ಶನಿವಾರಸAತೆ, ಮೇ ೭: ಕಾಂಗ್ರೆಸ್‌ನ ಡಾ.ಮಂಥರ್ ಗೌಡ ಅವರು ಸೋತರೆ ಅದು ಜಿಲ್ಲೆಯ ಜನತೆಯ ಸೋಲಾಗುತ್ತದೆ. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಯುವಕರ ಮನಸ್ಸನ್ನು ಗೆದ್ದು ಶಾಸಕರಾಗಿ ಅವರು ಜಿಲ್ಲೆಯ ಅಭಿವೃದ್ಧಿ ಸಾಧಿಸಲಿ ಎಂದು ಕಾಂಗ್ರೆಸ್ ವಕ್ತಾರ ಹೆಚ್.ಎಸ್. ಚಂದ್ರಮೌಳಿ ಆಶಿಸಿದರು.

ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ನಡೆದ ವಿಧಾನ ಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕಾಂಗ್ರೆಸ್‌ಗೆ ಅದರದ್ದೇ ಆದ ೧೩೯ ವರ್ಷದ ಇತಿಹಾಸವಿದೆ. ಕಾಂಗ್ರೆಸ್ ಜನಸಾಮಾನ್ಯರ ಪಕ್ಷವಾಗಿದ್ದು, ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುತ್ತೇವೆ. ೩೦ ವರ್ಷ ಶಾಸಕರಾಗಿದ್ದವರು ಯಾಕೆ ಮಂತ್ರಿಯಾಗಲಿಲ್ಲ.? ಎಂದು ಪ್ರಶ್ನಿಸಿದರು.

ಅಭ್ಯರ್ಥಿ ಡಾ. ಮಂಥರ್ ಗೌಡ ಮಾತನಾಡಿ, ಈ ಬಾರಿಯ ಚುನಾವಣೆ ಯಲ್ಲಿ ಜನತೆ ಬದಲಾವಣೆ ಬಯಸಿ ದ್ದಾರೆ. ಇತಿಹಾಸದ ಬದಲಾವಣೆಗೆ ಉತ್ತರವಾಗಿ ಗೆಲುವು ಸಾಧಿಸಲೇಬೇಕು. ಅಭಿವೃದ್ಧಿ ಶೂನ್ಯವಾಗಿರುವ ಜಿಲ್ಲೆಯಲ್ಲಿ ಶಾಸಕರ ಜತೆಗೆ ಅಧಿಕಾರಿಗಳು ಅದೇ ಸ್ಥಾನದಲ್ಲಿದ್ದಾರೆ. ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಇಲ್ಲಿಗೆ ಬಿಜೆಪಿ ಪರ ಪ್ರಚಾರ ಮಾಡಲು ಬಂದಿದ್ದರೇ ಅಥವಾ ಇಲ್ಲಿ ಉದ್ಯೋಗ ಅರಸಿ ಬಂದು ನೆಲೆಸಿರುವ ಕೆಲಸಗಾರರನ್ನು ವಿಚಾರಿಸಲು ಬಂದಿದ್ದರೇ? ಎಂದು ವ್ಯಂಗ್ಯವಾಡಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ರಂಗಸ್ವಾಮಿ, ಮುಖಂಡರಾದ ಡಿ.ಪಿ. ಬೋಜಪ್ಪ, ಚಂದ್ರಕಾAತ್ ಮಾತನಾಡಿದರು.

ಪ್ರಚಾರ ಸಭೆಗೆ ಮೊದಲು ಅಭ್ಯರ್ಥಿ ಡಾ. ಮಂಥರ್ ಗೌಡ ಅವರು ಹೋಬಳಿ ವ್ಯಾಪ್ತಿಯ ಗ್ರಾಮ ಗಳಲ್ಲಿ ಬೆಂಬಲಿಗ ಕಾರ್ಯಕರ್ತರ ಜತೆ ಮತ ಯಾಚನೆ ಮಾಡಿದರು.