ಸೋಮವಾರಪೇಟೆ, ಮೇ ೮: ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸುವ ಕಾಂಗ್ರೆಸ್-ಇದೇ ಕ್ಷೇತ್ರಕ್ಕೆ ಸಂಬAಧಿಸಿದAತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವ ದೃಷ್ಟಿಕೋನ ಹೊಂದಿದೆ? ಎಂಬುದನ್ನು ಜನತೆಯ ಮುಂದಿಡಲಿ. ಅರಕಲಗೂಡಿನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ನಮಗೂ ಗೊತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ವ್ಯಂಗ್ಯವಾಡಿದರು.

ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋ ಹಾಗೂ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ೫ ವರ್ಷಗಳಲ್ಲಿಯೇ ೧೮೦೦ ಕೋಟಿಗೂ ಅಧಿಕ ಅನುದಾನದಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದು ಮಡಿಕೇರಿ ಕ್ಷೇತ್ರದಲ್ಲಿ ಗ್ರಾಮಗಳನ್ನು ಸಂಪರ್ಕಿಸುವAತೆ ಟೂರಿಸಂ ಕಾರಿಡಾರ್ ಮಾಡುತ್ತೇವೆ. ಇದರೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೇವೆ; ಅದೇ ಕಾಂಗ್ರೆಸ್ ಕ್ಷೇತ್ರದ ಅಭಿವೃದ್ಧಿಗೆ ಯಾವ ಚಿಂತನೆ ನಡೆಸಿದೆ? ಎಂದು ಪ್ರಶ್ನಿಸಿದರು.

ಜಿ.ಪಂ. ಸದಸ್ಯರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಆ ಕ್ಷೇತ್ರದತ್ತ ತಿರುಗಿ ನೋಡಿಲ್ಲ. ಇದೀಗ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಎಂದು ಹೇಳಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಇಂಜಿನಿಯರಿAಗ್, ಮೆಡಿಕಲ್, ಪಿಯುಸಿ, ಪದವಿ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾಭ್ಯಾಸಕ್ಕಾಗಿ ಕುಶಾಲನಗರಕ್ಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಮುಂದಿನ ದಿನಗಳಲ್ಲಿ ೨೪ ಗ್ರಾ.ಪಂ.ಗಳನ್ನು ಒಳಗೊಂಡAತೆ ಟೂರಿಸಂ ಕಾರಿಡಾರ್, ತೋಟದ ಲೈನ್ ಮನೆಗಳಲ್ಲಿ ಇರುವವರಿಗೆ ಸ್ವಂತ ನಿವೇಶನ ಹಾಗೂ ಮನೆ, ಪ್ರತಿ ಕುಟುಂಬಕ್ಕೆ ೫ ಕೆ.ಜಿ. ಅಕ್ಕಿ ಹಾಗೂ ೫ ಕೆ.ಜಿ. ಸಿರಿಧಾನ್ಯ ವಿತರಣೆ, ಪ್ರತಿ ಮನೆಗೆ ಉಚಿತ ಹಾಲು ನೀಡಲು ಕ್ರಮ ವಹಿಸಲಾಗುವುದು ಎಂದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಕೊಡಗಿಗೆ ೧೦೦ ಕೋಟಿ ವಿಶೇಷ ಅನುದಾನ ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ೧೦೦ ರೂಪಾಯಿಯನ್ನೂ ನೀಡಲಿಲ್ಲ. ಬಿಜೆಪಿ ಸರ್ಕಾರ ೩೬೦೦ ಕೋಟಿ ಅನುದಾನವನ್ನು ಕೊಡಗಿಗೆ ನೀಡಿದೆ ಎಂದರು.

ಕಾAಗ್ರೆಸ್ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ಬಿ.ಎಸ್. ಅನಂತ್‌ಕುಮಾರ್ ಮಾತನಾಡಿ, ಅಪ್ಪಚ್ಚು ರಂಜನ್ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಹಿಂದುತ್ವದ ನೀತಿ, ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಜನ ಬೆಂಬಲ ನೀಡಲಿದ್ದಾರೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ವಿ.ಎಂ. ವಿಜಯ ಅವರು, ಕೊಡಗಿನಲ್ಲಿ ಮೆಡಿಕಲ್, ಇಂಜಿನಿಯರಿAಗ್, ವಿಶ್ವವಿದ್ಯಾನಿಲಯ, ಸೈನಿಕ ಶಾಲೆ, ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ರಸ್ತೆಗಳೂ ಉತ್ತಮ ಸ್ಥಿತಿಯಲ್ಲಿವೆ. ಶಾಸಕರು ಸ್ಥಳೀಯರೇ ಆಗಿರುವುದರಿಂದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಎಲ್ಲ ವರ್ಗ, ಜಾತಿಯವರನ್ನೂ ಒಳಗೊಂಡ ಹಿಂದುತ್ವವೇ ಈ ದೇಶದ ಅಸ್ಮಿತೆಯಾಗಿದ್ದು, ಜಾತಿ ಬದಿಗಿಟ್ಟು ಹಿಂದುತ್ವ ಹಾಗೂ ಅಭಿವೃದ್ಧಿಗಾಗಿ ಈ ಬಾರಿ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯವನ್ನು ದೇಶದಲ್ಲಿಯೇ ನಂ.೧ ರಾಜ್ಯವನ್ನಾಗಿಸುವ ಭರವಸೆ ನೀಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯ ಹಾಗೂ ಕೊಡಗು ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಮನುಕುಮಾರ್ ರೈ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮಾಜೀ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಮುಖರಾದ ವಿ.ಕೆ. ಲೋಕೇಶ್, ಹೆಚ್.ಕೆ. ಮಾದಪ್ಪ, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಅಭಿಮನ್ಯುಕುಮಾರ್, ಪಿ.ಕೆ. ಚಂದ್ರು, ಪ್ರತಾಪ್ ಎಸ್.ಎ., ರೂಪಾ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.