ವರದಿ -ಚಂದ್ರಮೋಹನ್
ಕುಶಾಲನಗರ, ಮೇ ೭ : ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಎಲ್ಲೆಡೆ ಆಯೋಗ ಹಲವು ಅಧಿಕಾರಿ ಸಿಬ್ಬಂದಿಗಳನ್ನು ಯೋಜನೆ ಮಾಡಿದ್ದು ಕಳೆದ ಒಂದು ತಿಂಗಳಿನಿAದ ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಅಕ್ರಮ ಹಣ ಸಾಗಾಟ ಅಥವಾ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿಲ್ಲ.
ಜಿಲ್ಲೆಯ ಗಡಿಭಾಗಗಳಲ್ಲಿ ಚುನಾವಣಾ ಆಯೋಗ ಪ್ರತಿಯೊಂದು ಜಿಲ್ಲೆಗೆ ಒಳಬರುವ ವಾಹನಗಳ ತಪಾಸಣೆ ಕಾರ್ಯದಲ್ಲಿ ತೊಡಗಿ ಚುನಾವಣಾ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ತಪಾಸಣಾ ತಂಡಗಳು ನಿಯೋಜನೆ ಯಾಗಿದ್ದು ಕುಶಾಲನಗರ ಚೆಕ್ ಪೋಸ್ಟ್ ಮಾತ್ರ ದಿನನಿತ್ಯ ಸುದ್ದಿಗೆ ಗ್ರಾಸವಾ ಗುತ್ತಿದೆ. ಕೊರೊನಾ ಅವಧಿಯಲ್ಲಿ ಕೂಡ ಕುಶಾಲನಗರ ಚೆಕ್ ಪೋಸ್ಟ್ ನಿತ್ಯ ಸುದ್ದಿಗೆ ಗ್ರಾಸವಾಗುತ್ತಿದ್ದುದ್ದನ್ನು ನೆನಪಿಸಿಕೊಳ್ಳಬಹುದು.
ಈ ಕೇಂದ್ರದಲ್ಲಿ ಸೆಕ್ಟರ್ ಅಧಿಕಾರಿಗಳು, ಪೊಲೀಸ್, ಭದ್ರತಾ ಪಡೆ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಗಳು ಸೇರಿದಂತೆ ಒಂದು ಪಾಳಿಗೆ ೨೦ ಜನರಂತೆ ಮೂರು ಪಾಳಿಗಳಲ್ಲಿ ಸುಮಾರು ೬೦ಕ್ಕೂ ಅಧಿಕ ಸಿಬ್ಬಂದಿಗಳು ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಯಾವುದೇ ಅಕ್ರಮ ಹಣ ಅಥವಾ ವಸ್ತುಗಳ ಸಾಗಾಟ ಪ್ರಕರಣಗಳು ಮಾತ್ರ ಪತ್ತೆಯಾಗಿಲ್ಲ.
ಕುಶಾಲನಗರ ಮತ್ತು ಕೊಪ್ಪ ನಡುವೆ ವ್ಯಾಪಾರಿಗಳು ದಿನನಿತ್ಯದ ವಹಿವಾಟಿನ ಹಣ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಹಣ ಸಾಗಾಟ ಪ್ರಕರಣಗಳು ಪತ್ತೆಯಾಗಿದ್ದು ಅವುಗಳ ದಾಖಲೆ ನೀಡಿದ ಹಿನ್ನೆಲೆಯಲ್ಲಿ ವಾರಿಸುದಾರರಿಗೆ ಹಿಂತಿರುಗಿ ಸಲಾಗಿದೆ.
