ಮಡಿಕೇರಿ ಮೇ ೧೦: ರಾಜ್ಯ ಜೂನಿಯರ್ ಪುರುಷರ ಹಾಕಿ ತಂಡಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ. ೧೨ ರಂದು ೧೦ ಗಂಟೆಗೆ ಬೆಂಗಳೂರು ಶಾಂತಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಅರೇನಾದಲ್ಲಿ ನಡೆಯಲಿದೆ.

೨೦೦೪ ಜನವರಿ ೧ ಹಾಗೂ ನಂತರದಲ್ಲಿ ಜನಿಸಿದವರು ಭಾಗವಹಿಸಲು ಅರ್ಹರಿದ್ದಾರೆ. ಆಯ್ಕೆಯಾದವರು ಜೂನ್‌ನಲ್ಲಿ ನಡೆಯಲಿರುವ ಜೂನಿಯರ್ ಪುರುಷರ ರಾಷ್ಟಿçÃಯ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಹಾಕಿ ಕರ್ನಾಟಕ ಪ್ರಕಟಣೆ ತಿಳಿಸಿದೆ.