ಚೆಯ್ಯಂಡಾಣೆ, ಮೇ ೧೧: ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆ ಗಾಳಿಗೆ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಸಮೀಪದ ತೋಟದಲ್ಲಿದ್ದ ಬೃಹತ್ ಗಾತ್ರದ ಮರ ಗೋದಾಮಿನ ಕಟ್ಟಡದ ಮೇಲೆ ಉರುಳಿದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿದ್ದು, ಗೋದಾಮಿ ನೊಳಗೆ ನೀರು ನುಗ್ಗಿ ಗೊಬ್ಬರ ಮತ್ತಿತರ ವಸ್ತುಗಳು ಹಾನಿಯಾಗಿವೆ.