ಕೊಡಗು ಜಿಲ್ಲೆಯ ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣವಾಗಿದೆ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ.
೨೦೦೬ ರಲ್ಲಿ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿಯ ಪೆರುಂಬಾಡಿಯಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊAಡಿದ್ದ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಇಂದು ಕೊಡಗಿನ ಬಡ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಂಸ್ಥೆಯಾಗಿ ಬಾನೆತ್ತರಕ್ಕೆ ಬೆಳೆದು ನಿಂತಿದೆ. ಶಾಲೆ ಹಾಗೂ ಕಾಲೇಜು ಶಿಕ್ಷಣ ಬರೀ ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳ್ಳದೆ ಎಲ್ಲಾ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿದೆ. ಅತ್ಯುತ್ತಮ ಆಧುನಿಕ ಗುಣಮಟ್ಟದಲ್ಲೇ ಶಿಕ್ಷಣ ನೀಡುತ್ತಾ, ಜಿಲ್ಲೆಗೆ ಕೀರ್ತಿ ತಂದಿದೆ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ. ಸರ್ಕಾರದ ಸಂಬAಧಪಟ್ಟ ಎಲ್ಲಾ ಇಲಾಖೆಗಳಿಂದ ಅಧಿಕೃತವಾಗಿ ನೋಂದಣಿಗೊAಡು ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ.
ಬನಾತ್ ಬಡ ಹೆಣ್ಣು ಮಕ್ಕಳ ಯತೀಂಖಾನದಲ್ಲಿ ಪ್ರಸ್ತುತ ೮೨ ವಿದ್ಯಾರ್ಥಿಗಳು ಇದ್ದು, ಇವರಿಗೆ ಎಲ್ಲಾ ರೀತಿಯ ವಸತಿ ಸೌಕರ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅರಬಿಕ್ ಮದರಸ, ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ, ಎಲ್.ಕೆ.ಜಿ ಹಾಗೂ ಯು.ಕೆ.ಜಿ ಇಂಗ್ಲಿಷ್ ಮೀಡಿಯಮ್, ಪ್ರಾಥಮಿಕ ಶಾಲೆ, ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಪ್ರಥಮ ದರ್ಜೆ ಕಾಲೇಜು, ಕಂಪ್ಯೂಟರ್ ತರಬೇತಿ, ಟೈಲರಿಂಗ್ ತರಬೇತಿ, ಎನ್.ಇ.ಇ.ಟಿ ಹಾಗೂ ಸಿ.ಐ.ಇ.ಟಿ ತರಬೇತಿ ನೀಡಲಾಗುತ್ತಿದೆ. ಎಫ್.ಡಿ.ಎ, ಹಾಗೂ ಎಸ್.ಡಿ.ಎ ಕೋಚಿಂಗ್ ನೀಡಲಾಗುತ್ತಿದೆ. ಅದಲ್ಲದೆ ಹೆಣ್ಣು ಮಕ್ಕಳಿಗೆ ಮೋಟಿವೇಶನಲ್ ತರಗತಿಗಳನ್ನು ನಡೆಸಲಾಗುತ್ತಿದೆ.
ಹೆಣ್ಣು ಮಕ್ಕಳನ್ನು ಶಿಕ್ಷಣದ ಕಡೆಗೆ ಮುಖ ಮಾಡಿಸಿದ ಬನಾತ್ !
ಮುಸ್ಲಿಂ ಸಮಾಜದಲ್ಲಿ ಬಡತನದಿಂದ ದೂರ ಉಳಿದ ಹೆಣ್ಣುಮಕ್ಕಳನ್ನು ಗುರುತಿಸಿ, ಬನಾತ್ ಶಿಕ್ಷಣವನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಸಾಮರ್ಥ್ಯ, ಸಹಾನುಭೂತಿ, ಬದ್ಧತೆ ಮತ್ತು ಆತ್ಮಸಾಕ್ಷಿಯನ್ನು ಅಭಿವೃದ್ಧಿಪಡಿಸಲು, ಮಹಿಳೆಯರ ಮಹತ್ವಾಕಾಂಕ್ಷೆ ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಸ್ಥಾಪನೆಗೊಂಡಿದೆ.
೨೦೦೬ ರಿಂದ ಇದುವರೆಗೆ ಸಾವಿರಾರು ಬಡ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆದಿದ್ದಾರೆ.
ನಾಯಕತ್ವದ, ಗುಣಮಟ್ಟ, ಶಿಸ್ತು, ಆತ್ಮವಿಶ್ವಾಸ ವನ್ನು ಅಭಿವೃದ್ಧಿ ಪಡಿಸುವ ಮೂಲಕ ಸಾಮಾಜಿಕ ಜವಬ್ದಾರಿಯುತ ವ್ಯಕ್ತಿಯನ್ನು ಅಭಿವೃದ್ಧಿಪಡಿಸಲು ಶಂಸುಲ್ ಉಲಮಾ ಎಜುಕೇಶನ್ ಸೊಸೈಟಿ ಪಣತೊಟ್ಟಿದೆ.
ಯುವತಿಯರನ್ನು ಶಿಕ್ಷಣ ಕಡೆಗೆ ಉತ್ತೇಜಿಸುವುದೇ
ಬನಾತ್ ಮುಖ್ಯ ಉದ್ದೇಶ:
ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ ಹಾಗೂ ವಿದ್ಯಾರ್ಥಿ ವೇತನವನ್ನು ಕೂಡ ನೀಡಲಾಗುತ್ತಿದೆ. ಕಾಲೇಜು ಮಟ್ಟದಲ್ಲಿ ನಡೆದ ಪ್ರವೇಶ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಎರಡು ಆಧಾರದ ಮೇಲೆ ನೀಡಲಾಗುತ್ತಿದೆ.
