ಚೆಯ್ಯAಡಾಣೆ, ಮೇ ೯: ಚಾಮಿಯಾಲ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ ೪ನೇ ವರ್ಷದ ಚಾಮಿಯಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ೨ ದಿನಗಳ ಕಾಲ ಕುವೆಲೆರ ಅನಿಸ್ ಅವರ ಗದ್ದೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಒಟ್ಟು ೫ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಯಾನ್ ಸೂಪರ್ ಸ್ಟಾರ್, ಎ.ಎಸ್. ಬ್ಲಾಸ್ಟರ್ಸ್, ಶಾಮಿಲಿ ಕಿಂಗ್ಸ್, ಲಯನ್ಸ್ ಕುವೆಲೇರ, ಡಾಟ್ ವೀಲ್ ಎಂಬ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದು, ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಯಾನ್ ಸೂಪರ್ ಸ್ಟಾರ್ ತಂಡ ಎ.ಎಸ್. ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಎ.ಎಸ್. ಬ್ಲಾಸ್ಟರ್ಸ್ ತಂಡ ಶಾಮಿಲಿ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟವನ್ನು ಸ್ಥಳೀಯ ಜಮಾಅತ್ ಅಧ್ಯಕ್ಷ ಕೆ.ಎ. ಮಜೀದ್ ಹಾಗೂ ಗ್ರಾಮದ ಹಿರಿಯ ರಶೀದ್ ಉದ್ಘಾಟಿಸಿದರು.

ಫೈನಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಎ.ಎಸ್. ಬ್ಲಾಸ್ಟರ್ಸ್ ತಂಡ ಹೊರಹೊಮ್ಮಿದರೆ ರನ್ನರ್ಸ್ ಸ್ಥಾನಕ್ಕೆ ಅಯಾನ್ ಸೂಪರ್ ಸ್ಟಾರ್ ತಂಡ ತೃಪ್ತಿಪಟ್ಟುಕೊಂಡಿತು.

ಮೂರನೇ ಸ್ಥಾನವನ್ನು ಶಾಮಿಲಿ ಕಿಂಗ್ಸ್ ತಂಡ ಪಡೆದುಕೊಂಡಿತು. ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಮುಖ್ಯ ಅತಿಥಿ ಪಾಲೇಕಂಡ ಕುಮಾರ್ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಚಾಮಿಯಾಲ ಗ್ರಾಮದಲ್ಲಿ ಉತ್ತಮ ಕ್ರೀಡಾಕೂಟ ಆಯೋಜಿಸಲಾಗಿದೆ. ಪ್ರತಿ ವರ್ಷವು ಇದೇ ರೀತಿ ಕ್ರೀಡಾಕೂಟ ನಡೆಯಲಿ ಎಂದರು.

ಚಾAಪಿಯನ್ ಎ.ಎಸ್. ಬ್ಲಾಸ್ಟರ್ಸ್ ತಂಡಕ್ಕೆ ರೂ.೫೫,೫೫೫ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಅಯಾನ್ ಸೂಪರ್ ಸ್ಟಾರ್ ತಂಡಕ್ಕೆ ರೂ.೩೩,೩೩೩ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು. ಪಂದ್ಯ ಪುರುಷ ಪ್ರಶಸ್ತಿಯನ್ನು ಶಾಹೀರ್ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುನೀರ್ ಪಡೆದುಕೊಂಡರು, ಅತ್ಯುತ್ತಮ ಆಟವಾಡಿದ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಯಿತು.

ತೀರ್ಪುಗಾರರಾಗಿ ವೀರಾಜ ಪೇಟೆಯ ಅಜಿತ್ ಹಾಗೂ ಅರ್ಷಾದ್, ಸ್ಕೋರರ್ ಆಗಿ ಸ್ವಾದಿಕ್, ವೀಕ್ಷಕ ವಿವರಣೆಯನ್ನು ರಾಹುಲ್ ನಿರ್ವಹಿಸಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಉದ್ಯಮಿಗಳಾದ ಇಸ್ಮಾಯಿಲ್, ಶಾದುಲಿ, ಗ್ರಾಮ ಪಂಚಾಯಿತಿ ಸದಸ್ಯೆ ಬೋಜಮ್ಮ, ಶಂಸು, ಮಜೀದ್, ಮಹ್ಮೂದ್, ಮಾಮು, ಸಿಪಿಎಲ್ ಪದಾಧಿಕಾರಿಗಳಾದ ಅಜೀಜ್, ಅಸ್ಪಾಕ್, ನಿಜಮುದ್ದಿನ್, ಅನೀಸ್, ಮುನೀರ್, ಎಬಿಡಿ ಲತೀಫ್ ಮತ್ತಿತರರು ಹಾಜರಿದ್ದರು.