ಕೂಡಿಗೆ, ಮೇ ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಸದಸ್ಯೆ ಪಲ್ಲವಿ, ಗುತ್ತಿಗೆದಾರ ಕೆ.ಕೆ. ಸೋಮಶೇಖರ್, ಮಾಜಿ ಸೈನಿಕ ರಾಮೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಸೇರಿದಂತೆ ಹಲವು ಮಂದಿ ವಿವಿಧ ಪಕ್ಷವನ್ನು ತೊರೆದು ಮಡಿಕೇರಿ ಕ್ಷೇತ್ರದ ಶಾಸಕ, ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೂಡಿಗೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕೆ.ಟಿ. ಗಿರೀಶ್, ಉದ್ಯಮಿ ಕಿಶೋರ್ ಕುಮಾರ್, ಮಂಜಯ್ಯ, ಕೃಷ್ಣ, ಚಿಮ್ಮಿಣ್ಣ ಹಾಜರಿದ್ದರು.