ಮೇ ೫: ರಾಜ್ಯ ಚುನಾವಣಾ ಆಯೋಗ ನಿಯಮ ದಂತೆ ನಮ್ಮ ನಡೆ ಮತಕಟ್ಟೆಯ ಕಡೆಗೆ ಕಾರ್ಯಕ್ರಮದಡಿಯಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ಗ್ರಾಮದ ಎಲ್ಲಾ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸುವ ಬಗ್ಗೆ ಮತ್ತು ನೂತನವಾಗಿ ಮತ ಚಲಾವಣೆ ಮಾಡುವ ಯುವಕ, ಯುವತಿಯರಿಗೆ ಮತದಾನದ ಬಗ್ಗೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭ ಗ್ರಾಮದ ೧೦೨ ವರ್ಷದ ವಯೋವೃದ್ಧೆ ಗೌರವ ಮತ್ತು ಅಭಿವೃದ್ಧಿ ಅಧಿಕಾರಿ ವೀಣಾ ಸೇರಿದಂತೆ ಗ್ರಾಮದ ಮತದಾರರು ಹಾಜರಿದ್ದರು.