ಚೆಟ್ಟಳ್ಳಿ, ಮೇ ೫: ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಭಾರತೀಯ ಜನತಾಪಕ್ಷದ ಆಡಳಿತದ ಬಗ್ಗೆ ಎಲ್ಲರಿಗೂ ತಿಳಿದಿದ್ದು ಭಾರತೀಯ ಜನತಾ ಪಕ್ಷವೇ ಗೆಲುವಿನ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಚೆಟ್ಟಳ್ಳಿ ಪಟ್ಟಣ, ಕೂಡ್ಲೂರು, ಕಂಡಕರೆ, ಕಾಫಿ ಬೋರ್ಡ್, ಪೊನ್ನತ್ಮೊಟ್ಟೆಗಳಲ್ಲಿ ಮತ ಪ್ರಚಾರ ನಡೆಸಿ ರೋಡ್ ಶೋ ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಚೆಟ್ಟಳ್ಳಿ ಶಕ್ತಿ ಕೇಂದ್ರದ ಪ್ರಮುಖ್ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ರಾಷ್ಟಿçÃಯವಾದದ ಚಿಂತನೆ ಹೊಂದಿರುವ ಬಿ.ಜೆ.ಪಿ.ಯನ್ನು ಗೆಲ್ಲಿಸಲು ಸದೃಢ ಕಾರ್ಯಕರ್ತರಿದ್ದಾರೆ ಎಂದರು. ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆ ಯನ್ನು ಮುಂದಿಟ್ಟು ಮತ ಕೇಳುತಿ ದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಈ ಬಾರಿ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷ ಗೆಲುವು ಸಾಧಿಸಲಿದೆ ಎಂದು ಪಕ್ಷದ ಮುಖಂಡ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.
ಈ ಸಂದರ್ಭ ಸ್ಥಳೀಯ ಬಿಜೆಪಿ ಪಕ್ಷದ ಹಿರಿಯರಾದ ಮುಳ್ಳಂಡ ಸನ್ನಿ ಅಯ್ಯಪ್ಪ, ಬೊಪ್ಪಟೀರ ಅಪ್ಪುಟ್ಟ ನಾಣಯ್ಯ, ಚೆಟ್ಟಳ್ಳಿ ವಾರ್ಡ್ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ, ಶಕ್ತಿ ಕೇಂದ್ರದ ಸಹ ಪ್ರಮುಖ್ ರವಿ ಎನ್.ಎಸ್., ಜಿಲ್ಲಾ ಯುವ ಘಟಕದ ಅಧ್ಯಕ್ಷ ದರ್ಶನ್ ಜೋಯಪ್ಪ, ಸೋಮವಾರ ಪೇಟೆ ಮಂಡಲ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್, ಸೋಮವಾರ ಪೇಟೆ ಮಂಡಲ ಅಧ್ಯಕ್ಷ ಮನು ಕುಮಾರ್ ರೈ, ಸೋಮವಾರಪೇಟೆ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ಮೇರಿ ಅಂಬುದಾಸ್, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.