ಸಿದ್ದಾಪುರ, ಮೇ ೧೧: ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯೊಂದು ಸಿದ್ದಾಪುರ ಪಟ್ಟಣದಿಂದ ಬಸ್ಸು ನಿಲ್ದಾಣಕ್ಕೆ ರಾತ್ರಿ ಲಗ್ಗೆಯಿಟ್ಟು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಬುಧವಾರ ರಾತ್ರಿ ಸಿದ್ದಾಪುರದ ಪಟ್ಟಣದ ಸಮೀಪವಿರುವ ಕುರುಬರಮೊಟ್ಟೆ ಕಾಫಿ ತೋಟದೊಳಗಿನಿಂದ ಕಾಡಾನೆಯೊಂದು ಪಟ್ಟಣದ ಮೂಲಕ ಬಸ್ಸು ನಿಲ್ದಾಣಕ್ಕೆ ಬಂದಿದೆ. ದಾರಿ ತಪ್ಪಿ ಬಂದ ಕಾಡಾನೆಗೆ ಯಾವ ದಿಕ್ಕಿಗೆ ಹೋಗಬೇಕೆಂದು ತಿಳಿಯದೇ ಕೆಲಕಾಲ ಸಿದ್ದಾಪುರ ಬಸ್ಸು ನಿಲ್ದಾಣದ ಬಳಿ ಸುತ್ತಾಡಿದೆ. ನಂತರ ಪಟ್ಟಣದ ಗುಹ್ಯ ಅಗಸ್ತೆö್ಯÃಶ್ವರ ಸಹಕಾರ ಸಂಘದ ಬ್ಯಾಂಕಿನ ಮುಂಭಾಗದಲ್ಲೇ ನಡೆದುಕೊಂಡು ಹೋಗಿದೆ. ಇದಾದ ಬಳಿಕ ಗ್ರಾ.ಪಂ ಸಮೀಪದ ಮನೆಯೊಂದರ ಬಳಿ ನಿಂತಿದೆ. ಕಾಡಾನೆಯು ರಾತ್ರಿ ಬಂದಿರುವ ವಿಚಾರ ತಿಳಿದ ಸಾರ್ವಜನಿಕರು ಆನೆಯನ್ನು ಓಡಿಸಲು ಕೂಗಾಡಿದರು. ಸಾರ್ವಜನಿಕರ ಕಿರುಚಾಟಕ್ಕೆ ಬೆದರಿದ ಕಾಡಾನೆಯು ತಾನು ಬಂದ ಮಾರ್ಗ ವಾಗಿ ಬಸ್ಸು ನಿಲ್ದಾಣದ ಮೂಲಕ ಕಾಫಿ ತೋಟದತ್ತ ಮರೆಯಾಗಿದೆ. ಕಾಡಾನೆಯು ಬಸ್ಸು ನಿಲ್ದಾಣದಲ್ಲಿ ಸುತ್ತಾಡಿದ ದೃಶ್ಯವನ್ನು ಆಟೋ ಚಾಲಕ ಜಲೀಲ್
(ಮೊದಲ ಪುಟದಿಂದ) ಎಂಬವರು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕಾಡಾನೆಯು ಬಸ್ಸು ನಿಲ್ದಾಣಕ್ಕೆ ಲಗ್ಗೆಯಿಟ್ಟ ಸಂದರ್ಭದಲ್ಲಿ ಬಸ್ಸು ನಿಲ್ದಾಣದ ಬಳಿ ಗ್ರಾ.ಪಂ. ಕಸದ ರಾಶಿಯನ್ನು ಸುರಿಯಲಾದ ಜಾಗದಲ್ಲಿ ಬಂದು ಹೋಗಿದೆ. ಅಲ್ಲದೇ ರಾತ್ರಿ ಬಸ್ಸು ನಿಲ್ದಾಣದಲ್ಲಿ ಜನರ ಓಡಾಟ ಕಡಿಮೆಯಾದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಇದಲ್ಲದೆ ಗುಹ್ಯ ಗ್ರಾಮದ ಬಿಜಿಎಸ್ ಶಾಲೆಯ ಸಮೀಪದ ಕಾಫಿ ತೋಟಗಳಲ್ಲಿ ಮೂರು ಕಾಡಾನೆಗಳು ಬೀಡು ಬಿಟ್ಟಿದ್ದು ಶಾಲಾ ಮಕ್ಕಳು ಭಯಭೀತರಾಗಿದ್ದಾರೆ. ಗ್ರಾಮಸ್ಥರು ಕೂಡ ಕಾಲುದಾರಿಯ ಮೂಲಕ ತೆರಳಲು ಆತಂಕಪಡುವAತಹ ಪರಿಸ್ಥಿತಿ ನಿರ್ಮಾಣವಾಗಿದೆ. -ವಾಸು.