ಮಡಿಕೇರಿ, ಮೇ ೮ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭಗೊAಡಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಹಿರಂಗ ಪ್ರಚಾರ ಇಂದಿಗೆ ಮುಕ್ತಾಯಗೊಂಡಿದೆ. ಚುನಾವಣಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಂಬAಧ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ಒಟ್ಟು ೫೪೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ೪,೫೬,೩೧೩ ಮಂದಿ ತಮ್ಮ ಹಕ್ಕು ಚಲಾಯಿಸಲಿ ದ್ದಾರೆ. ಚುನಾವಣೆ ಸಂದರ್ಭ ಯಾವದೇ ಅಹಿತಕರ ಘಟನೆ ಸಂಭವಿಸದAತೆ ನಿಗಾ ವಹಿಸುವ ನಿಟ್ಟಿನಲ್ಲಿ ಬಂದೋಬಸ್ತ್ ಗಾಗಿ ೧೫೦೦ ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಲವೊಂದು ವಿಶೇಷ ಮತದಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಜಿಲ್ಲಾ ಚುನಾವ ಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು; ಚುನಾವಣೆ ಸಂಬAಧ ಜಿಲ್ಲೆಯ ೨೦೮-ಮಡಿಕೇರಿ ಮತ್ತು ೨೦೯-ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೫೪೩ ಮತಗಟ್ಟೆಗಳನ್ನು ತೆರೆಯಲಾಗಿದ್ದು, ತಾ.೧೦ರಂದು ಬೆಳಿಗ್ಗೆ ೭ಗಂಟೆಯಿAದ ಸಂಜೆ ೬ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಪ್ರಚಾರ ಮುಕ್ತಾಯ

ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳು ನಡೆಸುವ ಸಾರ್ವಜನಿಕ ಬಹಿರಂಗ ಪ್ರಚಾರ ಕಾರ್ಯ ಮತದಾನದ ಅವಧಿ ಮುಕ್ತಾಯ ಗೊಳ್ಳುವ ೪೮ ಗಂಟೆ, ಅಂದರೆ ಇಂದು ಮುಕ್ತಾಯಗೊಂಡಿದೆ. ಅವಧಿ ಮುಕ್ತಾಯಗೊಂಡ ಬಳಿಕ ಹೊರಗಿನ ಮತಕ್ಷೇತ್ರದಿಂದ ಕರೆತಂದ ಮತ್ತು ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು, ಪಕ್ಷದ ಕಾರ್ಯಕರ್ತರು, ಪ್ರಚಾರ ಕಾರ್ಯಕರ್ತರು ಕ್ಷೇತ್ರಗಳಿಂದ ಹೊರಹೋಗಬೇಕು ಎಂದು ಹೇಳಿದರು.

ಒಟ್ಟು ಮತದಾರರು

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೩,೫೮೫ ಪುರುಷರು, ೧,೧೮,೫೫೩ ಮಹಿಳೆಯರು ಹಾಗೂ ಇತರೆ ೧೦ ಮಂದಿ ಸೇರಿದಂತೆ ೨,೩೨,೧೪೮ ಮತದಾರರು, ವೀರಾಜಪೇಟೆ ಕ್ಷೇತ್ರದಲ್ಲಿ ೧,೧೧,೨೯೦ ಪುರುಷರು, ೧,೧೨,೮೬೨ ಮಹಿಳೆಯರು ಹಾಗೂ ಇತರೆ ೧೩ ಸೇರಿದಂತೆ ೨,೨೪,೧೬೫ ಮತದಾರರ ನ್ನೊಳಗೊಂಡು ಒಟ್ಟು ೪,೫೬,೩೧೩ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿ ಕಾರಿಗಳು ಮಾಹಿತಿ ನೀಡಿದರು.

