ಮಡಿಕೇರಿ, ಮೇ ೧೧: ಕೊಡವ ತಕ್ಕ್ ಎಳ್ತ್ಕಾರಡ ಕೂಟ ವೀರಾಜಪೇಟೆ ಹಾಗೂ ಅಖಿಲ ಕೊಡವ ಸಮಾಜದ ಆಶ್ರಯದಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ೮ ರಿಂದ ೧೫ ರ ವಯೋಮಿತಿಯ ಬಾಲಕರಿಗೆ ಕೊಡವ ನಡ್ಪು-ಪಡಿಪು ಶಿಬಿರ ಆಯೋಜಿಸಲಾಗಿದೆ.
ತಾ. ೧೫ ರಿಂದ ೨೬ ರತನಕ ಬೆಳಿಗ್ಗೆ ೧೦.೩೦ ರಿಂದ ೧೨ ಗಂಟೆಯವರೆಗೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಈ ಶಿಬಿರ ಜರುಗಲಿದೆ. ಒಕ್ಕಣೆ ಕೆಟ್ಟುವೊ, ತಪ್ಪಡಕ ಕೆಟ್ಟುವೊ, ಚೆಕ್ವಸ್ತç, ರೇಷ್ಮೆವಸ್ತç ಕೆಟ್ಟುವೊ, ಕುಪ್ಯ-ಚೇಲೆ ಕೆಟ್ಟುವೊ, ಬಾಳೋಪಾಟ್ ಹಾಗೂ ಬೊಳಕಾಟ್ ಅನ್ನು ಶಿಬಿರದಲ್ಲಿ ಕಲಿಸಲಾಗುವುದು.
ಈ ಶಿಬಿರಕ್ಕೆ ಕದನೂರಿನ ಕೊಟ್ಟೋಳಿ ಕೊಡವ ಸಂಘವೂ ಸಹಕಾರ ನೀಡುತ್ತಿದೆ. ವಿವರಕ್ಕೆ ೯೪೪೮೩೨೬೦೧೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.