ಶೇ. ೯೦ ರಷ್ಟು ಹಾಗೂ ಅದಕ್ಕಿಂತಲೂ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಹೊರತುಪಡಿಸಿ ಸಂಪೂರ್ಣವಾಗಿ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
ಶೇ. ೭೫ ರಿಂದ ೮೦ ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹೊರತುಪಡಿಸಿ ಶಂಸುಲು ಉಲಮಾ ಎಜುಕೇಶನ್ ಟ್ರಸ್ಟ್ ಶೇ. ೫೦ ರಷ್ಟು ಪ್ರವೇಶ ಶುಲ್ಕ ಉಚಿತವಾಗಿ ನೀಡಲಾಗುತ್ತಿದೆ.
ಮಹಿಳಾ ಪಿಯು ಕಾಲೇಜು ಹಾಗೂ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಪಿಯುಸಿ ವಾಣಿಜ್ಯ, ಇಃಂP, ಇಃಂಅ, ಕಲೆ-ಊಇPS ಹಾಗೂ ವಿಜ್ಞಾನ ವಿಭಾಗದಲ್ಲಿ Pಅಒಃ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪದವಿ ಕೋರ್ಸ್ಗಳಲ್ಲಿ ಬಿ.ಕಾಮ್ ಪದವಿ ಶಿಕ್ಷಣವನ್ನು ಪಡೆಯಬಹುದಾಗಿದೆ.
ಗುಣಮಟ್ಟದ ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣ
ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬ ಉದ್ದೇಶದಿಂದ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಸ್ಥಾಪನೆಗೊಂಡಿದೆ. ಶಿಕ್ಷಣದಿಂದ ದೂರ ಉಳಿದ ಜಿಲ್ಲೆಯ ಬಡ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಬನಾತ್ ಮಹತ್ತರ ಪಾತ್ರವಹಿಸುತ್ತಿದೆ.
ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ದೂರ ಉಳಿಯುತ್ತಿರುವ ಹೆಣ್ಣು ಮಕ್ಕಳನ್ನು ಗುರುತಿಸಿ ಬನಾತ್ ಶಿಕ್ಷಣ ವನ್ನು ನೀಡಿ, ಇಡೀ ಜಿಲ್ಲೆಗೆ ಮಾದರಿಯಾಗಿದೆ.
ಗುಣಮಟ್ಟದ ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಮುಖ್ಯ ಉದ್ದೇಶವಾಗಿದೆ.
ಮೂವತ್ತು ಬಡ ಹೆಣ್ಣು ಮಕ್ಕಳ ಉಚಿತ ಮದುವೆ
ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದಲ್ಲದೆ, ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿಯ ಯತೀಂಖಾನದಲ್ಲಿ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ಉಚಿತ ವಿವಾಹವನ್ನು ಮಾಡಿಕೊಟ್ಟು, ಬಡ ಕುಟುಂಬಗಳ ಕಣ್ಣೀರೊರೆಸುವ ಕಾರ್ಯವನ್ನು ಕೂಡ ಮಾಡಿ ಸಮಾಜಕ್ಕೆ ಮಾದರಿಯಾಗಿದೆ.
ಯತೀಂಖಾನದಲ್ಲಿ ಶಿಕ್ಷಣ ಪಡೆದ, ಬಡ ಹೆಣ್ಣುಮಕ್ಕಳನ್ನು ಗುರುತಿಸಿ ಇದುವರೆಗೆ ಮೂವತ್ತು ಹೆಣ್ಣುಮಕ್ಕಳ ಉಚಿತ ವಿವಾಹವನ್ನು ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ನೆರವೇರಿಸಿಕೊಟ್ಟಿದೆ.
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ. ೧೦೦, ವಾಣಿಜ್ಯ ವಿಭಾಗದಲ್ಲಿ ಶೇ. ೯೮, ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. ೧೦೦ ರಷ್ಟು ಫಲಿತಾಂಶವನ್ನು ಶಂಸುಲ್ ಉಲಮಾ ಎಜುಕೇಶನ್ ಸೊಸೈಟಿ ಪಡೆದುಕೊಂಡಿದೆ. ಇಂಗ್ಲೀಷ್ ಮೀಡಿಯಂ ಪ್ರಾಥಮಿಕ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ವಾಹನದ ವ್ಯವಸ್ಥೆ ಕೂಡ ಇದೆ. ಬಡ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ, ಯುವತಿಯ ರನ್ನು ಮುಖ್ಯವಾಹಿನಿಗೆ ಪರಿಚಯಿಸುತ್ತಿರುವ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿಯ ೨೦೨೩ ಹಾಗೂ ೨೪ರ ದಾಖಲಾತಿ ಪ್ರಾರಂಭಗೊAಡಿದ್ದು, ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ೮೨೮೯೮೮೭೬೬೮, ೯೪೮೨೨೩೯೮೭೦, ೯೪೪೮೩೨೫೭೮೭, ೯೪೪೮೬೪೭೫೮೭.
-ಕೆ. ಎಂ. ಇಸ್ಮಾಯಿಲ್ ಕಂಡಕರೆ