ಚೀಟಿ-ಗೈಡ್ ವಿತರಣೆ

ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತದಾರರಿಗೆ ಮತದಾರರ ಚೀಟಿಯನ್ನು ಹಾಗೂ ಪ್ರತಿ ಕುಟುಂಬಕ್ಕೆ ಮತದಾರರ ಗೈಡ್ ವಿತರಣೆ ಮಾಡಲಾಗುತ್ತಿದೆ. ಮಡಿಕೇರಿ ಕ್ಷೇತ್ರದಲ್ಲಿ ೨,೨೧,೦೪೫ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೨,೧೭,೧೩೦ ಸೇರಿದಂತೆ ಒಟ್ಟು ೪,೩೮,೧೭೫ ಮತದಾರರ ಚೀಟಿಯನ್ನು ವಿತರಣೆ ಮಾಡಲಾಗಿದೆ. ಹಾಗೆಯೇ ೭೫,೧೩೦ ಹಾಗೂ ೫೩,೪೧೫ ಸೇರಿದಂತೆ ಒಟ್ಟು ೧,೨೮,೫೪೫ ಮತದಾರರ ಗೈಡ್ ಅನ್ನು ವಿತರಣೆ ಮಾಡಲಾಗಿದೆ.

(ಮೊದಲ ಪುಟದಿಂದ) ಮತದಾರರ ಚೀಟಿ ಸಿಕ್ಕದೇ ಇರುವವರು ಮತದಾನದ ದಿನದಂದು ಕೇಂದ್ರದ ಬಳಿ ನಿಯೋಜಿತ ಅಧಿಕಾರಿಗಳಿಂದ ಪಡೆದುಕೊಳ್ಳ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದರು.

ಪಕ್ಷಗಳ ಪ್ರಚಾರ ಬೂತ್

ಪ್ರತಿ ಮತಗಟ್ಟೆಯ ೨೦೦ ಮೀ. ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬೂತ್‌ಗಳನ್ನು ಸ್ಥಾಪಿಸಬಹುದಾಗಿದೆ. ಸಂಬAಧಿಸಿದ ಪಂಚಾಯ್ತಿಯಿAದ ಅನುಮತಿ ಪಡೆದು ಗರಿಷ್ಠ ಇಬ್ಬರು ಮಾತ್ರ ಇರುವಂತೆ ಒಂದು ಮೇಜು ಹಾಗೂ ಎರಡು ಕುರ್ಚಿಗಳ ವ್ಯವಸ್ಥೆ ಮಾಡಿಕೊಂಡು ಅಭ್ಯರ್ಥಿಯ ಹೆಸರು ಹಾಗೂ ಪಕ್ಷದ ಚಿಹ್ನೆ ಪ್ರದರ್ಶಿಸಬಹುದಾಗಿದೆ. ೩x೧.೫ ಅಡಿ ಅಳತೆಯ ಒಂದು ಬ್ಯಾನರ್ ಮಾತ್ರ ಉಪಯೋಗಿಸಬಹುದಾಗಿದೆ ಎಂದು ಅವರು ತಿಳಿಸಿದರು.

ವೀಕ್ಷಕರ ನೇಮಕ-ತರಬೇತಿ

ಆಯೋಗದ ನಿರ್ದೇಶನದಂತೆ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ೭೫ ಮೈಕ್ರೊ ವೀಕ್ಷಕರ ನೇಮಕ ಮಾಡಲಾಗಿದ್ದು, ಈಗಾಗಲೇ ತರಬೇತಿ ನೀಡಲಾಗಿದ್ದು, ಅವರುಗಳನ್ನು ಸೂಕ್ಷö್ಮ ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗುವದು ಎಂದು ತಿಳಿಸಿದರು.

ಮಸ್ಟರಿಂಗ್-ಡಿ ಮಸ್ಟರಿಂಗ್

ಮತದಾನಕ್ಕೆ ಬಳಸಲಾಗುವ ಮತ ಯಂತ್ರಗಳನ್ನು ಮಡಿಕೇರಿಯ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ತಾ.೯ರಂದು(ಇAದು) ಮಸ್ಟರಿಂಗ್ ಕಾರ್ಯ ನಡೆಯಲಿದೆ. ಸೆಕ್ಟರ್‌ವಾರು ಪ್ರತ್ಯೇಕÀ ಕೊಠಡಿಗಳಲ್ಲಿ ನಡೆಯಲಿದ್ದು, ಮತಗಟ್ಟೆವಾರು ಮತ ಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳನ್ನು ಸರಬರಾಜು ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಒದಗಿಸಲಾಗುವದು. ಮಧ್ಯಾಹ್ನ ೧೨.೩೦ ಗಂಟೆಯೊಳಗಡೆ ಎಲ್ಲ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರದಿAದ ತೆರಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಡಿ-ಮಸ್ಟರಿಂಗ್ ಕಾರ್ಯಕ್ಕೆ ಒಟ್ಟು ೧೨ ಟೇಬಲ್‌ಗಳನ್ನು ಮಾಡಲಾಗಿದ್ದು, ೧ ಟೇಬಲ್‌ಗೆ ನಾಲ್ಕು ಮಂದಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಸಿಬ್ಬಂದಿಗಳು ಯಂತ್ರಗಳು, ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ಲಕೋಟೆಗಳನ್ನು ಪರಿಶೀಲಿಸಿ ಪಡೆಯಲಿದ್ದಾರೆ. ನಂತರ ಮತಗಟ್ಟೆಗಳಿಂದ ಪಡೆದ ಯಂತ್ರಗಳು ಹಾಗೂ ಲಕೋಟೆಗಳನ್ನು ಭದ್ರತಾ ಕೊಠಡಿಯಲ್ಲಿ ಮತಗಟ್ಟೆವಾರು ಜೋಡಣೆ ಮಾಡಲು ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಭದ್ರತಾ ಕೊಠಡಿ

