ಕಣಿವೆ, ಮೇ ೧೧: ಜಿಲ್ಲೆಯ ಗಡಿ ತಾಲೂಕು ಸುಳ್ಯದ ಅರಣ್ಯ ವ್ಯಾಪ್ತಿಯ ಕೆರೆಯಂಗಳ ಒಂದರಲ್ಲಿ ಅನಾಥವಾಗಿದ್ದ ಒಂದೂವರೆಯಿAದ ಎರಡು ತಿಂಗಳ ಪ್ರಾಯದ್ದು ಎಂದು ಅಂದಾಜಿಸಲಾಗಿದ್ದ ಹಸುಗೂಸು ಕಾಡಾನೆಯ ಗಂಡು ಮರಿ ಕಳೆದ ಕೆಲ ದಿನಗಳ ಹಿಂದೆ ದುಬಾರೆಯ ಸಾಕಾನೆಯ ಶಿಬಿರದಲ್ಲಿ ಅಸು ನೀಗಿದೆ.

ಸುಳ್ಯದ ಅಲೆಟ್ಟಿ ಎಸ್ಟೇಟ್ ವ್ಯಾಪ್ತಿಯ ಕೆರೆಯಲ್ಲಿ ಅಮ್ಮನೊಂದಿಗೆ ನೀರು ಕುಡಿಯಲು ಬಂದಿದ್ದ ಈ ಪುಟ್ಟ ಮರಿ ಅಲ್ಲೇ ಬಾಕಿಯಾಗಿತ್ತು. ಮರುದಿನ ಅರಣ್ಯ ಇಲಾಖೆಗೆ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್, ತಮ್ಮ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ತೆರಳಿ ಆನೆ ಮರಿಯನ್ನು ರಕ್ಷಿಸಿದ್ದರು. ತನ್ನ ತಾಯಿಯೊಂದಿಗೆ ಸೇರಿಸಿದಾಗ ತಾಯಿ ತನ್ನ ಮರಿಯನ್ನು ನಿರಾಕರಿಸಿತ್ತು; ಹಾಗಾಗಿ ಮರಿ ಆನೆ ಊರಿನತ್ತಲೇ ಬರಲು ಹವಣಿಸುತ್ತಿತ್ತು. ಈ ಬಗ್ಗೆ ಇಲಾಖೆಯವರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರೂ ಮರಿಯನ್ನು ತಾಯಿಯೊಂದಿಗೆ ಸೇರಿಸಲು ಸಾಧ್ಯವಾಗಲಿಲ್ಲ. ಕಂದಮ್ಮನನ್ನು ಅಗಲಿದ ತಾಯಿ ಎರಡು ದಿನಗಳ ಬಳಿಕ ಈ ಕಾಡಾನೆ ಮರಿಯನ್ನು ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರಕ್ಕೆ ತಂದು ಆರೈಕೆಗೆ ಒಳಪಡಿಸಲಾಗಿತ್ತು. ಈ ಹಸುಳೆಯ ಆರೈಕೆಯನ್ನು ಮಾವುತ ಕಿರಣ ಎಂಬ ಬಾಲಕನಿಗೆ ವಹಿಸಲಾಗಿತ್ತು.

ದುಬಾರೆ ಸಾಕಾನೆ ಶಿಬಿರಕ್ಕೆ ಬಹಳಷ್ಟು ಮಂದಿ ಪ್ರವಾಸಿಗರು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಕಂದಮ್ಮನ ಆರೈಕೆ ಅಡ್ಡಿ - ಅನಾನುಕೂಲ ವಾಗುತ್ತದೆ ಎಂಬ ಕಾರಣಕ್ಕೆ ಮಾವುತ ಕಿರಣ ಸಾಕಾನೆ ಶಿಬಿರದಿಂದ ಅನತಿ ದೂರದ ತನ್ನ ಮನೆಯಂಗಳದ ಮರವೊಂದರಲ್ಲಿ ಕಟ್ಟಿ ಲಾಲನೆ ಮಾಡುತ್ತಿದ್ದನು.

ಅಧಿಕಾರಿಗಳ ನಿರ್ಲಕ್ಷö್ಯ

ದುಬಾರೆಯ ಸಾಕಾನೆಯ ಶಿಬಿರಕ್ಕೆ ಆಕಸ್ಮಿಕ ಅತಿಥಿಯಾಗಿ ಬಂದ ಮರಿಯಾನೆ ಮರಿಯನ್ನು ಶಿಬಿರದ ಅರಣ್ಯಾಧಿಕಾರಿಗಳು ಒಂದಷ್ಟು ಜವಬ್ದಾರಿ ವಹಿಸಿ ಲಾಲನೆ ಪಾಲನೆ ಮಾಡಿದ್ದರೆ ಇದನ್ನು ಉಳಿಸಿಕೊಳ್ಳಬಹುದಿತ್ತೋ.... ಏನೋ.... ಆದರೆ ಶಿಬಿರದ ರÀಂಜನ್ ಎಂಬಾನೆಯ ಮಾವುತ ಕಿರಣ ಎಂಬಾತನಿಗೆ ವಹಿಸಿದ್ದರು. ಅಲ್ಲೇ ತನ್ನ ಮನೆಯಂಗಳದ ಹುಣಸೆ ಮರದ ಬುಡಕ್ಕೆ ಈ ಮರಿಯನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಬೆಳಗ್ಗೆ ಸಂಜೆ ಒಂದಷ್ಟು ಹಾಲಿನ ಪುಡಿಯೊಂದಿಗೆ ಬಿಸಿ ನೀರು ಸೇರಿಸಿ ಕುಡಿಸಲಾಗುತ್ತಿತ್ತು.

