ಸಿದ್ದಾಪುರ, ಮೇ ೭: ಸಿಪಿಐ ಪಕ್ಷದ ವತಿಯಿಂದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನಣ್ಣ ಪರ ಮತಯಾಚನೆ ಮಾಡಲಾಯಿತು.
ಹಾಡಿಗಳಿಗೆ ಭೇಟಿ ನೀಡಿದ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಮುಖಂಡರುಗಳು ಹಾಡಿ ನಿವಾಸಿಗಳ ಬವಣೆಯನ್ನು ಆಲಿಸಿ ಪಟ್ಟಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಅಧಿಕಾರ ಬದಲಾಯಿಸಿದ್ದಲ್ಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಪೊನ್ನಣ್ಣನವರಿಂದ ಹಾಡಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಚಂದನ ಕೆರೆ, ಗೆದ್ದೆ ಹಾಡಿ, ತಿರುನಾಡ ಹಾಡಿ, ಚೂರಿಕಾಡು ಪೈಸಾರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೌಚಾಲಯ, ಸುಸಜ್ಜಿತ, ರಸ್ತೆ, ಕುಡಿಯುವ ನೀರು ಕಚ್ಚಾ ಮನೆ, ಬೀದಿದೀಪ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳನ್ನು ಹೇಳಿಕೊಂಡರು. ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದರು ಬಹುತೇಕ ಮಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಸೇರಿದಂತೆ ದಾಖಲೆಗಳು ಇಲ್ಲದೆ ಸಂಧ್ಯಾ ಸುರಕ್ಷಾ, ವಿಧವೆ ವೇತನದಿಂದ ವಂಚಿತರಾಗಿರುವ ಬಗ್ಗೆ ಕಮ್ಯುನಿಸ್ಟ್ ನಾಯಕರುಗಳ ಬಳಿ ಅಳಲು ತೋಡಿಕೊಂಡ ಹಾಡಿ ನಿವಾಸಿಗಳಿಗೆ ಪೊನ್ನಣ್ಣ ಗೆದ್ದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಸಿಪಿಐ ಮುಖಂಡರುಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನೀಲ್, ಸಹಕಾರ್ಯದರ್ಶಿ ರಫೀಕ್ ನವಲಗುಂದ, ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಎಂ.ಎ. ಕೃಷ್ಣ, ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಶಾಂತಿ ಪಕ್ಷದ ಸದಸ್ಯರಾದ ಸೀತೆ, ಅಯ್ಯಪ್ಪ, ಗಣೇಶ, ನೀಲ, ಚಂದ್ರ, ಕಾಳ, ರಕ್ಷಿತ, ಮೊದಲಾದವರು ಹಾಜರಿದ್ದರು