ತಾ.೧೦ ರಂದು ಮತದಾನ ಮುಕ್ತಾಯಗೊಂಡ ಬಳಿಕ ಸಂಬAಧಿಸಿದ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಡಿ-ಮಸ್ಟರಿಂಗ್ ಮುಗಿಸಿದ ಬಳಿಕ ಎರಡೂ ಕ್ಷೇತ್ರಗಳ ಮತಯಂತ್ರಗಳನ್ನು ಮತ್ತು ಚುನಾವಣಾ ದಾಖಲೆಗಳನ್ನು ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಸಿದ್ಧಪಡಿಸಿರುವ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ದಾಸ್ತಾನು ಮಾಡಲಾಗುವದು ಎಂದು ಹೇಳಿದರು.

೧೩ರಂದು ಮತ ಎಣಿಕೆ

ತಾ.೧೩ರಂದು ಬೆಳಿಗ್ಗೆ ೮ಗಂಟೆಯಿAದ ಮತಗಳ ಎಣಿಕೆ ಕಾರ್ಯ ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದೆ. ಎಣಿಕೆ ಕೇಂದ್ರದಲ್ಲಿ ೧೪ ಮೇಜುಗಳು, ೩ ಇಟಿಪಿಬಿಎಸ್ ಮೇಜುಗಳು, ೪ ಅಂಚೆ ಮತ ಎಣಿಕೆ ಮೇಜುಗಳನ್ನು ಅಳವಡಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಇರಲಿದ್ದಾರೆ. ಅಭ್ಯರ್ಥಿಗಳು ಎಣಿಕೆ ಕೇಂದ್ರದಲ್ಲಿ ಇರುವದಕ್ಕೆ ಅವಕಾಶವಿದ್ದು, ಎಣಿಕೆ ಏಜೆಂಟರುಗಳನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಎಣಿಕೆ ಕಾರ್ಯವನ್ನು ವೆಬ್‌ಕಾಸ್ಟಿಂಗ್ ಮಾಡಲಿದ್ದದು, ಚುನಾವಣಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ವೀಕ್ಷಿಸಬಹುದಾಗಿದೆ. ಪ್ರತಿ ಎಣಿಕೆ ಮೇಜಿಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಸಹಾಯಕರು, ಮೈಕ್ರೋ ವೀಕ್ಷಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಚುನಾವಣೆಗೆ ವಾಹನ ಸೌಲಭ್ಯ

