ಮಡಿಕೇರಿ, ಮೇ ೧೧: ಕೊಡಗು ಜಿಲ್ಲೆಯ ಕಕ್ಕಬ್ಬೆಯಲ್ಲಿ ಮಾತ್ರ ಆಯೋಜನೆಗೊಳ್ಳುತ್ತಿರುವ ವಿಶಿಷ್ಟ ರೀತಿಯ ಸ್ಪರ್ಧೆಯಾದ ರಿವರ್ ಸ್ವಿಮ್ಮಿಂಗ್ ಸ್ಪರ್ಧೆ ಈ ಬಾರಿ ತಾ. ೨೭ ರಂದು ಜರುಗಲಿದೆ.
ಕಕ್ಕಬ್ಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ೨೦೧೮ ರಲ್ಲಿ ರಾಷ್ಟçದಲ್ಲೇ ಪ್ರಥಮ ಎಂಬAತೆ ರಿವರ್ ಸ್ವಿಮ್ಮಿಂಗ್ (ಈಜು) ಸ್ಪರ್ಧೆಯನ್ನು ಆಯೋಜಿಸಿದ್ದು, ರಾಜ್ಯ ಹಾಗೂ ಇತರ ರಾಜ್ಯಗಳಿಂದಲೂ ಸೇರಿ ಸುಮಾರು ೨೦೦ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ನಂತರದಲ್ಲಿ ಕೊರೊನಾ ಕಾರಣದಿಂದಾಗಿ ಮೂರು ವರ್ಷ ಸ್ಪರ್ಧೆ ನಡೆದಿರಲಿಲ್ಲ. ೨೦೨೨ ರಲ್ಲಿ ಎರಡನೇ ವರ್ಷದ ಸ್ಪರ್ಧೆ ನಡೆದಿದ್ದು, ಇದರಲ್ಲಿ ಸುಮಾರು ೧೨೫ ಮಂದಿ ಪಾಲ್ಗೊಂಡಿದ್ದರು. ಇದೀಗ ಮೂರನೇ ವರ್ಷದ ಸ್ಪರ್ಧೆಯನ್ನು ತಾ. ೨೭ ರಂದು ಏರ್ಪಡಿಸಲಾಗಿದೆ.
ಕಕ್ಕಬ್ಬೆ ಪಟ್ಟಣದಲ್ಲೇ ಬರುವ ಕಕ್ಕಬ್ಬೆ ಹೊಳೆಯಲ್ಲಿ ಈ ಸ್ಪರ್ಧೆ ಜರುಗಲಿದೆ. ವಿವಿಧ ವಯೋಮಾನದ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ. ಬಾಲಕ - ಬಾಲಕಿಯರು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಈ ಬಾರಿ ಸುಮಾರು ೨೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿರುವುದಾಗಿ ಕಕ್ಕಬ್ಬೆ ರಿವರ್ ಸ್ವಿಮ್ಮಿಂಗ್ ಕ್ಲಬ್‌ನ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಅವರು ತಿಳಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಸುಮಾರು ೫೮ ಮಕ್ಕಳು ಶಿಬಿರದ ಮೂಲಕ ಈಜು ಕಲಿತಿದ್ದು, ಎಲ್ಲರೂ ಈ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ೧೦೦ ಮೀಟರ್, ೨೦೦ ಮೀಟರ್, ೧೦೦೦ ಮೀಟರ್‌ನ ಸ್ಪರ್ಧೆ ನಡೆಯಲಿದ್ದು, ರಾಜ್ಯ ಹಾಗೂ ಇತರೆಡೆಗಳಿಂದ ಆಸಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೆಚ್ಚಿನ ಮಾಹಿತಿಗೆ ೮೧೦೫೨೭೮೯೫೦ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.