ಈ ಸಂದರ್ಭ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೈಸೂರು -ಕುಶಾಲನಗರ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಮಾತ್ರ ಬಾರಿ ಅನಾನುಕೂಲ ಉಂಟಾಗಿರುವುದು, ಪರದಾಡುವ ಸ್ಥಿತಿ ನಿತ್ಯ ಕಂಡುಬAದಿತ್ತು. ವಾರಾಂತ್ಯದಲ್ಲಿ ಗಡಿಭಾಗದಿಂದ ೧೦ ಕಿ.ಮೀ ಉದ್ದಕ್ಕೂ ವಾಹನಗಳ ಸಾಲುಗಳು ಕಂಡುಬರುತ್ತಿ ದ್ದವು. ಮೈಸೂರು ಜಿಲ್ಲೆಯ ಗಡಿಭಾಗವಾದ ಕೊಪ್ಪ ತಪಾಸಣಾ ಕೇಂದ್ರದ ಕಾರ್ಯಾಚರಣೆಯಲ್ಲಿ ಕುಶಾಲನಗರದ ಬೈಚನಹಳ್ಳಿ ತನಕ ವಾಹನಗಳ ಸಾಲು ಕಂಡು ಬರುತ್ತಿ ರುವುದು ಸಾಮಾನ್ಯ ದೃಶ್ಯವಾಗಿತ್ತು.
ಕುಶಾಲನಗರ ವಾಹನ ತಪಾಸಣಾ ಕೇಂದ್ರದಲ್ಲಿ ಬಿಸಿಲು ಮಳೆ ನಡುವೆ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಕೇಂದ್ರದ
ಬಳಿ ನಿರ್ಮಾಣ ಗೊಂಡಿರುವ ಕಲುಷಿತ ನೀರಿನ ಟ್ಯಾಂಕಿನಿAದ ಹೊರಸೂಸುವ ಅಸಹ್ಯ ವಾಸನೆಯನ್ನು ಕೂಡ ಸಹಿಸಿ ಕರ್ತವ್ಯ ನಿರ್ವಹಿಸ ಬೇಕಾದ ಪರಿಸ್ಥಿತಿ ಎದುರಾಗಿದ್ದರೂ, ಅದಕ್ಕೆ ಪರಿಹಾರ ಕಲ್ಪಿಸುವ ಗೋಜಿಗೆ ಸಂಬAಧಿಸಿದ ಅಧಿಕಾರಿಗಳು ತಲೆಕೆಡಿಸಿಕೊಳ್ಳದಿರು ವುದು ಮಾತ್ರ ನಿಜಕ್ಕೂ ಅಚ್ಚರಿ ಎನ್ನಬಹುದು.
ಇನ್ನೊಂದೆಡೆ ವಾಹನ ತಪಾಸಣಾ ಸಂದರ್ಭ ಬೆಂಗಳೂರು, ಮೈಸೂರು ಕಡೆಯಿಂದ ಕೊಡಗು ಜಿಲ್ಲೆಗೆ ರಾಜ್ಯದ ಹಿರಿಯ ಅಧಿಕಾರಿಗಳು ಬರುವ ಸಂದರ್ಭ ಅವರ ವಾಹನಗಳ ತಪಾಸಣೆಗೆ ಅಸಹಕಾರ ನೀಡಿರುವ ದೂರುಗಳು ಕೇಳಿ ಬಂದಿವೆ. ಐಪಿಎಸ್ ಐಎಫ್ಎಸ್ ಅಧಿಕಾರಿಗಳ ವಾಹನಗಳು ತಪಾಸಣೆ ಸಂದರ್ಭ ಚುನಾವಣಾ ಅಧಿಕಾರಿಗಳ ತಂಡ ವಾಹನವನ್ನು ಪರಿಶೀಲನೆಗೆ ಒಳಪಡಿಸಲು ಪ್ರಯತ್ನಿಸಿದರೂ, ಅವಕಾಶ ಕಲ್ಪಿಸದೆ ತಪಾಸಣೆಗೆ ಒಳಗಾಗದೆ ವೇಗವಾಗಿ ವಾಹನಗಳು ಸಾಗಿದ ಹಿನ್ನೆಲೆಯಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ ಘಟನೆಗಳು ನಡೆದಿವೆ. ಈ ಬಗ್ಗೆ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ದಾಖಲಾಗಿವೆ ಎಂದು ಅಲ್ಲಿನವರು ತಿಳಿಸಿದ್ದಾರೆ.