ಚುನಾವಣೆ ಸಂಬAಧ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಮಡಿಕೇರಿ ಕ್ಷೇತ್ರಕ್ಕೆ ೩೮ ಸಾರಿಗೆ ಸಂಸ್ಥೆ ಬಸ್, ೧೧ಮಿನಿ ಬಸ್, ೧೫ಮ್ಯಾಕ್ಸಿ ಕ್ಯಾಬ್, ೪೦ಜೀಪ್ ಸೇರಿದಂತೆ ಒಟ್ಟು ೯೦ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ವೀರಾಜಪೇಟೆ ಕ್ಷೇತ್ರಕ್ಕೆ ೪೬ ಸಾರಿಗೆ ಸಂಸ್ಥೆ ಬಸ್, ೩೧ ಮಿನಿ ಬಸ್, ಕೇಂದ್ರದಲ್ಲಿ ೧೪ ಮೇಜುಗಳು, ೩ ಇಟಿಪಿಬಿಎಸ್ ಮೇಜುಗಳು, ೪ ಅಂಚೆ ಮತ ಎಣಿಕೆ ಮೇಜುಗಳನ್ನು ಅಳವಡಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಇರಲಿದ್ದಾರೆ. ಅಭ್ಯರ್ಥಿಗಳು ಎಣಿಕೆ ಕೇಂದ್ರದಲ್ಲಿ ಇರುವದಕ್ಕೆ ಅವಕಾಶವಿದ್ದು, ಎಣಿಕೆ ಏಜೆಂಟರುಗಳನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಎಣಿಕೆ ಕಾರ್ಯವನ್ನು ವೆಬ್‌ಕಾಸ್ಟಿಂಗ್ ಮಾಡಲಿದ್ದದು, ಚುನಾವಣಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ವೀಕ್ಷಿಸಬಹುದಾಗಿದೆ. ಪ್ರತಿ ಎಣಿಕೆ ಮೇಜಿಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಸಹಾಯಕರು, ಮೈಕ್ರೋ ವೀಕ್ಷಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಚುನಾವಣೆಗೆ ವಾಹನ ಸೌಲಭ್ಯ

ಚುನಾವಣೆ ಸಂಬAಧ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಮಡಿಕೇರಿ ಕ್ಷೇತ್ರಕ್ಕೆ ೩೮ ಸಾರಿಗೆ ಸಂಸ್ಥೆ ಬಸ್, ೧೧ಮಿನಿ ಬಸ್, ೧೫ಮ್ಯಾಕ್ಸಿ ಕ್ಯಾಬ್, ೪೦ಜೀಪ್ ಸೇರಿದಂತೆ ಒಟ್ಟು ೯೦ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ವೀರಾಜಪೇಟೆ ಕ್ಷೇತ್ರಕ್ಕೆ ೪೬ ಸಾರಿಗೆ ಸಂಸ್ಥೆ ಬಸ್, ೩೧ ಮಿನಿ ಬಸ್, ೪೧ಜೀಪ್‌ಗಳು ಸೇರಿದಂತೆ ಒಟ್ಟು ೧೧೭ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಂಚೆ ಮತಪತ್ರಗಳ ವಿವರ

ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಂಚೆ ಮತ ಪತ್ರಗಳನ್ನು ವಿತರಿಸಲಾಗಿದೆ. ಒಟ್ಟು ೩೧೨೩ ಪತ್ರಗಳನ್ನು ವಿತರಿಸಿದ್ದು, ಎಲ್ಲವು ವಾಪಸ್ ಬಂದಿವೆ. ಈ ಪೈಕಿ ೧೬೭೯ ಮಂದಿ ಮತ ಚಲಾವಣೆ ಮಾಡಿದ್ದಾರೆ. ವಿಶೇಷಚೇತನರ ಪೈಕಿ ೩೪೯೭ ಪತ್ರಗಳನ್ನು ವಿತರಿಸಲಾಗಿದ್ದು, ೪೭೦ ಮಂದಿ ಮತ ಚಲಾಯಿಸಿದ್ದಾರೆ. ೮೦ ವರ್ಷ ಮೇಲ್ಪಟ್ಟವರಲ್ಲಿ ೯೨೨೪ ಮಂದಿಗೆ ಪತ್ರ ಕಳುಹಿಸಿದ್ದು, ಈ ಪೈಕಿ ೧೯೯೨ ಮಂದಿ ಪಡೆದುಕೊಂಡು ೧೮೯೨ ಮಂದಿ ಮತ ಚಲಾಯಿಸಿದ್ದಾರೆ. ವಿಶೇಷ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ೧೩೯ ಪತ್ರಗಳನ್ನು ಕಳುಹಿಸಿದ್ದು, ಎಲ್ಲರೂ ಮತ ಚಲಾವಣೆ ಮಾಡಿರುವದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಅಕ್ರಮ ನಗದು-ಮದ್ಯ ವಶ

ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿಂದ ಇದುವರೆಗೆ ರೂ.೦.೨೭೪೬ ಕೋಟಿ ನಗದು, ರೂ.೦.೮೧೫೬ ಕೋಟಿ ಮೊತ್ತದ ಮದ್ಯ, ರೂ.೦.೦೨೧೨ ಮೊತ್ತದ ಮಾದಕ ವಸ್ತುಗಳು, ರೂ.೦.೦೧೫೦ ಕೋಟಿ ಮೊತ್ತದ ಸೀರೆಗಳು ಸೇರಿದಂತೆ ಒಟ್ಟು ರೂ.೧.೧೨೬೪ ಮೊತ್ತದ ಸ್ವತ್ತನ್ನು ವಶಪಡಿಸಿಕೊಂಡಿರುವದಾಗಿ ಅವರು ತಿಳಿಸಿದರು.

