ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಮಂಥರ್‌ಗೌಡ ಅವರ ಪರವಾಗಿ ಕಾಂಗ್ರೆಸ್ ಪ್ರಮುಖರು ತಾ. ೭ ರಂದು ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ಮಾಡಿದರು. ನಗರ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್, ಡಿಸಿಸಿ ಪ್ರಮುಖ ಅಬ್ದುಲ್‌ರಜಾಕ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಯಾಕೂಬ್ ಇತರ ಪ್ರಮುಖರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರಕಾರದ ಸಾಧನೆ, ಮುಂದಿನ ಯೋಜನೆಗಳ ಬಗ್ಗೆ ಮನವರಿಕೆ ಮಾಡುವದರೊಂದಿಗೆ ಮತಯಾಚನೆ ಮಾಡಿದರು.ಮಾದಾಪುರ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರ ಪರ, ಚಲನಚಿತ್ರ ನಟ ಸಾಧು ಕೋಕಿಲ ಅವರು ಮಾದಾಪುರ ವ್ಯಾಪ್ತಿಯಲ್ಲಿ ತಾ. ೭ ರಂದು ಪ್ರಚಾರ ನಡೆಸಿದರು.

ಈ ಸಂದರ್ಭ ಪಕ್ಷದ ಪ್ರಮುಖರಾದ ಹೆಚ್.ಎಸ್. ಚಂದ್ರಮೌಳಿ, ಬಿ.ಬಿ. ಸತೀಶ್, ಕೆ.ಎಂ. ಲೋಕೇಶ್, ಬಿ.ಈ. ಜಯೇಂದ್ರ, ಸುಜು ತಿಮ್ಮಯ್ಯ, ಹಣಕೋಡು ಸುರೇಶ್ ಮತ್ತಿತರರು ಇದ್ದರು. ನಂತರ ಗೌಡಳ್ಳಿ, ದೊಡ್ಡಮಳ್ತೆ, ಹೊನ್ನಮ್ಮನ ಕೆರೆ, ಗುಡುಗಳಲೆ ಸೇರಿದಂತೆ ಇತರೆಡೆ ಪ್ರಚಾರ ನಡೆಸಲಾಯಿತು.ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿರುವ ಎ.ಎ. ದಿವಿಲ್‌ಕುಮಾರ್ ಆಟ್ರಂಗಡ ತಾ. ೭ ರಂದು ಮೂರ್ನಾಡು, ಕಟ್ಟೆಮಾಡು, ಪರಂಬು ಪೈಸಾರಿಯಲ್ಲಿ ಮತಪ್ರಚಾರ ಮಾಡಿದರು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ, ಕೊಡಗು ಉಸ್ತುವಾರಿ ಭೀಮಪುತ್ರಿ ರೇವತಿ ರಾಜ್ ನೇತೃತ್ವದಲ್ಲಿ ಕಾಲ್ನಡಿಗೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರು ಇದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ, ಹೆಗ್ಗಡಹಳ್ಳಿ ವ್ಯಾಪ್ತಿಯಲ್ಲಿ ಕೂಡಿಗೆ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕೆ.ಟಿ. ಗಿರೀಶ್ ಅವರ ನೇತೃತ್ವದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಉದ್ಯಮಿ ಕಿಶೋರ್ ಕುಮಾರ್, ಜಿಲ್ಲಾ ಎಸ್‌ಟಿ ಘಟಕದ ಕಾರ್ಯದರ್ಶಿ ಪ್ರಭಾಕರ್, ಪ್ರಮುಖರಾದ ಮಂಜಯ್ಯ, ಶಾಂತಳ್ಳಿ ಜಗದೀಶ್, ಧನಂಜಯ ಕೃಷ್ಣ ಹಾಗೂ ಇತರರು ಪಾಲ್ಗೊಂಡಿದ್ದರು.