*ಗೋಣಿಕೊಪ್ಪ, ಮೇ ೭: ಕಾಂಗ್ರೆಸ್ ತೊರೆದ ೫೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ತಾಲೂಕು ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್ ನೇತೃತ್ವದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.
ಗೋಣಿಕೊಪ್ಪ ದಸರಾ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ತಿತಿಮತಿ, ದೇವರಪುರ ಗ್ರಾಮದ ಸುಮಾರು ೫೦ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಸಿ.ಕೆ. ಬೋಪಣ್ಣ, ಕಾಡ್ಯಮಾಡ ಗಿರೀಶ್ ಗಣಪತಿ, ಕುಂಞAಗಡ ಅರುಣ್ ಭೀಮಯ್ಯ, ಎನ್.ಎನ್. ಅನೂಪ್ ಕುಮಾರ್, ಮನೆಯಪಂಡ ಮಹೇಶ್, ಅಮ್ಮತ್ತೀರ ಕಿಟ್ಟು ಗಣೇಶ್ ಇದ್ದರು.