ಚೆಯ್ಯಂಡಾಣೆ, ಮೇ ೮: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಕುಟುಂಬಗಳ ನಡುವೆ ೬ನೇ ವರ್ಷದ ಫುಟ್ಬಾಲ್ ಪಂದ್ಯಾಟ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿದೆ.
ಸೋಮವಾರ ನಡೆದ ಮೊದಲ ಪಂದ್ಯಾಟದಲ್ಲಿ ಹೊಸೋಕ್ಲು ತಂಡ ಚಂಡೀರ ತಂಡವನ್ನು ೪-೦ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಎರಡನೇ ಪಂದ್ಯದಲ್ಲಿ ಕಾಂಗಿರ ತಂಡ ಕತ್ರಿಕೊಲ್ಲಿ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ತಲುಪಿತು.
ಪೊನ್ನಚನ ತೋಟಂಬೈಲು ತಂಡವನ್ನು ೧-೦ ಗೋಲಿನಿಂದ, ಪೊಡನೊಳನ ಕೊಂಪುಳೀರ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೪-೧ ಗೋಲಿನಿಂದ, ಕೋಳಿಬೈಲು ಪಾಂಡನ ತಂಡವನ್ನು ೨-೦ ಗೋಲಿನಿಂದ, ಕಲ್ಲುಮುಟ್ಲು ಚೊಂಡೀರ ತಂಡವನ್ನು ೬-೦ ಗೋಲಿನಿಂದ, ಕಟ್ಟೆಮನೆ ಪೆನಾಲ್ಟಿ ಶೂಟೌಟ್‌ನಲ್ಲಿ ಮರ್ದಾಳು ತಂಡವನ್ನು ೪-೧ ಗೋಲಿನಿಂದ, ಕಾಂಗಿರ ಹೊಸೋಕ್ಲು ತಂಡವನ್ನು ೩-೦ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಪ್ರಿಕ್ವಾರ್ಟರ್ ಹಂತಕ್ಕೆ ತಾ. ೧೨ ರಂದು ಪಂದ್ಯ ನಡೆಯಲಿದೆ.