ಚೆಯ್ಯಂಡಾಣೆ, ಮೇ ೬: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾಟದಲ್ಲಿ ಪೊಕ್ಕುಳಂಡ್ರ, ಕುಯ್ಯಮುಡಿ, ದೇವಜನ ಕುಟುಂಬಗಳು ಪ್ರಿಕ್ವಾರ್ಟರ್‌ಗೆ ಪ್ರವೇಶಿಸಿದವು.

ಶನಿವಾರ ನಡೆದ ಮೊದಲ ಪಂದ್ಯಾಟದಲ್ಲಿ ಪೊಕ್ಕುಳಂಡ್ರ ಕುಟುಂಬ ತಂಡ ಮರದಾಳು ತಂಡವನ್ನು ವಿನೋದ್ ಅವರ ಹ್ಯಾಟ್ರಿಕ್ ಗೋಲಿನೊಂದಿಗೆ ೩-೦ ಅಂತರದಿAದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಕುಯ್ಯಮುಡಿ ತಳೂರು ತಂಡವನ್ನು ಭರ್ಜರಿ ೫-೦ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ತಲುಪಿತು. ಪೂಳಕಂಡ ಕುಟುಂಬ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಪ್ಪುರನ ತಂಡವನ್ನು ೩-೧ ಗೋಲಿನಿಂದ ಸೋಲಿಸಿತು.

ಪಡಿಕಲ್ ತಂಡ ಮುಕ್ಕಾಟಿ (ಕೈಕೇರಿ) ತಂಡವನ್ನು ೫-೦ ಗೋಲಿನಿಂದ, ದಂಬೆಕೋಡಿ ತಂಡ ಪೊರೆ ಕುಂಜಿಲನ ತಂಡವನ್ನು ೪-೧ ಗೋಲಿನಿಂದ, ಪೂಳಕಂಡ ತಂಡ ಬೆಪ್ಪುರನ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ೩-೧ ಗೋಲಿನಿಂದ, ಮೇರ್ಕಜೆ ತಂಡ ಕೇನೆರ ತಂಡವನ್ನು ೨-೦ ಗೋಲಿನಿಂದ, ದೇವಜನ ತಂಡ ತೆಕ್ಕಡೆ ತಂಡವನ್ನು ೨-೦ ಗೋಲಿನಿಂದ, ಕುಯ್ಯಮುಡಿ ತಂಡ ಪೂಳಕಂಡ ತಂಡವನ್ನು ೨-೦ ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು.