ಮಡಿಕೇರಿ, ಮೇ ೬: ಈಗಾಗಲೇ ತಾ.೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಚುನಾವಣೆ ಸುಸೂತ್ರವಾಗಿ ನಡೆಸಲು ಅಧಿಕಾರಿ ವರ್ಗದವರೂ ಸಿದ್ಧಗೊಂಡಿದ್ದಾರೆ. ಮತದಾನದ ಕುರಿತು ವಿಭಿನ್ನವಾಗಿ ಈ ಬಾರಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳು ಜರುಗುತ್ತಿವೆ. ಅಧಿಕೃತ ಮತದಾರರ ಚೀಟಿಯನ್ನೂ ಈ ಬಾರಿ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಮನೆ-ಮನೆಗೆ ವಿತರಿಸಲಾಗುತ್ತಿದೆ. ಇವೆಲ್ಲ ಮಾಡಿದರೂ ಮತದಾರರಿಗೆ ಗೊಂದಲಗಳಿದ್ದಲ್ಲಿ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ‘eಟeಛಿಣಡಿoಟseಚಿಡಿಛಿh.iಟಿ’ ಮೂಲಕ ಮತದಾರರು ಯಾವ ವಾರ್ಡ್ಗೆ ಸೇರಿದ್ದು, ಎಲ್ಲಿ ತಮ್ಮ ಮತವನ್ನು ಚಲಾಯಿಸಬೇಕೆಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಈ ಸೈಟ್‌ಗೆ ಹೋಗಿ ಅದರಲ್ಲಿ ನಿಮ್ಮ ಹೆಸರು, ಸಂಬAಧಿಕರ ಹೆಸರು (ಪತಿ ಅಥವಾ ತಂದೆ), ಹುಟ್ಟಿದ ದಿನಾಂಕ, ರಾಜ್ಯ, ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರ (ಉದಾ: ಕೊಡಗಿನಲ್ಲಿ ವೀರಾಜಪೇಟೆ ಅಥವಾ ಮಡಿಕೇರಿ)ಯನ್ನು ನಮೂದಿಸಿದರೆ, ಮತದಾರನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ವಿಧಾನಸಭಾ ಕ್ಷೇತ್ರದ ಹೆಸರು, ಸಂಖ್ಯೆ, ಮತದಾನ ಮಾಡುವ ಸ್ಥಳ, ಸಮಯ ಹಾಗೂ ದಿನಾಂಕದ ವಿವರಗಳು ನಿಮಗೆ ಕ್ಷಣಾರ್ಧದಲ್ಲಿ ದೊರಕಲಿವೆ. ಇದರೊಂದಿಗೆ ಚುನಾವಣಾ ಅಧಿಕಾರಿಗಳ ಹೆಸರಿನ ಮಾಹಿತಿ ಕೂಡ ಲಭ್ಯವಾಗಲಿದೆ.

ವೆಬ್‌ಸೈಟ್‌ನಲ್ಲಿ ಎರಡು ಆಯ್ಕೆಗಳಿದ್ದು, ಮೊದಲನೆಯದರಲ್ಲಿ ಈಗಾಗಲೇ ತಿಳಿಸಿರುವಂತೆ ನಿಮ್ಮ ಹೆಸರು ಇತ್ಯಾದಿ ಮಾಹಿತಿ ನೀಡಿ ಮತದಾನ ಬೂತ್ ವಿವರ ಪಡೆಯಬಹುದಾಗಿದೆ. ೨ನೆ ಆಯ್ಕೆಯಲ್ಲಿ, ನಿಮಗೆ ನಿಮ್ಮ ವೋಟರ್ ಐ.ಡಿ ಸಂಖ್ಯೆ (ಇPIಅ ಸಂಖ್ಯೆ) ಗೊತ್ತಿದ್ದಲ್ಲಿ ಅದನ್ನು ನೀಡಿ ಸುಲಭವಾಗಿ ನೀವು ಎಲ್ಲಿ ಮತದಾನ ಮಾಡಲಿದ್ದೀರಿ ಎಂಬ ಮಾಹಿತಿ ಪಡೆಯಬಹುದಾಗಿದೆ.