ್ ಗೌಡ ಶೇ. ೮೮.೮೮ ಫಲಿತಾಂಶ ಪಡೆದು ಶಾಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆ

ಸುಂಟಿಕೊಪ್ಪ: ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆ ಶೇ. ೧೦೦ ಫಲಿತಾಂಶ ಪಡೆದಿದೆ.

ಶ್ರೀಲಕ್ಷಿö್ಮ ಎಂ.ವಿ. ೬೦೪ ಅಂಕಗಳಿಸಿ ಶೇ. ೯೬.೬೪ ಅಂಕಗಳನ್ನು ಗಳಿಸಿದ್ದು, ತಮ್ಮಯ್ಯ ಕೆ.ಎಸ್. ಶೇ. ೯೬.೩೨ ಅಂಕಗಳನ್ನು ಗಳಿಸಿದ್ದಾರೆ. ಯಶಸ್ವಿನಿ ಶೆಟ್ಟಿ, ಅನನ್ಯ ಅರವಿಂದ್ ಮತ್ತು ನೇಹಾ ಅವರುಗಳು ಶೇ. ೯೫.೦೨ ಅಂಕಗಳಿಸಿ ಶಾಲೆಗೆ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.

ಸುಂಟಿಕೊಪ್ಪ ಸಂತ ಮೇರಿ ಶಾಲೆ

ಸುಂಟಿಕೊಪ್ಪ: ಸಂತ ಮೇರಿ ಶಾಲೆಗೆ ಶೇ. ೧೦೦ ಫಲಿತಾಂಶ ಬಂದಿದೆ. ಫಾತೀಮಾ ರಿಶಾನ ೬೦೪ ಶೇ. ೯೬.೬೪, ಮಾನ್ಯಶ್ರೀ ಎಂ.ಎಸ್. ೯೪.೮೮, ಶ್ರೇಯಾ ವಿ.ಆರ್. ೯೪.೮೮, ಸಂಜನ ಸಾಲಿಯಾನ ೯೨.೬೪ ಪಡೆದು ಶಾಲೆಗೆ ಮೊದಲ ೩ ಸ್ಥಾನ ಗಳಿಸಿದ್ದಾರೆ.

ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ

ಸುಂಟಿಕೊಪ್ಪ: ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ೪೫ ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ೪೩ ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ. ೯೫.೫ ಫಲಿತಾಂಶ ಪಡೆದುಕೊಂಡಿತು.

ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ

ಸುಂಟಿಕೊಪ್ಪ: ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ ೩೦ ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ೨೫ ಮಂದಿ ಮಕ್ಕಳು ಉತ್ತೀರ್ಣರಾಗಿದ್ದಾರೆ.

೭ನೇ ಹೊಸಕೋಟೆ ಸರಕಾರಿ ಪ್ರಾಢಶಾಲೆ

ಸುಂಟಿಕೊಪ್ಪ: ೭ನೇ ಹೊಸಕೋಟೆ ಸರಕಾರಿ ಪ್ರಾಢಶಾಲೆಯ ೨೧ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆಯನ್ನು ಎದುರಿಸಿದ ಎಲ್ಲರೂ ಉತ್ತೀರ್ಣಗೊಂಡಿದ್ದು, ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ.

ಪಾರಾಣೆ ಪ್ರೌಢಶಾಲೆ

ಚೆಯ್ಯಂಡಾಣೆ: ಪಾರಾಣೆ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ದೊರೆತಿದೆ.

ಸತತವಾಗಿ ನಾಲ್ಕು ಬಾರಿ ಶೇ. ೧೦೦ ಫಲಿತಾಂಶ ಗಳಿಸಿದೆ. ಒಟ್ಟು ೨೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಶಾಲೆಗೆ ಮೋಹಿತ್ ಕೆ.ಯು. ೫೭೬ ಅಂಕ ಪಡೆದು ಪ್ರಥಮ, ಫಾತಿಮತ್ ಇರ್ಷಾನ ಡಿ.ಐ. ೫೬೦ ದ್ವಿತೀಯ, ರುಕ್ಷನಾ ವೈ.ಹೆಚ್. ೫೨೨ ತೃತೀಯ ಸ್ಥಾನ ಪಡೆದಿದ್ದಾರೆ.

(ಮುಂದುವರಿಯುವುದು)