ಮಡಿಕೇರಿ, ಮೇ ೯: ಅಂತೂ... ಇಂತೂ ಚುನಾವಣೆಯ ದಿನÀ ಎದುರಾಗಿಯೇ ಹೋಗಿದೆ. ಕಳೆದ ಹಲವು ಸಮಯದಿಂದಲೇ ರಾಜ್ಯ ವಿಧಾನಸಭೆಯ ಚುನಾವಣಾ ಕಾವು ಇಡೀ ರಾಜ್ಯದಲ್ಲಿ ಉಂಟಾಗಿದ್ದು, ಈ ತನಕದ ಎಲ್ಲಾ ರಾಜಕೀಯ ಮೇಲಾಟಗಳು ಮುಕ್ತಾಯಗೊಂಡಿದ್ದು, ಇದೀಗ ಮತ ಸಮರಕ್ಕೆ ಅಖಾಡ ಸಜ್ಜಾಗಿದೆ.
ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರ ಒಲವು ಗಳಿಸುವ ನಿಟ್ಟಿನಲ್ಲಿ ತಮ್ಮೆಲ್ಲಾ ಪ್ರಯತ್ನಗಳನ್ನು ಮಾಡಿದ್ದು, ಇದೀಗ ಎಲ್ಲವನ್ನೂ ನಿರ್ಧರಿಸುವ ಅಧಿಕಾರ, ಅವಕಾಶ ಮತದಾರರದ್ದಾಗಿದೆ. ಇದು ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ೧೬ನೇ ಚುನಾವಣೆಯಾಗಿದೆ. ಪ್ರಸಕ್ತ ಅವಧಿಯ ಚುನಾವಣೆ ಇಡೀ ರಾಜ್ಯದಲ್ಲಿ ಒಂದೇ ಹಂತದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳಿದ್ದು, ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆ ಕಂಡು ಬಂದಿದ್ದು, ಚುನಾವಣೆ ಕುತೂಹಲಕಾರಿಯಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು ೧೫ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರೆ, ವೀರಾಜಪೇಟೆ ಕ್ಷೇತ್ರದಲ್ಲಿ ೯ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನ ಅಭ್ಯರ್ಥಿಗಳು ಸೇರಿದಂತೆ ಇತರ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ.
(ಮೊದಲ ಪುಟದಿಂದ)
ಮಡಿಕೇರಿಯಲ್ಲಿ ಯರ್ಯಾರು...?
ಮಡಿಕೇರಿ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಬಿಜೆಪಿಯ ಎಂ.ಪಿ. ಅಪ್ಪಚ್ಚುರಂಜನ್, ಕಾಂಗ್ರೆಸ್ ಪಕ್ಷದಿಂದ ಡಾ. ಮಂಥರ್ಗೌಡ, ಜೆಡಿಎಸ್ನಿಂದ ನಾಪಂಡ ಮುತ್ತಪ್ಪ, ಆಮ್ ಆದ್ಮಿ ಪಕ್ಷದಿಂದ ಕೆ.ಪಿ. ಬೋಪಣ್ಣ, ಎಸ್ಡಿಪಿಐನಿಂದ ಅಮೀನ್ ಮೊಯಿಸೀನ್, ಸಿಪಿಐ ಪಕ್ಷದಿಂದ ಸೋಮಪ್ಪ, ಬಹುಜನ ಸಮಾಜವಾದಿ ಪಕ್ಷದಿಂದ ದಿವಿಲ್ಕುಮಾರ್, ಕೆಆರ್ಎಸ್ ಪಕ್ಷದಿಂದ ಸಜೀರ್ ಮಜೀದ್ ನೆಲಾಟ್, ಕರ್ನಾಟಕ ಪ್ರಜ್ಞಾವಂತ ಪಾರ್ಟಿಯಿಂದ ಬಿ.ಕೆ. ಶ್ರೀನಿವಾಸ್ ರೈ, ಆರ್ಪಿಐ ಪಕ್ಷದಿಂದ ಕೆ.ಬಿ. ರಾಜು, ಇಂಡಿಯನ್ ಮೂವ್ಮೆಂಟ್ ಪಾರ್ಟಿಯಿಂದ ರಶೀದಾ ಬೇಗಂ ಹಾಗೂ ಪಕ್ಷೇತರರುಗಳಾಗಿ ಹರೀಶ್ ಆಚಾರ್ಯ, ಕೆ.ಪಿ. ಶ್ರುತಿ, ಖಲೀಲ್, ಹೇಮಂತ್ಕುಮಾರ್ ಇವರುಗಳು ಹುರಿಯಾಳುಗಳಾಗಿದ್ದಾರೆ.
ವೀರಾಜಪೇಟೆಯಲ್ಲಿ
ವೀರಾಜಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕರಾದ ಬಿಜೆಪಿಯ ಕೆ. ಜಿ. ಬೋಪಯ್ಯ, ಕಾಂಗ್ರೆಸ್ನಿAದ ಎ.ಎಸ್. ಪೊನ್ನಣ್ಣ, ಜೆಡಿಎಸ್ನಿಂದ ಮನ್ಸೂರ್ ಆಲಿ, ಸರ್ವೋದಯ ಕರ್ನಾಟಕ ಪಕ್ಷದಿಂದ ಕೆ. ಮನು ಸೋಮಯ್ಯ, ಆಮ್ ಆದ್ಮಿ ಪಕ್ಷದಿಂದ ಸಿ.ಎಸ್. ರವೀಂದ್ರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಮಸೂದ್ ಫೌಜ್ಜಾರ್ ಹಾಗೂ ಪಕ್ಷೇತರರುಗಳಾಗಿ ಎಂ.ಎ. ನಾಸಿರ್, ಪಿ.ಕೆ. ದರ್ಶನ್ಶೌರಿ, ವಿ.ಎ. ಸಜು ಕಣದಲ್ಲಿದ್ದಾರೆ.