ವೀರಾಜಪೇಟೆ, ಮೇ ೯: ಹಿಂದೂ ಸಂಘಟನೆಯ ಕಾರ್ಯಕರ್ತರು ಇಂದು ಮಡಿಕೇರಿ ತಾಲೂಕಿನಲ್ಲಿರುವ ಕರಡದ ಮಲೆತಿರಿಕೆ ದೇವಾಲಯದಲ್ಲಿ ಶ್ರಮದಾನ ಮಾಡುವ ಮೂಲಕ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಗೆಲ್ಲುವಂತೆ ಪ್ರಾರ್ಥನೆ ಮಾಡಿ ತಾ. ೮ ರಂದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರಾಜಪೇಟೆ ಭಾಗದ ಹಿಂದೂ ಸಂಘಟನೆಯ ಮಾಳೇಟಿರ ಸನ್ನಿ, ತರ್ಮೆಮೊಟ್ಟೆ ಪೊನ್ನಪ್ಪ, ಮಂಜೇಶ, ಕಿಶೋರ್ ಪೂಜಾರಿ, ಗಗನ್, ಬಿದ್ದಪ್ಪ, ಕೆ.ಎಂ. ಅಯ್ಯಪ್ಪ (ಮಣಿ) ಇನ್ನಿತರರು ಭಾಗವಹಿಸಿದ್ದರು.