ಜೊತೆಗೆ ಒಂದು ಹೊತ್ತಿಗೆ ಕುಸÀಲಕ್ಕಿ

(ಮೊದಲ ಪುಟದಿಂದ) ಗಂಜಿಯನ್ನು ನೀಡಲಾಗುತ್ತಿತ್ತು. ಆದರೆ ಮೊದಲೇ ಮಕ್ಕಳಾಟದ ಹುಡುಗಾಟದ ಈ ಮರಿ ಮಣ್ಣಿನ ಧೂಳನ್ನು ಮೆಲ್ಲುತ್ತಾ, ಅಲ್ಲೇ ಹಾಗೇ ಮರದ ಬುಡದಲ್ಲಿ ಹಗಲು ವೇಳೆ ಮಲಗಿ ನಿದ್ರಿಸುತ್ತಿತ್ತು. ಇನ್ನು ಸಂಜೆಯಾದೊಡನೆ ತನ್ನ ಅಮ್ಮನನ್ನು ನೆನೆನೆನೆದು ಕಣ್ಣೀರಿಟ್ಟು ಘೀಳಿಡುತ್ತಿತ್ತು.

ಇದರ ಆರ್ತನಾದವನ್ನು ಕೇಳಲಾಗದೇ, ಇದರ ಸಂಕಟವನ್ನು ಸಹಿಸಲಾಗದ ಈ ಮಾವುತ ಕಿರಣ್ ಮನೆಯವರು ಸಮಾಧಾನಿಸಿ ಮಲಗಿಸಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದರು. ಮಧ್ಯರಾತ್ರಿಯಾದರೂ ಸರಿಯೇ ಈ ಮರಿಯನ್ನು ಮಲಗಿಸಿದ ಬಳಿಕವೇ ತಾವು ನಿದ್ರಿಸುತ್ತಿದ್ದರು ಎನ್ನಲಾಗಿದೆ.

ಗಂಟಲಿನಲ್ಲಿ ಧೂಳು - ಕೆಸರು ?

ಈ ಕಾಡಾನೆ ಮರಿ ತಾಯಿಯಿಂದ ಬೇರ್ಪಟ್ಟ ಸಂದರ್ಭ ಕೆರೆಯಲ್ಲಿ ಹೂತಿದ್ದಾಗ ಸೊಂಡಿಲಿನಿAದ ಕೆಸರು ನೀರು ಕುಡಿದಿರುವ ಸಂಭವವಿದೆ. ಜೊತೆಗೆ ಅದನ್ನು ದುಬಾರೆಗೆ ತಂದು ಮರದಡಿ ಕಟ್ಟಿ ಲಾಲನೆ ಮಾಡುವ ಸಂದರ್ಭದಲ್ಲೂ ಕೂಡ ಸೊಂಡಿಲಿನಿAದ ಧೂಳು ಹೋಗಿ ಅನಾರೋಗ್ಯಕ್ಕೆ ತುತ್ತಾಗಿರುವ ಬಗ್ಗೆ ವೈದ್ಯರು ಹೇಳುತ್ತಾರೆ.

ಏನೇ ಇರಲಿ, ಮರಿಯಾನೆ ಮರಿ ಸೆರೆ ಸಿಕ್ಕ ಸಂದರ್ಭ ಅದನ್ನು ಬಹಳಷ್ಟು ಜಾಗೃತಿಯಿಂದ ಆರೈಕೆ ಮಾಡಬೇಕಿತ್ತು. ಇದು ಮಾವುತರೇ ಮಾಡಿದರೂ ಕೂಡ ಒಂದಷ್ಟು ದಿನ ಅದು ಚೇತರಿಸಿಕೊಂಡು ಶಿಬಿರಕ್ಕೆ ಹೊಂದಿಕೊAಡು ಚೆನ್ನಾಗಿ ಅನ್ನಾಹಾರ ಸ್ವೀಕರಿಸುವಷ್ಟು ಕಾಲ ಶಿಬಿರದಲ್ಲಿನ ಜವಾಬ್ದಾರಿಯುತ ಅರಣ್ಯಾಧಿಕಾರಿಗಳು ಹಾಗೂ ಸಂಬAಧಪಟ್ಟ ಪಶು ವೈದ್ಯರು ಮಾರ್ಗದರ್ಶನ ಮಾಡಬೇಕಿತ್ತು. ಆದರೆ ಈ ಆನೆ ಮರಿ ವಿಷಯದಲ್ಲಿ ಇಲ್ಲಿ ನಿರ್ಲಕ್ಷö್ಯ ಎದ್ದು ಕಂಡಿದೆ. ಅದರಿಂದಾಗಿ ಕಾಡಾನೆ ಮರಿ ಅಸು ನೀಗಿದೆ ಎನ್ನಲಾಗುತ್ತಿದೆ.

ಅಂತ್ಯಕ್ರಿಯೆ

ಸಾಕಷ್ಟು ಬಳಲಿ ನರಳಿದ ಕಾಡಾನೆ ಮರಿಗೆ ಡಾ.ರಮೇಶ್ ಹಾಗೂ ಡಾ.ಚೆಟ್ಟಿಯಪ್ಪ ನೀಡಿದ ಅಂತಿಮ ವೈದ್ಯೋಪಚಾರ ಫಲ ನೀಡಲಿಲ್ಲ. ಬಳಿಕ ಸಾಕಾನೆ ಶಿಬಿರದಲ್ಲಿ ಗುಂಡಿ ತೆಗೆದು ಕಾಡಾನೆ ಮರಿಯ ಪಾರ್ಥೀವ ಕಳೇಬರಕ್ಕೆ ಪೂಜೆ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.

( ವರದಿ : ಕೆ.ಎಸ್.ಮೂರ್ತಿ )