ನಾಪೋಕ್ಲು, ಮೇ ೮: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಸೋಮವಾರದ ಪಂದ್ಯಗಳಲ್ಲಿ ಚೀಯಕ ಪೂವಂಡ, ಮಣವಟ್ಟಿರ, ಕೊಟ್ಟಂಗಡ, ಬಲ್ಲಚಂಡ ಸೇರಿದಂತೆ ಹಲವು ತಂಡಗಳು ಮುನ್ನಡೆ ಸಾಧಿಸಿದವು. ಮೊದಲ ಪಂದ್ಯದಲ್ಲಿ ಚೀಯಕಪೂವಂಡ ವಿರುದ್ಧ ಚೇರಂಡ ತಂಡ ೬ ವಿಕೆಟ್ ನಷ್ಟಕ್ಕೆ ೨೩ ರನ್ ಗಳಿಸಿತು. ಉತ್ತರವಾಗಿ ಆಡಿದ ಚೀಯಕಪೂವಂಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೨೪ ರನ್ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಣವಟ್ಟಿರ ತಂಡದ ವಿರುದ್ಧ ಮಾಳೆಯಂಡ ಸ್ಪರ್ಧಿಸಿತು. ಮಾಳೆಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೨೩ ರನ್ ಗಳಿಸಿದರೆ ಮಣವಟ್ಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ ೨೭ ರನ್ಗಳಿಸಿ ೯ ರನ್ಗಳ ಜಯ ಸಾಧಿಸಿತು. ಚೋನಿರ ವಿರುದ್ಧ ಕೊಟ್ಟಂಗಡ ಐದು ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿತು. ಚೋನಿರ ಮೂರು ವಿಕೆಟ್ ನಷ್ಟಕ್ಕೆ ೪೬ ರನ್ಗಳಿಸಿ ಸೋಲನ್ನು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಚೀಯಕಪೂವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿತು. ಅಟ್ರಂಗಡ ನಾಲ್ಕು ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿ ವಿಜಯ ಸಾಧಿಸಿತು. ಬಲ್ಲಚಂಡ ವಿರುದ್ಧ ಮಲ್ಲಜಿರ ತಂಡ ಸ್ಪರ್ಧಿಸಿತು. ಮಲ್ಲಜಿರ ಐದು ವಿಕೆಟ್ ನಷ್ಟಕ್ಕೆ ೫೭ ರನ್ ಗಳಿಸಿದರೆ, ಬಲ್ಲಚಂಡ ಐದು ವಿಕೆಟ್ ನಷ್ಟಕ್ಕೆ ೫೮ ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮುಕ್ಕಾಟಿರ (ಬೇತ್ರಿ) ತಂಡವು ಪಾಸುರ ವಿರುದ್ಧ ಒಂದು ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿತು. ಉತ್ತರವಾಗಿ ಆಡಿದ ಪಾಸುರ ತಂಡ ಮೂರು ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿ ಸೋಲನ್ನು ಕಂಡಿತು. ಮುಕ್ಕಾಟಿರ (ಬೇತ್ರಿ) ತಂಡಕ್ಕೆ ೨೪ ರನ್ಗಳ ಜಯ ಲಭಿಸಿತು. ಕಲ್ಕಂಡ ವಿರುದ್ಧ ಪಾರುವಂಡ ಮೂರು ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿದರೆ, ಕಲ್ಲಂಡ ತಂಡ ೫೬ ರನ್ ಗಳಿಸಿ ಜಯ ಸಾಧಿಸಿತು. ಅಚ್ಚಪಂಡ ಎರಡು ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿತು. ಉತ್ತರವಾಗಿ ಆಡಿದ ಕುಂಜಿರ ತಂಡ ೪ ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿ ಸೋಲು ಅನುಭವಿಸಿತು. ಕುಟ್ಟಂಡ ತಂಡ ೩ ವಿಕೆಟ್ ನಷ್ಟಕ್ಕೆ ೨೦ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಬೊಜ್ಜಂಗಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೨೪ ರನ್ಗಳಿಸಿ ಗೆಲುವು ಸಾಧಿಸಿತು. ಅಣ್ಣಳಮಾಡ ಎಂಟು ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿತು. ಉತ್ತರವಾಗಿ ಆಡಿದ ಕುಲ್ಲೇಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ ೩೨ ರನ್ಗಳಿಸಿ ಗೆಲುವು ಸಾಧಿಸಿತು. ಅಮ್ಮಾಟಂಡ ತಂಡ ವಿರುದ್ಧ ಅಲ್ಲಂಗಡ ಎಂಟು ವಿಕೆಟ್ಗಳ ಜಯ ಸಾಧಿಸಿತು. ಅರಮಣಮಾಡ ತಂಡದ ವಿರುದ್ಧ ಕುಂಡ್ಯೋಳAಡ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ತಂಡದ ವಿರುದ್ಧ ಮಾಳೇಟಿರ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.