ಮಡಿಕೇರಿ, ಮೇ ೬: ನಮೂನೆ ೧೨ ಡಿ ಅಡಿಯಲ್ಲಿ ಹೆಸರು ನೋಂದಾಯಿಸಿ ಮನೆಯಿಂದಲೇ ಅಂಚೆ ಮತಪತ್ರ ಮೂಲಕ ಮತ ಚಲಾಯಿಸುವ ಕಾರ್ಯವು ಶನಿವಾರಕ್ಕೆ ಕೊನೆಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟವರು ಮತ್ತು ವಿಶೇಷಚೇತನರು ಸೇರಿ ಒಟ್ಟು ೨೩೬೩ ಮಂದಿ ಮತ ಚಲಾಯಿಸಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೨೨೭ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೧೩೬ ಮಂದಿ ಮತದಾನ ಮಾಡಿದ್ದಾರೆ.