ಸುಂಟಿಕೊಪ್ಪ, ಮೇ ೧೧: ಸ್ವಸ್ಥ ಸಂಸ್ಥೆಯ ಸಮುದಾಯ ಆಧಾರಿತ ಕಾರ್ಯಕ್ರಮದ ಸಮೀಕ್ಷೆಯಿಂದ ಗುರುತಿಸಲ್ಪಟ್ಟ ಕೆದಕಲ್ ಗ್ರಾಮದ ಶಶಿ ಎಂಬವರ ಮಗ ಸತೀಶ್ ಎಂಬ ವಿಶೇಷಚೇತನನಿಗೆ ಸುಂಟಿಕೊಪ್ಪದ ಲಯನ್ಸ್ ಕ್ಲಬ್ ವತಿಯಿಂದ ಉಚಿತವಾಗಿ ವಾಕರ್ ಅನ್ನು ನೀಡಲಾಯಿತು. ಕಳೆದ ೪ ವರ್ಷಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ತೀವ್ರತರ ವಿಕಲತೆಯಿಂದ ಬಳಲುತ್ತಿದ್ದ ಸತೀಶ್ ಅವರಿಗೆ ವಾಕರ್ ನೀಡುವುದರ ಜೊತೆಗೆ ಲಯನ್ಸ್ ಮತ್ತು ಸ್ವಸ್ಥ ಸಂಸ್ಥೆಯು ಆತ್ಮ ಸ್ಥೆöÊರ್ಯ ತುಂಬಿತು. ನಂತರ ಲಯನ್ಸ್ನ ಹಿರಿಯ ಸದಸ್ಯರಾದ ಶ್ರೀನಿವಾಸ್ ಅವರು ಮಾತನಾಡಿ, ಸತೀಶ್ ಖಂಡಿತಾ ಮುಂದೊAದು ದಿನ ನಡೆದಾಡುವಲ್ಲಿ ಸಂಶಯವೇ ಇಲ್ಲ ಆದರೆ ಅವರಿಗೆ ಕುಟುಂಬದ ಸದಸ್ಯರು ಹೆಚ್ಚು ಸಹಕಾರ ನೀಡಿ ಒಂದಷ್ಟು ವರ್ಷ ‘ಫಿಸಿಯೋಥೆರಪಿ’ ಮತ್ತು ಸ್ಪೀಚ್ ಥೆರಪಿ ಮಾಡಿಸಲು ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಸ್ಥ ಶಾಲೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಮಾತನಾಡಿ, ಇನ್ನು ಹೆಚ್ಚಿನ ಶಸ್ತçಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ವಿಕಲಚೇತನರ ಇಲಾಖೆಯಿಂದ ವೈದ್ಯಕೀಯ ಪರಿಹಾರ ನಿಧಿಯಿಂದ ಧನಸಹಾಯ ಮಾಡಿಸಿಕೊಡುವುದಾಗಿ ಮತ್ತು ಇಲಾಖೆಯ ಎಲ್ಲಾ ತರದ ಸಾಮಾಜಿಕÀ ಭದ್ರತೆಯ ಯೋಜನೆಗಳನ್ನು ಸ್ವಸ್ಥದ ಮೂಲಕ ಕೊಡಿಸಿಕೊಡುವುದಾಗಿ ತಿಳಿಸಿದರು. ಲಯನ್ಸ್ನ ಪ್ರಾದೇಶಿಕ ಅಧ್ಯಕ್ಷ ಕೊಟ್ಟೇರ ಶಾಶ್ವತ್ ಬೋಪಣ್ಣ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಯಾವುದೇ ತರಹದ ಸಹಾಯ ಬೇಕಾದಲ್ಲಿ ನಮ್ಮಿಂದಾಗು ವಷ್ಟು ಸಹಾಯ ಮಾಡಲು ನಾವು ನಿಮ್ಮೊಟ್ಟಿಗೆ ಇರುತ್ತೇವೆಂದು ಧೈರ್ಯ ತುಂಬಿದರು. ಈ ಸಂದರ್ಭ ಸತೀಶ್ ತಾಯಿ, ಸುಂಟಿಕೊಪ್ಪ ಲಯನ್ಸ್ ಕ್ಲಬ್‌ನ ಅಧ್ಯಕ್ಷ ದಾಸಂಡ್ರ ಚಾಮನ್ ಚಿಟ್ಟಿಯಪ್ಪ, ಪ್ರಾದೇಶಿಕ ಅಧ್ಯಕ್ಷ ಕೊಟ್ಟೇರ ಶಾಶ್ವಂತ್ ಬೋಪಣ್ಣ, ಲಯನ್ಸ್ನ ಹಿರಿಯ ಸದಸ್ಯ ಶ್ರೀನಿವಾಸ್, ಪ್ರೀತಂ ಪ್ರಭಾಕರ್ ಉಪಸ್ಥಿತರಿದ್ದರು.