ಮಡಿಕೇರಿ ಮಹದೇವಪೇಟೆ ನಿವಾಸಿ, ಮಹೇಶ್ ಗ್ಯಾಸ್ ಏಜೆನ್ಸಿ ಮಾಲೀಕ, ಮಹೇಶ್ ಎಂಟರ್‌ಪ್ರೆöÊಸಸ್ ಪಾಲುದಾರ, ಹಲವು ಸಂಘ-ಸAಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹೆಚ್.ಸಿ. ಸುಬ್ರಮಣಿ (೮೦) ಅವರು ತಾ. ೮ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೦ ರಂದು (ಇಂದು) ಬೆಳಿಗ್ಗೆ ನಡೆಯಲಿದೆ.

ನಗರ ಬಿಜೆಪಿ ಉಪಾಧ್ಯಕ್ಷರಾಗಿ, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷರಾಗಿ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಸಮಿತಿ ಟ್ರಸ್ಟಿ ಆಗಿ, ಹಿಂದೂ ರುದ್ರ ಭೂಮಿ ಸಮಿತಿ ಕಾರ್ಯಾಧ್ಯಕ್ಷರಾಗಿ, ಟೌನ್ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಸುಬ್ರಮಣಿ ಮಡಿಕೇರಿ ಪುರಸಭೆಯ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.