ಮಡಿಕೇರಿ, ಮೇ ೮: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಆಂತರಿಕ ಭದ್ರತಾ ವಿಭಾಗದ (ಐ.ಎಸ್.ಡಿ.) ಅಧಿಕಾರಿಗಳು ನಕ್ಸಲ್ ನಿಗ್ರಹ ಪಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಂತರಿಕ ಭದ್ರತಾ ವಿಭಾಗದ ಎ.ಡಿ.ಜಿ.ಪಿ. ಮಾಲಿನಿ ಕೃಷ್ಣಮೂರ್ತಿ, ಐಜಿಪಿ ವಿಪುಲ್ ಕುಮಾರ್, ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಪ್ರಕಾಶ್ ನಿಖಂ ಕುಟ್ಟ, ಆರ್ಜಿ, ಭಾಗಮಂಡಲದ ಶಿಬಿರಗಳಿಗೆ ಭೇಟಿ ನೀಡಿ ಸಿಬ್ಬಂದಿಗಳೊAದಿಗೆ ಚರ್ಚಿಸಿದರು. ಚುನಾವಣಾ ಸಂದರ್ಭದಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ನಡೆಯದಂತೆ ಕೂಂಬಿAಗ್ ನಡೆಸುವಂತೆ ಸೂಚಿಸಿದರು.