ಸಖಿ ಮತದಾನ ಕೇಂದ್ರಗಳು

ಗೋಷ್ಠಿಯಲ್ಲಿದ್ದ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಆಕಾಶ್ ಮತನಾಡಿ; ಕಳೆದ ಬಾರಿ ಚುನಾವಣೆಯಲ್ಲಿ ಶೇ.೭೪.೯೫ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.೮೫ಕ್ಕೆ ಏರಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮತದಾರರನ್ನು ಆಕರ್ಷಿಸಲು ಕೆಲವೊಂದು ವಿಶೇಷ ಮತಗಟ್ಟೆಗಳನ್ನು ತೆರೆದಿರುವದಾಗಿ ತಿಳಿಸಿದರು. ಮಹಿಳೆಯರಿಗಾಗಿ ಎರಡೂ ಕ್ಷೇತ್ರಗಳಲ್ಲಿ ತಲಾ ಐದರಂತೆ ಒಟ್ಟು ಹತ್ತು ಸಖಿ ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಮಡಿಕೇರಿ ಮಹದೇವಪೇಟೆಯ ನಗರಸಭಾ ಪ್ರಾಥಮಿಕ ಶಾಲೆ, ಶಿರಂಗಾಲ ಸ.ಪ.ಪೂ ಕಾಲೇಜು, ಮುಳ್ಳುಸೊಗೆ ಸ.ಹಿ.ಪ್ರಾ.ಶಾಲೆ, ಸೋಮವಾರಪೇಟೆ ಎಸ್‌ಜೆಎಂ ಬಾಲಕಿಯರ ಪ್ರೌಢಶಾಲೆ ಹಾಗೂ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು, ವೀರಾಜಪೇಟೆ ಕ್ಷೇತ್ರದಲ್ಲಿ ತಿತಿಮತಿ ಗ್ರಾ.ಪಂ. ಕಚೇರಿ, ವೀರಾಜಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಸ.ಪ.ಪೂ ಕಾಲೇಜು, ಗೋಣಿಕೊಪ್ಪ ಮಹಿಳಾ ಸಮಾಜ, ವೀರಾಜಪೇಟೆ ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆಗಳಲ್ಲಿ ತೆರೆÀಯಲಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ವಿಶೇಷಚೇತನ ಅಧಿಕಾರಿ, ಸಿಬ್ಬಂದಿಗಳು ನಿರ್ವಹಣೆ ಮಾಡಲಿರುವ ಎರಡು ಕೇಂದ್ರಗಳನ್ನು ತೆರೆಯಲಾಗಿದ್ದು, ಮಡಿಕೇರಿ ಕ್ಷೇತ್ರದಲ್ಲಿ ಸಂತ ಮೈಕಲ್ಲರ ಪ್ರೌಢಶಾಲೆ, ವೀರಾಜಪೇಟೆ ಕ್ಷೇತ್ರದಲ್ಲಿ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸಲಿವೆ. ಯುವ ಅಧಿಕಾರಿಗಳಿರುವ ಯುವ ಮತದಾನ ಕೇಂದ್ರಗಳನ್ನು ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಆರ್ಜಿ ಕಲ್ಲುಬಾಣೆಯ ಬದ್ರಿಯಾ ಹಿ.ಪ್ರಾ.ಶಾಲೆಯಲ್ಲಿ ತೆರೆಯಲಾಗಿದೆ. ಆದಿವಾಸಿಗಳು ಹೆಚ್ಚಿಗೆ ಇರುವ ತಿತಿಮತಿ ಸ.ಮಾ.ಪ್ರಾ. ಶಾಲೆ ಹಾಗೂ ನಾಗರಹೊಳೆ ಸರಕಾರಿ ಆಶ್ರಮ ಶಾಲೆಯಲ್ಲಿ ಎಥ್ನಿಕ್ ಮತ ಕೇಂದ್ರವನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುAಡೇಗೌಡ ಇದ್ದರು.